ಬೆಂಗಳೂರು : ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ 37 ಜನ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡ್ತಿರುವುದು ಸಿಎಂ ಗೆ ಗೊತ್ತು.ಅಧಿಕಾರಿಗಳಿಗೂ ಗೊತ್ತು ಅವರ ಅನುಮತಿ ಪಡೆದು ಪಾದಯಾತ್ರೆ ಮಾಡ್ತಿದ್ದೇವೆ ಆದರೆ ಈಗ ಎಫ್ಐಆರ್ ದಾಖಲು ಮಾಡಿದ್ದಾರೆ.ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮೇಕೆದಾಟು 2.0: ಮುರುಘಾ ಶ್ರೀಗಳು ಸೇರಿ ಅನೇಕ ಸ್ವಾಮೀಜಿಗಳ ಪಾದಯಾತ್ರೆ
ಬೆಂಗಳೂರಿನಲ್ಲಿ ಫ್ಲಕ್ಸ್ ತೆಗಿಸುವ ಕೆಲಸ ಮಾಡ್ತಿದ್ದಾರೆ. ನಮ್ಮ ಮನೆಯ ರಸ್ತೆಯಿಂದ ವಿಧಾನ ಸೌಧದವರೆಗೂ ಇವರ ಫ್ಲೆಕ್ಸ್ ನೋಡಿದ್ದೇನೆ.ಮೊನ್ನೆ ಮಿನಿಸ್ಟರ್ ಮತ್ತು ಸಂಸದ ರಾಘವೇಂದ್ರ ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದರು .ಭಜರಂಗದಳದವರು ಬೀದಿಗಿಳಿದು ಪ್ರತಿಭಟನೆ ಮಾಡಿದರು ಯಾರ ಮೇಲೂ ಕೇಸ್ ಹಾಕಿಲ್ಲ. ನಾವು ಜನರ ಪರ ಹೋರಾಟ ಮಾಡಿದ್ರೆ ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.
ಕೇಸ್ ಹಾಕ್ಲಿ ನಡೆದುಕೊಂಡೆ ಜೈಲಿಗೆ ಹೋಗ್ತೀವಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನ್ನು ನೀವು ಸಾಯಿಸಬಹುದು ಆದ್ರೆ ನನ್ನ ಮತ್ತು ಸಿದ್ದರಾಮಯ್ಯ ಅಂಥವರು ನೂರಾರು ಜನ ಹುಟ್ಟುತ್ತಾರೆ. ಎಫ್ಐಆರ್ ಕೇಸ್ ಗೆ ನಾವು ಹೆದರಲ್ಲ. ನಮ್ಮದು ಗಾಂಧಿ ತತ್ವ ಎಂದು ಹೇಳಿದರು.