Advertisement

ಬೆಳೆ ಸಾಲ ತೀರಿಸದ ರೈತರ ವಿರುದ್ಧ ದಾವೆ

06:50 AM Dec 07, 2017 | Team Udayavani |

ಮಂಡ್ಯ: ಜಿಲ್ಲೆಯನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ರೈತರಿಗೆ ಸಾಲದ ನೋಟಿಸ್‌ ಜಾರಿಗೊಳಿಸದಂತೆ ಆದೇಶ ಹೊರಡಿಸಿದ್ದರೂ ವಿಜಯಾ ಬ್ಯಾಂಕ್‌ ಬೆಳೆ ಸಾಲ ಮರುಪಾವತಿಗೆ ರೈತರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದೆ. 

Advertisement

ಸಾಲ ಮರುಪಾವತಿ ಮಾಡದ ರೈತರಿಗೆ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದ್ದು, ವಕೀಲರೊಂದಿಗೆ ವಿಚಾರಣೆಗಾಗಿ
ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಇದುವರೆಗೆ ಸಾಲ ತೀರಿಸದ ರೈತರಿಗೆ ನೋಟಿಸ್‌ ಜಾರಿಗೊಳಿಸುತ್ತಿದ್ದ ಬ್ಯಾಂಕುಗಳು ಇದೀಗ ದಾವೆ ಹೂಡುವ
ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ.

ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಪಂಚಾಯಿತಿಯ ಹಂಪಾಪುರ, ಕರಡಿಕೊಪ್ಪಲು, ಗುಡಿಗೇನಹಳ್ಳಿ, ಮಲ್ಲಾಘಟ್ಟ
ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ. ರೈತರ ಮನೆಗೆ ಬಂದು ಸಾಲ
ಬಾಕಿ ಉಳಿದಿರುವ ಬಗ್ಗೆ ಸಹಿಯನ್ನೂ ಪಡೆಯದೇ ರೈತರ ಗಮನಕ್ಕೂ ತಾರದೆ ವಿಜಯಾಬ್ಯಾಂಕ್‌ ಅಧಿಕಾರಿಗಳು
ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ
ಇತ್ತೀಚೆಗೆ ನಡೆದ ರೈತ ಮುಖಂಡರ ಸಭೆಯಲ್ಲಿ ಬೆಳೆ ಸಾಲ ಪಡೆದ ರೈತರಿಗೆ ನೋಟಿಸ್‌ ಜಾರಿಗೊಳಿಸುವುದಿಲ್ಲ ಹಾಗೂ ಚಿನ್ನಾಭರಣವನ್ನೂ ಹರಾಜು ಮಾಡುವುದಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೂ,
ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಗಾಳಿಗೆ ತೂರಿರುವ ಅಧಿಕಾರಿಗಳು ರೈತರ ವಿರುದಟಛಿ ದಾವೆ ಹೂಡುವುದನ್ನು
ಮುಂದುವರಿಸುತ್ತಾ ಶೋಷಣೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next