ಜೈಪುರ: ಗೇಮಿಂಗ್ ಆ್ಯಪ್ ನಲ್ಲಿ ಪರಿಚಯವಾದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ವಿವಾಹಿತ ಹಿಂದೂ ಮಹಿಳೆಯನ್ನು ಮತಾಂತರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ರಾಜಸ್ಥಾನದ ಸಿಕಾರ್‌ನ ಹಿಂದೂ ವಿವಾಹಿತ ಮಹಿಳೆಯೊಬ್ಬಳು ಫ್ರೀ ಫೈರ್ ಎಂಬ ಮೊಬೈಲ್ ಗೇಮ್ ನಲ್ಲಿ ತಯ್ಯಬ್ ಎಂಬಾತನನ್ನು ಭೇಟಿಯಾಗಿದ್ದಾಳೆ. ತಯ್ಯಬ್ ಅಲಿಗಢ ಮೂಲದವನು. ಗಾರ್ಮೆಂಟ್ಸ್ ಶಾಪ್ ವೊಂದನ್ನು ಹೊಂದಿದ್ದಾನೆ ಎಂದು ಮಹಿಳೆಯೊಂದಿಗೆ ಪರಿಚಯ ಮಾಡಿಕೊಂಡಿದ್ದ. ಗೇಮಿಂಗ್ ನಲ್ಲಿ ಚಾಟ್ ಮಾಡುತ್ತಾ ಪರಸ್ಪರ ಆತ್ಮೀಯರಾಗಿ ನಂಬರ್ ಬದಲಾಯಿಸಿಕೊಂಡಿದ್ದಾರೆ.
ಈ ವಿಚಾರ ಮಹಿಳೆಯ ಮನೆಯವರಿಗೆ ಗೊತ್ತಾಗಿದೆ.ಮಹಿಳೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತಯ್ಯಬ್ ಯನ್ನು ಮಹಿಳೆಗೆ ನಮಾಜ್ ಹೇಗೆ ಮಾಡುವುದು ಎನ್ನುವುದರ ಬಗ್ಗೆ ಹೇಳುತ್ತಿದ್ದ. ಅದಕ್ಕೆ ಸಂಬಂಧಪಟ್ಟ ಲಿಂಕ್ ಗಳನ್ನು ಕಳುಹಿಸುತ್ತಿದ್ದ. ಹಿಂದೂ ಧರ್ಮವನ್ನು ಅನುಸರಿಸಬಾರದು. ಬಿಂದಿಯನ್ನು ಇಡಬಾರದೆಂದು ಹೇಳುತ್ತಿದ್ದ. ಮಹಿಳೆಯನ್ನು ಆತ ಮುಸ್ಲಿಂ ಹೆಸರಿನಲ್ಲಿ ಕರೆಯುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ಕುಟುಂಬದವರು ಈಗ ದೂರನ್ನು ಹಿಂಪಡೆದಿದ್ದಾರೆ ಎಂದು ಸಿಕರ್‌ನ ಪೊಲೀಸ್ ವರಿಷ್ಠಾಧಿಕಾರಿ ಕರಣ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: Goods trains collide: ಗೂಡ್ಸ್ ರೈಲುಗಳ ನಡುವೆ ಢಿಕ್ಕಿ: ಹಳಿತಪ್ಪಿದ 12 ಬೋಗಿಗಳು
ನನ್ನ ಸಹೋದರಿ ಪ್ರಕರಣವನ್ನು ಮುಂದುವರಿಸಲು ಬಯಸದ ಕಾರಣ, ಕೇಸ್ ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ಮಹಿಳೆಯ ಸಹೋದರ ʼಇಂಡಿಯಾ ಟುಡೇʼ ಗೆ ಹೇಳಿದ್ದಾರೆ.
ಪೊಲೀಸರಿಗೆ ದೂರು ನೀಡುವ ಮೊದಲು ಮನೆಯವರು ತಯ್ಯಬ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ತಯ್ಯಬ್ ಸ್ನೇಹಿತರೊಬ್ಬರು ಕರೆಗೆ ಪ್ರತಿಕ್ರಿಯಿಸಿದ್ದು, ತಯ್ಯಬ್ ಅಂತಹ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಮಹಿಳೆಯ ಮನೆಯವರಿಗೆ ಹೇಳಿರುವುದಾಗಿ ವರದಿ ತಿಳಿಸಿದೆ.