ಬೆಂಗಳೂರು: ಅನುಮತಿ ಪಡೆಯದೆ ಕ್ಲಬ್‌ನಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಇಂದಿರಾನಗರ ಕ್ಲಬ್ ಹಾಗೂ ಅದರ ಅಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‌ಎಸ್ ರೆಡ್ಡಿ ಸೇರಿ ನಾಲ್ವರ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಮೂಲದ ನೋವೆಕ್ಸ್ ಕಮ್ಯೂನಿಕೇಷನ್ ಪ್ರೈವೇಟ್ ಲಿಮಿಟೆಡ್‌ನ ಪ್ರತಿನಿಧಿ ಸಂತೋಷ್ ಎಂಬುವರು ನೀಡಿದ ದೂರಿನ ಮೇರೆಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಇಂದಿರಾನಗರ ಕ್ಲಬ್, ಅದರ ಅಧ್ಯಕ್ಷ ಬಿಎನ್‌ಎಸ್ ರೆಡ್ಡಿ, ಕಾರ್ಯದರ್ಶಿ ನಾಗೇಂದ್ರ, ಜನರಲ್ ಮ್ಯಾನೆಜರ್ ಶಾಮ್ ಸುಂದರ್ ವಿರುದ್ಧ ಪ್ರಕರಣ ದಾಖಲಾಗಿದೆ.
ನೋವೆಕ್ಸ್ ಕಮ್ಯೂನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಹಿಂದಿಯ ಬಾರ್ ಬಾರ್ ದೇಖೋ ಸಿನಿಮಾದ ಕಾಲಾ ಚಸ್ಮಾ, ಖಳನಾಯಕ್ ಚಿತ್ರದ ಚೋಲಿ ಕೆ ಪೀಚೆ, ಫ್ರಾಡ್ ಸೈಯ್ನಾ ಚಿತ್ರದ ಚಮ್ಮಾ ಚಮ್ಮಾ, ಆರ್.ರಾಜ್‌ಕುಮಾರ್ ಚಿತ್ರದ ಗಂಧೀ ಬಾತ್ ಹಾಡುಗಳನ್ನು ಯಾವುದೇ ಆಡಿಯೋ, ಸಭೆ ಸಮಾರಂಭ, ರೆಸ್ಟೋರೆಂಟ್, ಕ್ಲಬ್, ಡಿಸ್ಕೋಥೆಕ್, ಇವೆಂಟ್, ಜಾಕಿ ಮಾಲ್‌ಗಳಲ್ಲಿ ಹಾಡುವ ಅಥವಾ ಪ್ರಸಾರ ಮಾಡುವ ಅಧಿಕೃತ ಹಕನ್ನು ಈರೋಸ್, ಜೀ ಎಂಟರ್‌ಟ್ರೈನ್‌ಮೆಂಟ್, ಟಿಪ್ಸ್ ಕಂಪನಿಯಿಂದ ಪಡೆದಿದೆ.
ಆದರೆ 2019ರ ಮಾರ್ಚ್ 21ರಂದು ಇಂದಿರಾನಗರದ ಕ್ಲಬ್ ನಲ್ಲಿ ನಡೆದಿದ್ದ ಮಹೋಲಿ ಎಕ್ಸ್ ಡಿವೈನ್ 2019 ಕಾರ್ಯಕ್ರಮದಲ್ಲಿ ಈ ಹಾಡುಗಳನ್ನು ಪ್ರಸಾರ ಮಾಡಲಾಗಿದ್ದು, ಕಾಪಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ. ಈ ಸಂಬಂಧ ಈ ಮೂವರು ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತೋಷ್ ಎಫ್ಐಆರ್‌ನಲ್ಲಿ ಉಲ್ಲೇಖೀಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.