Advertisement

ದಲಿತ ಕುಟುಂಬಗಳ ವಿರುದ್ಧ ಕೇಸ್ : ಮರು ತನಿಖೆಗೆ ಒತ್ತಾಯ

11:34 AM Sep 22, 2019 | Suhan S |

ಕನಕಗಿರಿ: ಸಮೀಪದ ತಿಪ್ಪನಾಳ ಕೆರೆಯಲ್ಲಿ 60 ವರ್ಷಗಳಿಂದ 26 ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿದ್ದವು. ಆದರೆ ನಕಲಿ ದಾಖಲೆ ಸೃಷ್ಟಿಸಿ 26 ದಲಿತ ಕುಟುಂಬಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದು ಒತ್ತಾಯಿಸಿ ಅಖೀಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ನಂತರ ಪ್ರಗತಿಪರ ಹೋರಾಟಗಾರ ಜೆ. ಭಾರಧ್ವಾಜ್‌ ಮಾತನಾಡಿ, ಸಮೀಪದ ತಿಪ್ಪನಾಳ ಕೆರೆಯಲ್ಲಿರುವ ಚಿರಸ್ಥಾಯಿ ಸೂರ್ಯ ಕಂಪನಿಯು ಡಿ.ಕೆ. ಶಿವಕುಮಾರ ಹಾಗೂ ಲಕ್ಷೀ¾ ಹೆಬ್ಟಾಳ್ಕರ್‌ ಪಾಲುದಾರಿಕೆಯಲ್ಲಿದೆ. ಆದರೆ 60 ವರ್ಷಗಳಿಂದ ಆ ಭೂಮಿಯಲ್ಲಿ 26 ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಚಿರಸ್ಥಾಯಿ ಸೂರ್ಯಲಿ. ಕಂಪನಿಗೆ ಭೂಮಿ ನೀಡಿ ದಲಿತ ಕುಟುಂಬಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಈ ಭೂ ವಿವಾದ ಪ್ರಕರಣವನ್ನು ಮರು ತನಿಖೆಯನ್ನು ಮಾಡಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು. ಬಳಿಕ ಅಖೀಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆಂಚಪ್ಪ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಡಿ.ಕೆ. ಶಿವಕುಮಾರ ಪಾಲುದಾರಿಕೆಯ ಅನೇಕ ಕಂಪನಿಗಳಿದ್ದು, ಅವುಗಳಲ್ಲಿ ತಿಪ್ಪನಾಳ ಕೆರೆಯ ಭೂಮಿಯನ್ನು ಅಕ್ರಮ ದಾಖಲೆಗಳಿಂದ ಕಬಳಿಸಿ ಸೋಲಾರ್‌ ಪ್ಲಾಂಟ್‌ಗಳನ್ನು ಅಳವಡಿಸಿದ್ದಾರೆ. ಆ ಭೂಮಿಯನ್ನು ನಂಬಿದ 26 ದಲಿತ ಕುಟುಂಬಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಬೀದಿಪಾಲು ಮಾಡಿದ್ದಾರೆ. ಕೂಡಲೇ ಆ ಪ್ರಕರಣವನ್ನು ಮರು ತನಿಖೆ ಮಾಡಬೇಕೆಂದರು.

ಪಾಮಣ್ಣ ಅರಳಿಗನೂರು, ಸಣ್ಣ ಹನುಮಂತಪ್ಪ, ನೀಲಕಂಠ ಬಡಿಗೇರ, ಪಂಪಾಪತಿ ಜಾಲಿಹಾಳ, ಚಂದ್ರಶೇಖರ ಸೋಡಿ ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next