Advertisement

ಬಜರಂಗ ದಳ ಕಾರ್ಯಕರ್ತರ ವಿರುದ್ಧ ಕೇಸು ದಾಖಲು : ಖಂಡನೆ

10:40 PM Jun 27, 2019 | Sriram |

ಬದಿಯಡ್ಕ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಘಟನೆಯನ್ನು ತಡೆದ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಬದಿಯಡ್ಕ ಪೊಲೀಸರು ದಾಖಲಿಸಿರುವ ಸುಳ್ಳು ಕೇಸುಗಳನ್ನು ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದೆಂದು ವಿಶ್ವಹಿಂದೂ ಪರಿಷತ್‌ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಿಳಿಸಿದರು.

Advertisement

ಬುಧವಾರ ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ರಿಗೆ ಮನವಿ ನೀಡಿ ಮಾಧ್ಯಮ ದವರೊಡನೆ ಅವರು ಮಾತನಾಡಿ ದರು. ಅಕ್ರಮ ವಾಗಿ ಗೋ ಸಾಗಾಟ ಮಾಡುವಾಗ ಅದನ್ನು ತಡೆದ ಪ್ರಕರಣ ವನ್ನು ಬದಿಯಡ್ಕ ಪೊಲೀಸರು ಬಜರಂಗ ದಳದ ಕಾರ್ಯಕರ್ತರಾದ ವಿಟ್ಲ ಪ್ರಖಂಡ ಸಂಚಾಲಕ ಅಕ್ಷಯ್‌ ರಜಪೂತ್‌ ಮತ್ತು ಇತರರ ಮೇಲೆ ದರೋಡೆ ಪ್ರಕರಣ ಎಂದು ಮೊಕದ್ದಮೆ ಯನ್ನು ದಾಖಲಿಸಿರುವುದು ಖಂಡನೀಯ. ಬದಿಯಡ್ಕ ಪೊಲೀಸರ ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್‌ ಬಲವಾಗಿ ವಿರೋಧಿಸುತ್ತದೆ. ತತ್‌ಕ್ಷಣ ಪೊಲೀಸ್‌ ಅಧಿಕಾರಿಗಳು ಬಜರಂಗದಳದ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸನ್ನು ವಾಪಸು ಪಡೆಯಲು ಆಗ್ರಹಿಸುತ್ತೇವೆ ಎಂದರು.

ಅಹಿತಕರ ಘಟನೆಗಳಿಗೆ ಅಕ್ರಮ ಗೋ ಸಾಗಾಟ, ಗೋಹತ್ಯೆ, ಗೋಕಳ್ಳತನ ಕಾರಣ ಕಳೆದ ಹಲವಾರು ವರ್ಷಗಳಿಂದ ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಅಕ್ರಮ ಗೋಸಾಗಾಟ ಗೋಹತ್ಯೆ, ಗೋ ಕಳ್ಳತನ ಪ್ರಮುಖ ಕಾರಣ ವಾಗಿದ್ದು, ಈ ಅಕ್ರಮಗಳನ್ನು ತಡೆಯುವಲ್ಲಿ ಸರಕಾರ, ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಪೊಲೀಸ್‌ ಇಲಾಖೆಯ ವೈಫ‌ಲ್ಯವನ್ನೇ ಅಸ್ತ್ರವಾಗಿ ಬಳಸಿ ಗೋಕಳ್ಳರು ರಾಜಾರೋಷವಾಗಿ ಗೋ ಸಾಗಾಟ, ಗೋಹತ್ಯೆ, ಗೋಕಳ್ಳತನ ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನೇತಾರರಾದ ರವೀಶ್‌ ತಂತ್ರಿ ಕುಂಟಾರು, ಬಜರಂಗ ದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ಬಜರಂಗ ದಳ ಕಾಸರಗೋಡು ಜಿಲ್ಲಾ ಸಂಯೋಜಕ ಸುರೇಶ್‌ ಶೆಟ್ಟಿ ಪರಂಕಿಲ, ಬದಿಯಡ್ಕ ಬಜರಂಗ ದಳ ಸಂಯೋಜಕ ಸುನೀಲ್‌ ಶೆಟ್ಟಿ, ಭಾಸ್ಕರ ಬದಿಯಡ್ಕ, ಹರೀಶ್‌, ಚಿತ್ತರಂಜನ್‌, ಪ್ರಸಾದ ಕನಕಪ್ಪಾಡಿ, ಶರತ್‌ ಶೆಟ್ಟಿ ವಳಮಲೆ, ರೂಪೇಶ ಶೆಟ್ಟಿ, ಅನಿಲ್‌ ಕುಟ್ಟ ಹಾಗೂ ಕಾರ್ಯಕರ್ತರು ಜತೆಗಿದ್ದರು.

Advertisement

ಸುಳ್ಳು ಮೊಕದ್ದಮೆಗಳಿಗೆ ಖಂಡನೆ
ದನಗಳನ್ನು ಸಾಗಾಟ ಮಾಡಲು ಅನುಸರಿಸ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟ ಮಾಡಿರುವುದನ್ನು ತಡೆದ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಯನ್ನು ಹೂಡಿರುವುದು ಖಂಡನೀಯವಾಗಿದೆ. ಕೇರಳದಲ್ಲಿ ಅದೆಷ್ಟೋ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ಬಲವಾದ ಸಾಕ್ಷಿಯಿದ್ದರೂ ಕ್ರಮ ಕೈಗೊಳ್ಳದೇ ಮೂಕ ಪ್ರಾಣಿಯಾದ ಗೋವಿನ ರಕ್ಷಣೆಗಿಳಿದ ಕಾರ್ಯಕರ್ತರ ಮೇಲೆ ದರೋಡೆ ಪ್ರಕರಣವನ್ನು ದಾಖಲಿಸಿರುವುದನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಹಿಂದೂ ನೇತಾರ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ.

ರಸ್ತೆಗಿಳಿದು ಹೋರಾಟ
ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಅಕ್ರಮ ಗೋಸಾಗಾಟ, ಗೋಕಳ್ಳತನಕ್ಕೆ ಕಡಿವಾಣ ಹಾಕದಿದ್ದರೆ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಎಲ್ಲಾ ಹಿಂದೂ ಸಂಘಟನೆಗಳು ಗೋಪ್ರೇಮಿಗಳೊಂದಿಗೆ ನ್ಯಾಯ ಸಿಗುವ ತನಕ ರಸ್ತೆಗಿಳಿದು ಹೋರಾಟದ ಮುನ್ನೆಚ್ಚರಿಕೆಯನ್ನು ವಿಶ್ವಹಿಂದೂ ಪರಿಷತ್‌ ನೀಡುತ್ತಿದೆ .
-ಶರಣ್‌ ಪಂಪ್‌ವೆಲ್‌
ಕಾರ್ಯದರ್ಶಿ
ವಿಹಿಂಪ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next