ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕಿರಾತಕ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಲೆಯಾಳಂ ಮೂಲದ ನಟಿ ಓವಿಯಾ ಹೆಲೆನ್ ವಿರುದ್ಧ ದೂರು ದಾಖಲಾಗಿದೆ.
ಇತ್ತೀಚೆಗಷ್ಟೇ ತಮಿಳುನಾಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾಗ ನಟಿ ಓವಿಯಾ “ಗೋ ಬ್ಯಾಕ್ ಮೋದಿ’ ಎಂದು ಟ್ವೀಟ್ ಮಾಡಿದ್ದರು. ಓವಿಯಾ ಅವರ ಈ ಟ್ವೀಟ್ ಅನ್ನು 19ಸಾವಿರಕ್ಕೂ ಅಧಿಕ ಮಂದಿ ರೀ-ಟ್ವೀಟ್ ಮಾಡಿದ್ದಾರೆ. 59 ಸಾವಿರಕ್ಕೂ ಅಧಿಕ ಲೈಕ್ಸ್ ಮಾಡಿದ್ದಾರಂತೆ. ಇದರಿಂದ ಅನೇಕರು ಗುಂಪು ಸೃಷ್ಟಿ ಮಾಡಿದ್ದಾರೆ, ಸಾರ್ವಜನಿಕವಾಗಿ ಕಲಹ ಉಂಟಾಗಿದೆ.
ಇದನ್ನೂ ಓದಿ:‘ಪುರುಷೋತ್ತಮ’ನಾದ ಜಿಮ್ ರವಿ: ಸಹ ನಟನಿಂದ ನಾಯಕ ನಟನಾಗಿ ಪ್ರಮೋಶನ್
ಹೀಗಾಗಿ ಸಾರ್ವಜನಿಕವಾಗಿ ಪ್ರಧಾನ ಮಂತ್ರಿಗೆ ಅಗೌರವ ತೋರಿಸಿದ್ದಕ್ಕಾಗಿ ನಟಿ ಓವಿಯಾ ಹೆಲೆನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳ ಚಿತ್ರಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಓವಿಯಾ, ಇತ್ತೀಚೆಗೆ ಸಿನಿಮಾಕ್ಕಿಂತ ಬೇರೆ ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
ಇದನ್ನೂ ಓದಿ:ಸದ್ದು ಮಾಡುತ್ತಿದೆ ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್