ಚಿಕ್ಕಮಗಳೂರು: 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 17 ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಶೃಂಗೇರಿ ತಾಲೂಕು ಗೋಚವಳ್ಳಿ ಗ್ರಾಮದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಎನ್ನುವವರು ದೂರು ನೀಡಿದ್ದಾರೆ.
ಇದನ್ನೂ ಓದಿ:ಮನೆ ಕಳೆದುಕೊಳ್ಳುವ ಭೀತಿ: ಮೃತ ತಾಯಿಯ ದೇಹವನ್ನು 10 ವರ್ಷ ಫ್ರೀಜರ್‌ನಲ್ಲಿಟ್ಟಿದ್ದ ಮಹಿಳೆ!
ಕಿಕ್ರೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್ ಆನೆಗುಂದ, ವಿಕಾಸ್ ಹೊಳಿಕೊಪ್ಪ, ಮಣಿಕಂಠ ಹೊಳಿಕೊಪ್ಪ, ಸಂಪತ್ ನೆಮ್ಮಾರ್, ಅಶ್ವಥ್ ಗೌಡ ಶೃಂಗೇರಿ, ರಾಜೇಶ್ ಆನೆಗುಂದ, ಅಮಿತ್ ಆನೆಗುಂದ, ಸಂತೋಷ ಕುರುಬಗೆರೆ, ದೀಕ್ಷಿತ್ ಹೆಗ್ಗದ್ದೆ, ಸಂತೋಷ್ ಹೆರೂರು, ನಿರಂಜನ್ ಕಿಗ್ಗ, ನಯನ ಗೌಡ ಶೃಂಗೇರಿ, ಅಭೀಗೌಡ ಶೃಂಗೇರಿ, ಯೋಗೀಶ್ ಖಾಂಡ್ಯ ಎನ್ನುವವರು ಬಾಲಕಿಗೆ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇವರುಗಳಿಗೆ ಬಾಲಕಿಯ ಚಿಕ್ಕಮ್ಮ ಗೀತಾ ಎನ್ನುವವರು ಸಹಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಸಿಸಿಬಿ ಪೊಲೀಸರ ವಿರುದ್ಧ ಶಿಸ್ತು ಕ್ರಮ ,ವಿವಿಧ ಠಾಣೆಗಳಿಗೆ ವರ್ಗಾವಣೆ: ಪೊಲೀಸ್ ಆಯುಕ್ತ
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.