Advertisement
ಅವರು ರವಿವಾರ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನ. 23ರಿಂದ 26ರ ವರೆಗೆ ನಡೆಯುತ್ತಿರುವ “ನಗುವಿನ ಹಾದಿಯಲ್ಲಿ ಕಾರ್ಟೂನ್ ಯಾತ್ರೆ – ಕಾರ್ಟೂನ್ ಹಬ್ಬ ಹಬ್ಬ’ದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರೊಂದಿಗಿನ “ಮಾಸ್ಟ್ರರ್ ಸ್ಟೋಕ್ಸ್’ ಸಂವಾದದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಟೂನ್ ಬಿಡಿಸುವ ಮೂಲಕ ಉದ್ಘಾಟಿಸಿದ ದಿ ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯ ಚಿತ್ರಕಾರರಾದ ಸುರೇಂದ್ರ ಅವರು, ಕಾರ್ಟೂನ್ ಗಳ ಮಹತ್ವ ಹಾಗೂ ಅದು ಬೀರುವ ಪ್ರಭಾವದ ಬಗ್ಗೆ ತಿಳಿಸಿ, ಪತ್ರಿಕೆಗಳಲ್ಲಿ ಒಂದು ಕಾರ್ಟೂನ್ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಗಾಂಧೀಜಿ ಅವರನ್ನು ಇಂದಿನ ಯುವ ಜನಾಂಗ ಮರೆಯುತ್ತಿರುವ ಕಾಲಘಟ್ಟದಲ್ಲಿಯೇ ಈಶ್ವರ ಅಲ್ಲಾ ತೇರೋ ನಾಮ್ ಎನ್ನುವ ಸಂದೇಶ ಸಾರುವ ಕಾರ್ಟೂನ್ ಹಬ್ಬ ಆಯೋಜಿಸಿರುವುದು ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಆ ಮೂಲಕ ಗಾಂಧಿ ಅವರನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು.ಕನ್ನಡಪ್ರಭದ ಹಿರಿಯ ವ್ಯಂಗ್ಯಚಿತ್ರಕಾರ ವಿ.ಜಿ. ನರೇಂದ್ರ ಮಾತನಾಡಿದರು. ಸಮ್ಮಾನ
ಈ ಸಂದರ್ಭದಲ್ಲಿ ಬೆಂಗಳೂರಿನ ಸ್ಟಿಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ, ವ್ಯಂಗ್ಯಚಿತ್ರಕಾರರಾದ ದತ್ತಾತ್ರಿ ಎಂ.ಎನ್. ಹಾಗೂ ನಂಜುಂಡಸ್ವಾಮಿ ಅವರನ್ನು ಸಮ್ಮಾನಿಸಲಾಯಿತು. ಎಡಿಟೂನ್ಸ್ ಕಾರ್ಟೂನ್ ಕಾರ್ಯಾಗಾರ, ನಗೆ ಹಬ್ಬ ಸಹಿತ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.
Related Articles
Advertisement
ಸಾಂಸ್ಕೃತಿಕ ಕಾಡ್ಗಿಚ್ಚುಅನೇಕ ಮಂದಿ ಖ್ಯಾತನಾಮ ವ್ಯಂಗ್ಯಚಿತ್ರಕಾರರ, ಕಲಾವಿದರ ಸಮಾಗಮದ ಈ ಕಾರ್ಟೂನ್ ಹಬ್ಬ ಒಂದು ರೀತಿಯಲ್ಲಿ ಸಾಂಸ್ಕೃತಿಕ ಮಿಂಚನ್ನು ಸೃಷ್ಟಿಸಿದ್ದು, ಇದು ಇನ್ನೂ ಮುಂದಕ್ಕೆ ಹೋಗಿ ಸಾಂಸ್ಕೃತಿಕ ಕಾಡ್ಗಿಚ್ಚಾಗಿ ಹಬ್ಬಲಿ. ಕಾರ್ಟೂನ್ ಪಂಚ್ ಕೊಡುವುದಕ್ಕೆ ಮಾತ್ರ ಸೀಮಿತವಾಗದೇ, ಅದರ ಇನ್ನೊಂದು ಆಯಾಮವನ್ನು ತೆರೆದುಕೊಳ್ಳಲಿ ಎಂದು ಸುಧಾ ಪತ್ರಿಕೆಯ ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ ಹೇಳಿದರು. ಜನಾಕರ್ಷಿಸಿದ ಕಾರ್ಟೂನ್ ಹಬ್ಬ
ಇಲ್ಲಿನ ಕಲಾಮಂದಿರದಲ್ಲಿ ಶನಿವಾರದಿಂದ ನಡೆಯುತ್ತಿರುವ ಕಾರ್ಟೂನ್ ಹಬ್ಬ ರವಿವಾರವೂ ಜನಾಕರ್ಷಣೆಯ ಕೇಂದ್ರವಾಗಿತ್ತು. ಹಲವು ಖ್ಯಾತನಾಮ ವ್ಯಂಗ್ಯಚಿತ್ರಕಾರರು ಬಿಡಿಸಿರುವ ನೂರಾರು ಕಾರ್ಟೂನ್ ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಕುಂದಾಪುರದ ಭಾಗದ ವ್ಯಂಗ್ಯಚಿತ್ರ ಆಸಕ್ತರು, ಬೇರೆ ಬೇರೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಟೂನ್ ಹಬ್ಬಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಪ್ರದರ್ಶನಕ್ಕೆ ಇಡಲಾದ ಕ್ಯಾರಿಕೇಚರ್,ಕಾರ್ಟೂನ್ ಗಳ ಪೈಕಿ ಕೆಲವರು ತಮ್ಮ ನೆಚ್ಚಿನ ವ್ಯಂಗ್ಯಚಿತ್ರಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆಯನ್ನು ಆಯೋಜಿಸಿದ್ದು, ಬೇರೆ ಕಡೆಗಳ ವಿದ್ಯಾರ್ಥಿಗಳು ಬಂದು ಆಸಕ್ತಿಯಿಂದ ಪಾಲ್ಗೊಂಡರು.