Advertisement

ವ್ಯಂಗ್ಯ ಚಿತ್ರಕಾರ ರಾವ್‌ಬೈಲ್‌ ಇನ್ನಿಲ್ಲ

12:13 PM Apr 05, 2018 | |

ಬೆಂಗಳೂರು: ರಾವ್‌ಬೈಲ್‌ ಎಂದೇ ಜನಪ್ರಿಯರಾಗಿದ್ದ ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಭಾಕರ್‌ ಬೈಲಂಗಡಿ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. “ಇವರ ನೋಡ್ರೀ’ ಕಾಲಂ ಮೂಲಕ ಸಾಕಷ್ಟು ಪರಿಚಿತರಾಗಿದ್ದ ರಾವ್‌ಬೈಲ್‌ ನಿಧನ ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ಅಪಾರ ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರನ್ನು ಅಗಲಿದ್ದು, ಅವರ ನಿಧನ ಕಲಾಕ್ಷೇತ್ರಕ್ಕಾದ ದೊಡ್ಡ ನಷ್ಟ ಎಂದಿದ್ದಾರೆ.

Advertisement

ಮೂಲತಃ ಕಾಸರಗೋಡಿನ ರಾವ್‌ಬೈಲ್‌, ಬೆಳೆದಿರುವುದು ಉಡುಪಿ-ಕುಂದಾಪುರದಲ್ಲಿ. ಬಳಿಕ ಬೆಂಗಳೂರಿಗೆ ಆಗಮಿಸಿ ಪದವಿ ಪಡೆದುಕೊಂಡಿದ್ದರು. ಧಾರವಾಡ, ಮುಂಬೈಗಳಲ್ಲಿ ಕೆಲಕಾಲ ಇದ್ದು, ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ದೇಶದ ಪ್ರಸಿದ್ಧ ಜೆ.ಜೆ.ಕಲಾಶಾಲೆಯ ಅಪ್ಲೆ„ಡ್‌ ವಿಭಾಗದಲ್ಲಿ ಡಿಪ್ಲೋಮ ಮಾಡಿದ್ದ ರಾವ್‌ಬೈಲ್‌ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯರಾಗಿದ್ದರು. ಮಿಮಿಕ್ರಿ ಕಲೆಯನ್ನು ಮೈಗೂಡಿಸಿಕೊಂಡಿದ್ದ ರಾವ್‌ಬೈಲ್‌ ತಮ್ಮ ಸೋದರನ ಜತೆಗೂಡಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಅವರ ಅನೇಕ ರೇಖಾ ಪ್ರಧಾನ ಚಿತ್ರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾವ್‌ಬೈಲ್‌ ಕಲಾ ಸಾಧನೆಗೆ ಅನೇಕ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ. ಬೆಂಗಳೂರಿನ ಇಂಡಿಯನ್‌ ಕಾರ್ಟೂನ್‌ ಗ್ಯಾಲರಿನಲ್ಲಿ ರಾವ್‌ಬೈಲ್‌ ಅವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next