Advertisement

ಬಂಗಾಳಿಯ ವ್ಯಂಗ್ಯ ರೇಖೆಗಳುcartton on

08:39 PM Apr 05, 2019 | mahesh |

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 2019, ಏಪ್ರಿಲ್‌ 7ರಂದು ಬಂಗಾಳಿ ವ್ಯಂಗ್ಯಚಿತ್ರಕಾರ ಬಿಬೇಕ್‌ ಸೇನ್‌ಗುಪ್ತಾ ಅವರ ಕೃತಿಗಳ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ಕೋಲ್ಕತ್ತಾದಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿರುವ ಗುಪ್ತಾ, ಕ್ರಿಯೇಟಿವ್‌ ಕ್ಯಾರಿಕೇಚರ್‌ಗಳಿಗೆ ಹೆಸರುವಾಸಿ. ಜಗತ್ತಿನ ಅನೇಕ ದೇಶಗಳಲ್ಲಿ ಪ್ರವಾಸಗೈದು ಸಂಶೋಧನೆ ಮಾಡಿ, ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ.

Advertisement

ಈ ಪ್ರದರ್ಶನದಲ್ಲಿ ಅವರು ಭಾರತದ ಖ್ಯಾತ ವ್ಯಂಗ್ಯಚಿತ್ರಕಾರರ ಮತ್ತು ಹೆಸರಾಂತ ಸಂಗೀತಕಾರರ ಕ್ಯಾರಿಕೇಚರ್‌ಗಳನ್ನು, ಅನ್‌ಸಿನ್‌ ಪಾಕೆಟ್‌ ಕಾರ್ಟೂನುಗಳನ್ನು, ಒಲಿಂಪಿಕ್ಸ್‌, ಫ‌ುಟ್ಬಾಲ್‌ ಆಟಗಳಲ್ಲಿನ ಹಾಸ್ಯ ಸನ್ನಿವೇಶಗಳ ವ್ಯಂಗ್ಯಚಿತ್ರಗಳನ್ನೂ ಪ್ರದರ್ಶಿಸುತ್ತಿದ್ದಾರೆ. ಚಿರಂಜೀವಿ ಸಿಂಗ್‌ ಅವರು ಈ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಯಾವಾಗ?: ಏ.7, ಭಾನುವಾರ, ಬೆ.11
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್‌ಪೋರ್ಡ್‌ ಹೌಸ್‌, ಟ್ರಿನಿಟಿ ವೃತ್ತ ಸಮೀಪ
ಸಂಪರ್ಕ: ಮೊ. 99800917428

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next