Advertisement

ಮಕ್ಕಳಲ್ಲಿ ನಗುವರಳಿಸಿದ ಕಾರ್ಟೂನ್‌ ರಚನೆ 

06:00 AM Jul 13, 2018 | |

  ಪಾಠೇತರ ಚಟುವಟಿಕೆಯಿಂದ ಮಕ್ಕಳ ಮೆದುಳಿನ ಅರ್ಧಭಾಗದ ವಿಕಸನ ಆಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಮಕ್ಕಳ ಪ್ರತಿಭೆಗೆ ಲಲಿತ ಕಲೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದೂ ಅಳತೆಗೋಲಾಗುತ್ತದೆ. ವಿದ್ಯಾರ್ಥಿಗಳಿಗೂ ಶಾಲಾ ಪಾಠಗಳ ಬೇಸರ ಮರೆತು ಪುನಚ್ಚೇತನಗೊಳ್ಳಲು ಮಧ್ಯೆ ಮಧ್ಯೆ ಕಲಾಚಟುವಟಿಕೆಗಳು, ಕ್ರೀಡೆಗಳು ಅತ್ಯವಶ್ಯಕ. ಅದಕ್ಕಾಗಿಯೇ ಪಾಠಗಳ ಮಧ್ಯೆ ಚಿತ್ರಕಲೆ, ಸಂಗೀತ, ಕ್ರಾಫ್ಟ್, ನಾಟಕಾಭಿನಯ, ನಾಟ್ಯ, ತೋಟಗಾರಿಕೆ ಅವಧಿಗಳನ್ನು ಅಳವಡಿಸುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ವಾರ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಒಂದು ದಿನದ ವ್ಯಂಗ್ಯಚಿತ್ರ (ಕಾರ್ಟೂನ್‌) ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. 

Advertisement

 ವ್ಯಂಗ್ಯಚಿತ್ರ ಕಲಾವಿದ ಜೀವನ್‌ ಶೆಟ್ಟಿ ವೈಶಿಷ್ಟ್ಯಪೂರ್ಣವಾಗಿ ವ್ಯಂಗ್ಯಚಿತ್ರಕಲೆಯನ್ನು ಕಲಿಸಿಕೊಟ್ಟರು. ವ್ಯಂಗ್ಯ ಚಿತ್ರ ರಚನೆಯ ಆರಂಭಿಕ ಹಂತಗಳು, ಬಳಸುವ ಚಿಹ್ನೆಗಳು, ವಿಕಸಿಸಿ ಬಿಡಿಸುವ ಭಾಗಗಳು, ಚಿತ್ರದೊಳಗೆ ನವರಸ ಭಾವಗಳನ್ನು ರೂಪಿಸುವ ರೀತಿಗಳನ್ನು ಚಿತ್ರಿಸಿ ತೋರಿಸಿದರು. ವಿದ್ಯಾರ್ಥಿಗಳಿಂದಲೂ ವ್ಯಂಗ್ಯಚಿತ್ರಗಳನ್ನು ಮಾಡಿಸಿದರು. ಒಂದು ವ್ಯಂಗ್ಯಚಿತ್ರವನ್ನು ಕೊಟ್ಟು ಅದರ ಮುಂದಿನ ಭಾಗವನ್ನು ವಿದ್ಯಾರ್ಥಿಗಳೇ ಬರೆಯುವಂತೆ ಪ್ರೇರೇಪಿಸಿ ಉತ್ತಮ ಪ್ರಸ್ತುತಿಗೆ ಬಹುಮಾನ ನೀಡಿದರು. ಭಾಗವಹಿಸಿದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ವೈಶಿಷ್ಟ್ಯಪೂರ್ಣ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿದರು. ಒಬ್ಬರಿಗೊಬ್ಬರು ತಮ್ಮ ಚಿತ್ರ ತೋರಿಸಿ ಖುಷಿಪಟ್ಟರು, ನಕ್ಕು ನಲಿದರು.

ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next