Advertisement

ಸೇನಾ ರೈಲಿನಲ್ಲಿದ್ದ ಸ್ಮೋಕ್‌ಬಾಂಬ್‌ ಪೆಟ್ಟಿಗೆ ಕಳವು

06:55 AM Aug 29, 2017 | Team Udayavani |

ಝಾನ್ಸಿ: ಸೈನಿಕರನ್ನು ಕರೆದೊಯ್ಯುತ್ತಿದ್ದ ವಿಶೇಷ ರೈಲಿನಲ್ಲಿ ಇರಿಸಿದ್ದ ಸ್ಮೋಕ್‌ ಬಾಂಬ್‌ಗಳ ಪೆಟ್ಟಿಗೆಯೊಂದು ಕಳುವಾ ಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಪುಲ್ಗಾಂವ್‌ನಿಂದ ಪಂಜಾಬ್‌ನ ಪಠಾಣ್‌ಕೋಟ್‌ಗೆ ಸೈನಿಕರು, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದ ರೈಲು ಭಾನುವಾರ ಝಾನ್ಸಿ ಬಳಿ ನಿಂತಿದೆ. 

Advertisement

ಈ ವೇಳೆ ಬೋಗಿಗಳ ತಪಾಸಣೆ ನಡೆಸಿದಾಗ ಒಂದು ಬೋಗಿಯ ಸೀಲ್‌ ತೆರೆಯಲಾಗಿತ್ತು. ಒಳಹೋಗಿ ಪರಿಶೀಲಿಸಿದಾಗ ಸ್ಮೋಕ್‌ ಬಾಂಬ್‌ಗಳಿದ್ದ ಒಂದು ಬಾಕ್ಸ್‌ ಕಾಣೆಯಾಗಿರುವುದು ಗೊತ್ತಾಗಿದೆ. ಪಾಕ್‌ ಮೂಲದ ಗೂಢಚಾರರಿಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಆರೋಪದಲ್ಲಿ ಸೇನೆ ಸೇವೆಯಲ್ಲಿದ್ದ ಝಾನ್ಸಿಯ ಸಂಗ್ರಾಹಕ ಗುಮಾಸ್ತನನ್ನು ಬಂಧಿಸಿದ ವಾರದ ಅಂತರದಲ್ಲೇ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next