Advertisement

ಹೀಗೊಂದು ಮೊಬೈಲ್ ಮಾರ್ಚ್ಯುರಿ !

02:03 PM Jan 26, 2022 | Team Udayavani |

ಬೆಳ್ತಂಗಡಿ: ಒಬ್ಬ ವ್ಯಕ್ತಿಯ ಸಾವಿನ ನಂತರ ದೇಹವನ್ನು ಸುರಕ್ಷಿತವಾಗಿ ಇರಿಸುವುದು ಸುಲಭದ ಮಾತಲ್ಲ.ಅದನ್ನು ಸುರಕ್ಷಿತವಾಗಿರಿಸಿಕೊಳ್ಳುವುದೇ ಒಂದು ರೀತಿಯ ಜಬ್ದಾರಿಯುತ ಕಾರ್ಯ. ಇನ್ನು ಈ ಕೆಲಸ ಅಂತ ಹೇಳಿದ ಕೂಡಲೇ ಭಯ ಪಡುವವರೇ ಹೆಚ್ಚು.ಅಂತದ್ರಲ್ಲಿ ಸ್ವತಂತ್ರ್ಯವಾದ ಶವಪೆಟ್ಟಿಗೆ , ಶವಾಗಾರ ಅದರ ಸಂರಕ್ಷಣೆ ಜೊತೆಗೆ ಅದನ್ನು ಸಾಗಿಸುವಿಕೆ ಕೆಲಸವನ್ನು ಮಾಡ್ತಾ ಇದ್ದಾರೆ ಬಳಂಜ ನಿವಾಸಿ ಆಲ್ವಿನ್ ಪಿಂಟೋ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಜನತೆಗೆ ಈ ಸೌಕರ್ಯ ಸರಿಯಾಗಿ ಲಭ್ಯವಾಗಬೇಕು ಎಂದೆನಿಸಿ ಬೆಳ್ತಂಗಡಿಯಲ್ಲಿ ಶವಾಗಾರವನ್ನು ಸುಮಾರು 15 ವರ್ಷಗಳ ಹಿಂದೆ ಪ್ರಾರಂಭಿಸಿದರು.ಬೆಳ್ತಂಗಡಿಯ ಚರ್ಚ್ ರೋಡ್ ಬಳಿಯಿರುವ ‘ ಕ್ರಿಸ್ಟ ಎರೇಂಜರ್ಸ್ ‘ ನಲ್ಲಿ ಆಲ್ವಿನ್ ಪಿಂಟೋ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಇಲ್ಲಿ ಇವರು ಸಾಗಿಸುವ ಶವದ ಪೆಟ್ಟಿಗೆ ಕೆಲಸ, ಶವವನ್ನು ಒಂದೆರೆಡು ದಿನಗಳ ಕಾಲ ಕೆಮಿಕಲ್ ನಲ್ಲಿ ಇಟ್ಟು ಸಂರಕ್ಷಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ.


ಶವಾಗಾರದ ವೃತ್ತಿಯೊಂದಿಗೆ ಗ್ರಾನೈಟ್ ಕಾರ್ವಿಂಗ್,ಸ್ಮಶಾನದಲ್ಲಿ ಗ್ರಾನೈಟ್ ನಿಂದ ಗೋರಿ ಕಟ್ಟುವುದು, ಗೋರಿಗಳಿಗೆ ನೇಮ್ ಪ್ಲೇಟ್ ಹಾಕುವುದು ಜೊತೆಗೆ ಶಿಲುಬೆ ಡಿಸೈನ್ ಗಳನ್ನು ಮಾಡಿಕೊಡುತ್ತಾರೆ.ಇದರ ಜೊತೆಗೆ ಬಂದಳಂಜದಲ್ಲಿರುವ ತನ್ನ ಮನೆಯಲ್ಲಿಯೇ ನಾನಾ ರೀತಿಯ ಶವದ ಪೆಟ್ಟಿಗೆಯನ್ನು ಸ್ವತಃ ಇವರೇ ತಯಾರಿಸುತ್ತಾರೆ.

ಅದು ಯಾವುದೇ ಧರ್ಮಕ್ಕೆ ಸೀಮಿತ ವಾದರು ಸಹ ಶವಪೆಟ್ಟಿಗೆಯನ್ನು ಮಾಡಿಕೊಡುತ್ತಾರೆ. ಆಲ್ವಿನ್ ಪಿಂಟೋ ರವರು ಶವದ ಪೆಟ್ಟಿಗೆ ತಯಾರಿಸುವುದರ ಜೊತೆಗೆ ಸಮಾಜ ಕಾರ್ಯದಲ್ಲೂ ಕೂಡ ತನ್ನನ್ನ ತಾನು ತೊಡಗಿಸಿಕೊಂಡಿದ್ದಾರೆ.ದಿನವಿಡಿ ಶವಾಗಾರದಲ್ಲಿ ಕೆಲಸವಿದ್ದರೂ ಅಥವಾ ರಾತ್ರಿಯಿಡೀ ಶವವನ್ನು ಕಾಯುವ ಕೆಲಸ ಅಂಗಡಿಯಲ್ಲಿ ಮಾಡುತ್ತಿದ್ದರೂ ಮನೆಯವರ ಸಂಪೂರ್ಣ ಬೆಂಬಲವಿದೆ.ಒಟ್ಟಿನಲ್ಲಿ ಇವರ ಈ ದಿಟ್ಟ ಹೆಜ್ಜೆಗೆ ನಾವು ಮೆಚ್ಚಲೇಬೇಕು. ಜೊತೆಗೆ ಯಶಸ್ಸಿನ ಹಾದಿಗೆ ಸಾತ್ ನೀಡಲೇಬೇಕು.

– ಹರ್ಷಿತಾ ಹೆಬ್ಬಾರ್
ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ. ಉಜಿರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next