Advertisement
ಪಟ್ಟಣದ ದಿ ಜೈನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಶಾಲಾ-ಕಾಲೇಜುಗಳ ವಾಹನಗಳ ಸುಸ್ಥಿತಿಗಳ ಪರಿವೀಕ್ಷಣೆ ಹಾಗೂ ಆಡಳಿತ ಮಂಡಳಿಗಳಿಗೆ ತಿಳಿವಳಿಕೆ ನೀಡುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏನೇ ತೊಂದರೆಯಾದ್ರೂ ಆ ಸಂಸ್ಥೆಗಳೇ ನೇರ ಹೊಣೆ ಎಂದು ಹೇಳಿದರು.
Related Articles
Advertisement
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. 18 ವರ್ಷದೊಳಗಿನ ಮಕ್ಕಳಿಗೆ ವಾಹನಗಳನ್ನು ಕೊಡಬಾರದು ಎಂದು ಹೇಳಿದರು. ಜೈನ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲಾ ಅಧಿಕಾರಿಗಳು ಖಾಸಗಿ ಶಾಲೆಗಳ ಎಲ್ಲಾ ವಾಹನಗಳನ್ನು ಪರಿವೀಕ್ಷಣೆ ಮಾಡಿದರು. ಕೆಲವು ಶಾಲೆಗಳ ಬಸ್‌ಗಳು ತೀವ್ರ ಹಳೆಯದಾಗಿದ್ದು, ಸುರಕ್ಷತೆ ಇಲ್ಲದೇ ಇರುವ ಬಸ್‌ಗಳನ್ನು ನೋಡಿ ಎಸ್ಪಿ ಎಂ.ಎಸ್.ಮಹಮ್ಮದ್ ಸುಜೀತ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳೇ ಗೈರು: ಪಟ್ಟಣದ 25ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪರಿವೀಕ್ಷಣೆಗೆ ಬಂದಿದ್ದ ಬಸ್, ಆಟೋಗಳ ಚಾಲಕರು ಹಾಜರಿದ್ದರೂ ಮುಖ್ಯವಾಗಿ ಬರಬೇಕಿದ್ದ ಸಾರಿಗೆ ಅಧಿಕಾರಿಗಳೇ ಗೈರಾಗಿದ್ದರು. ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಎಸ್ಪಿ ಸುಜೀತ ಅಸಮಾಧಾನ ವ್ಯಕ್ತಪಡಿಸಿದರು.
ಕೆಜಿಎಫ್ ಜಿಲ್ಲಾ ಡಿವೈಎಸ್‌ಪಿ ಬಿ.ಎಲ್.ಶ್ರೀನಿವಾಸಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ಕೆಂಪಯ್ಯ, ಶಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಎಲ್.ರಾಮಕೃಷ್ಣ, ಸಬ್‌ಇನ್ಸ್‌ಪೆಕ್ಟರ್ ಆರ್.ದಯಾನಂದ್ ಉಪಸ್ಥಿತರಿದ್ದರು.