ಕ್ಯಾರೆಟ್: 2
ಸಕ್ಕರೆ: 2 ಕಪ್
ಹಾಲು: 2 ಕಪ್
ಅಕ್ಕಿ ಹುಡಿ: ಅರ್ಧ ಕಪ್
ತುಪ್ಪ: ಸ್ವಲ್ಪ
ಗೋಡಂಬಿ ದ್ರಾಕ್ಷಿ: ಸ್ವಲ್ಪ
ಏಲಕ್ಕಿ : ಸ್ವಲ್ಪ
Advertisement
ಮಾಡುವ ವಿಧಾನಮೊದಲು ಕ್ಯಾರೆಟ್‌ನ್ನು ಸಿಪ್ಪೆ ತೆಗೆದು ಬೇಯಿಸಿಕೊಳ್ಳಬೇಕು. ಅನಂತರ ಅದನ್ನು ಕೈಯಲ್ಲಿ ಚೆನ್ನಾಗಿ ಹಿಚುಕಿ ಅದರ ರಸವನ್ನು ತೆಗೆಯಬೇಕು. ಒಂದು ಸೋಸುವ ಪಾತ್ರೆಯಲ್ಲಿ ಸೋಸಿ ರಸವನ್ನು ತೆಗೆದಿಡಬೇಕು. ಒಂದು ಪಾತ್ರೆಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಬಿಸಿ ನೀರು, ಸಕ್ಕರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು. ಹಿಟ್ಟು ಚೆನ್ನಾಗಿ ಆಗಿ ಮೃದುವಾದ ಮೇಲೆ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಅನಂತರ ಒಂದು ಪಾತ್ರೆಗೆ 1ಕಪ್ ಹಾಲು ಮತ್ತು 1 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಅದಕ್ಕೆ ಏಲಕ್ಕಿ ಹಾಗೂ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಅದು ಚೆನ್ನಾಗಿ ಕುದಿಯುವಾಗ ಅಕ್ಕಿ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಅದಕ್ಕೆ ಸೇರಿಸಬೇಕು. ಅದು ಬೇಯುವಾಗ ಕ್ಯಾರೆಟ್ ರಸವನ್ನು ಸೇರಿಸಬೇಕು. ಅಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ ಸಿಹಿ ಬೇಕಿದ್ದರೆ ಸ್ವಲ್ಪ ಸಕ್ಕರೆ ಹಾಕಬೇಕು. ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಕುದಿಸಿದರೆ ಕ್ಯಾರೆಟ್ ಪಾಯಸ ಸಿದ್ಧವಾಗುತ್ತದೆ.