ಪಪ್ಪಾಯಿ ಹಣ್ಣಿನ ಹೋಳುಗಳು-ಒಂದು ಕಪ್, ಸಕ್ಕರೆ – ಎರಡು ಚಮಚ, ಲಿಂಬೆರಸ – ನಾಲ್ಕು ಚಮಚ, ಜೇನುತುಪ್ಪ- ಎರಡು ಚಮಚ, ಏಲಕ್ಕಿಪುಡಿ – ಕಾಲುಚಮಚ.
Advertisement
ತಯಾರಿಸುವ ವಿಧಾನ:ಪಪ್ಪಾಯಿ ಹೋಳುಗಳಿಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಬೇಕಷ್ಟು ನೀರು ಹಾಗೂ ಕಿತ್ತಾಳೆ ಅಥವಾ ಲಿಂಬೆರಸ ಸೇರಿಸಿ. ಜೇನುತುಪ್ಪ ಮತ್ತು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು.
ಬೇಕಾಗುವ ಸಾಮಗ್ರಿ:
ಹೆಚ್ಚಿದ ಕ್ಯಾರೆಟ್ – ಎರಡು ಕಪ್, ಸಕ್ಕರೆ – ನಾಲ್ಕು ಚಮಚ, ಹಾಲು – ಎರಡು ಕಪ್, ಖರ್ಜೂರ – ನಾಲ್ಕು, ಗೇರುಬೀಜ – ಎಂಟು. ತಯಾರಿಸುವ ವಿಧಾನ:
ಕ್ಯಾರೆಟ್‌ಗೆ ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ಒಂದು ಕಪ್ ಹಾಲು ಸೇರಿಸಿಕೊಳ್ಳಿ. ಚೆನ್ನಾಗಿ ಬೇಯಿಸಿದ ನಂತರ ಆರಲು ಬಿಡಿ. ಇದಕ್ಕೆ ಹೆಚ್ಚಿದ ಖರ್ಜೂರ, ಹಾಲು, ಸಕ್ಕರೆ, ಗೋಡಂಬಿ ಸೇರಿಸಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿಕೊಂಡು ಹದ ಮಾಡಿಕೊಳ್ಳಿ. ಗೋಡಂಬಿತರಿ ಹಾಗೂ ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು. ಹುಳಿತೇಗು, ಹೊಟ್ಟೆಉರಿ ಹೋಗಲಾಡಿಸುವುದರ ಜೊತೆಗೆ ಬೇಸಿಗೆಯಲ್ಲಿ ಕಾಡುವ ಶ್ಯಕ್ತಿಯನ್ನು ಶಮನಗೊಳಿಸುವುದು.