ರಾಜಕೀಯವನ್ನು ದೊಂಬರಾಟಕ್ಕೆ ಹೋಲಿಸುವುದು ಸುಮ್ಮನೆ ಅಲ್ಲ. ಎರಡೂ ಮನರಂಜನೆಯ ವಸ್ತುಗಳು ಎಂಬುದು ಈ ಮಾತಿನರ್ಥ. ಕಾಮಿಡಿಯನ್ನು ಅರಸುವವರಿಗೆ ರಾಜಕಾರಣ ಅನಿಯಮಿತ ಸರಕನ್ನು ಒದಗಿಸುತ್ತದೆ ಎಂಬುದು ಅನೇಕರ ಮಾತು. ಕಲಾವಿದರು, ಸಾಹಿತಿಗಳು, ಹಾಸ್ಯಗಾರರು ರಾಜಕಾರಣ ವಸ್ತುವಿಷಯವನ್ನಾಗಿ ಆರಿಸಿಕೊಂಡು ಪ್ರಖ್ಯಾತಿ ಪಡೆದಿದ್ದಾರೆ. ರಾಜಕಾರಣ, ಸಿನಿಮಾ, ಕ್ರೀಡೆ ಮುಂತಾದ ಕ್ಷೇತ್ರಗಳ ವ್ಯಕ್ತಿ, ವಿದ್ಯಮಾನಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿ ನಕ್ಕು ನಗಿಸುತ್ತಲೇ ಸಮಾಜದ ಓರೆಕೋರೆಗಳಿಗೆ ಬರೆ ಎಳೆಯುವ ವ್ಯಂಗ್ಯಚಿತ್ರ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು, ಮೃತ್ಯುಂಜಯ ಚಿಲುವೆರು ಅವರ ರಾಜಕೀಯ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್ ಪ್ರದರ್ಶನವನ್ನು ಏರ್ಪಡಿಸಿದೆ. ಮೃತ್ಯುಂಜಯ ಅವರು ಹೈದರಾಬಾದ್‌ನ ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ವ್ಯಂಗ್ಯಚಿತ್ರಗಳು ಚೀನಾ, ಬ್ರೆಜಿಲ್, ರೊಮೇನಿಯಾ, ಟರ್ಕಿ, ಇಟಲಿ ದೇಶಗಳಲ್ಲಿಯೂ ಪ್ರದರ್ಶನಗೊಂಡಿವೆ. ಸೆ.22ರವರೆಗೆ ಈ ಪ್ರದರ್ಶನ ನಡೆಯಲಿದೆ.
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ.1, ಮಿಡ್‌ಫೋರ್ಡ್ ಹೌಸ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ
ಯಾವಾಗ?: ಸೆ.15- 22, ಬೆಳಗ್ಗೆ 10- ಸಂಜೆ 6