Advertisement

ರ್‍ಯಾಂಕಿಂಗ್‌: ಕಾರ್ಲೋಸ್‌ ಅಲ್ಕರಾಜ್‌ ವರ್ಷಾಂತ್ಯದ ನಂ.1 ಟೆನಿಸಿಗ

11:24 PM Nov 16, 2022 | Team Udayavani |

ಟುರಿನ್‌ (ಇಟಲಿ): ಎಟಿಪಿ ಫೈನಲ್ಸ್‌ನಿಂದ ರಫೆಲ್‌ ನಡಾಲ್‌ ಹೊರಬೀಳುವುದರೊಂದಿಗೆ ಸ್ಪೇನ್‌ನವರೇ ಆದ ಕಾರ್ಲೋಸ್‌ ಅಲ್ಕರಾಜ್‌ ವರ್ಷಾಂತ್ಯದ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳಲಿದ್ದಾರೆ.

Advertisement

ಟುರಿನ್‌ನಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್‌ ರೌಂಡ್‌ ರಾಬಿನ್‌ ಲೀಗ್‌ ಸ್ಪರ್ಧೆಯಲ್ಲಿ ರಫೆಲ್‌ ನಡಾಲ್‌ ಸತತ 2 ಸೋಲು ಕಂಡರು. ರವಿವಾರ ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ ಸೋತರೆ, ಮಂಗಳವಾರ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ಅವರಿಗೆ ಶರಣಾದರು. ನಡಾಲ್‌ ಮರಳಿ ನಂ.1 ಸ್ಥಾನ ಪಡೆಯಬೇಕಿದ್ದರೆ ಈ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಬೇಕಿತ್ತು. ಆದರೆ ಅವರೀಗ ಕೂಟದಿಂದಲೇ ನಿರ್ಗಮಿಸಿದ್ದಾರೆ.

ಸ್ವಾರಸ್ಯವೆಂದರೆ, 19 ವರ್ಷದ ಕಾರ್ಲೋಸ್‌ ಅಲ್ಕರಾಜ್‌ ಈ ಕೂಟದಲ್ಲಿ ಆಡದೆಯೇ ತಮ್ಮ ನಂ.1 ರ್‍ಯಾಂಕಿಂಗ್‌ ಪಟ್ಟ ಉಳಿಸಿಕೊಂಡದ್ದು. ಅವರು ಅನಾರೋಗ್ಯದಿಂದಾಗಿ ಹೊರಗುಳಿದರು. ಅವರೀಗ 1973ರ ಬಳಿಕ ಎಟಿಪಿ ವರ್ಷಾಂತ್ಯದ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಅತೀ ಕಿರಿಯ ಆಟಗಾರನಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next