Advertisement
ಕಳೆದ ಸೆಪ್ಟಂಬರ್‌ನಲ್ಲಿ ನವಾರೊ ಅವರಲ್ಲಿ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಇದು ಆರಂಭಿಕ ಹಂತದಲ್ಲಿ ಇದ್ದುದರಿಂದ ಚಿಕಿತ್ಸೆ ಯಶಸ್ವಿಯಾಗತೊಡಗಿತು. ಕಿಮೋಥೆರಪಿ ಮುಗಿದಿದೆ, ಚಿಕಿತ್ಸೆ ಅಂತಿಮ ಹಂತದಲ್ಲಿದೆ ಎಂಬುದಾಗಿ ಸೋಮವಾರವಷ್ಟೇ ಟ್ವೀಟ್ ಮಾಡಿದ್ದರು. ಜತೆಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅಭಿಲಾಷೆಯನ್ನೂ ವ್ಯಕ್ತಪಡಿಸಿದರು.ಒಲಿಂಪಿಕ್ಸ್‌ಗೂ ಮಿಗಿಲಾದುದಿಲ್ಲ
“ನಾನು ಆಸ್ಪತ್ರೆಯ ಬೆಡ್‌ನಲ್ಲಿರುವುದನ್ನು ಜನರು ನೆನಪಿಸಿಕೊಳ್ಳಬಾರದು. ಹೀಗಾಗಿ ದೊಡ್ಡ ಕೂಟವೊಂದರಲ್ಲಿ ಪಾಲ್ಗೊಂಡು ಟೆನಿಸ್‌ಗೆ ಗುಡ್‌ಬೈ ಹೇಳಬೇಕೆಂದಿರುವೆ. ಇದಕ್ಕೆ ಒಲಿಂಪಿಕ್ಸ್‌ಗಿಂತ ಮಿಗಿಲಾದ ಸ್ಪರ್ಧೆ ಇಲ್ಲ’ ಎಂದಿದ್ದಾರೆ ಕಾರ್ಲಾ ಸೂರೆಜ್ ನವಾರೊ. ಕಳೆದ ಫೆಬ್ರವರಿಯಲ್ಲಿ ಅವರು ಕೊನೆಯ ಸಲ ಟೆನಿಸ್ ಅಂಕಣದಲ್ಲಿ ಕಾಣಿಸಿ ಕೊಂಡಿದ್ದರು. ಕಳೆದ ತಿಂಗಳು ಇಟಲಿಯ ಸಾರಾ ಎರಾನಿ ಜತೆ ಬಾರ್ಸಿಲೋನಾದಲ್ಲಿ ಅಭ್ಯಾಸ ಕೂಡ ನಡೆಸಿದ್ದರು.
ಆದರೆ ಜೂನ್ ಅಂತ್ಯಕ್ಕೆ ಅಗ್ರ 56 ಸ್ಥಾನದಲ್ಲಿರುವ ಸಿಂಗಲ್ಸ್ ಆಟಗಾ ರರಿಗಷ್ಟೇ ಒಲಿಂಪಿಕ್ಸ್ ಅರ್ಹತೆ ದೊರೆಯುತ್ತದೆ. ನವಾರೊ ಸದ್ಯ 85ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಆದರೂ ಭರವಸೆ ಕಳೆದುಕೊಂಡಿಲ್ಲ.