Advertisement

ಒದ್ದೆ ಕೂದಲಿನ ಆರೈಕೆ

06:55 PM Dec 12, 2019 | mahesh |

ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ರೇಷ್ಮಯಂತಹ ನುಣುಪಾದ ಕೂದಲು ಇರಬೇಕು ಎನ್ನುವುದು ಪ್ರತಿಯೊಂದು ಹೆಣ್ಣಿನ ಬಯಕೆ ಆಗಿರುತ್ತದೆ. ಹೀಗಾಗಿ ಕೂದಲ ಅಂದವನ್ನು ಹೆಚ್ಚಿಸಲು ಪಾರ್ಲರ್‌ಗಳ ಮೊರೆ ಹೋಗುವುದಂತೂ ಈಗ ಸಾಮಾನ್ಯವಾಗಿ ಬಿಟ್ಟಿದೆ. ಹೀಗಿದ್ದರೂ ಮನೆಯಲ್ಲಿ ತಲೆಸ್ನಾನದ ನಂತರ ಒದ್ದೆ ಕೂದಲುಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದು ಕೂಡ ಅಷ್ಟೇ ಮುಖ್ಯ. ಕೂದಲು ಉದುರುವುದು, ಕವಲೊಡೆಯುವುದು, ತುಂಡಾಗುವುದು ಇವುಗಳಿಗೆಲ್ಲ ಕಾರಣ ಸರಿಯಾದ ಆರೈಕೆ ಇಲ್ಲದೆ ಇರುವುದು. ನಿಮ್ಮ ಕೂದಲು ಚೆನ್ನಾಗಿರಬೇಕು ಎಂದರೆ ಅದರ ಆರೈಕೆ ಸರಿಯಾಗಿರಬೇಕು. ಒದ್ದೆ ಇರುವಾಗ ನಿಮ್ಮ ಕೂದಲನ್ನು ಹೇಗೆ ಆರೈಕೆ ಮಡುತ್ತೀರಿ ಎಂಬುದು ಅತೀ ಮುಖ್ಯವಾಗಿದೆ. ಹೀಗಾಗಿ, ಕೂದಲು ಒದ್ದೆ ಇರುವಾಗ ಅದರ ಆರೈಕೆ ಹೀಗೆ ಮಾಡಿ.

Advertisement

ಕಠಿಣವಾಗಿ ಬಾಚುವುದನ್ನು ನಿಲ್ಲಿಸಿ

ಜೋರಾಗಿ ಒತ್ತಿ ಬಾಚುವುದರಿಂದ ಕೂದಲು ಉದುರಲು ಮತ್ತು ಕವಲೊಡೆಯಲು ಪ್ರಾರಂಭವಾಗುತ್ತದೆ. ಕೂದಲು ಒದ್ದೆ ಇರುವಾಗ ಜೋರಾಗಿ ಬಾಚುವುದನ್ನು ನಿಲ್ಲಿಸಿ ಮತ್ತು ಕೂದಲು ಹಾನಿಗೊಳಗಾಗುವುದನ್ನು ನಿಗ್ರಹಿಸಿ.

ಕೂದಲನ್ನು ಬಿಸಿಗಾಳಿಯಲ್ಲಿ ಒಣಗಿಸಬೇಡಿ
ಬಿಸಿ ಗಾಳಿ (ಹೇರ್‌ ಡ್ರೈಯರ್‌) ಮೂಲಕ ಕೂದಲನ್ನು ಒಣಗಿಸಿಕೊಂಡರೆ ಅದರಿಂದ ಕೂದಲಿಗೆ ಹಾನಿಯಾಗುತ್ತದೆ. ನೇರ ಬಿಸಿ ಗಾಳಿಯಿಂದಾಗಿ ಕೂದಲು ಇನ್ನಷ್ಟು ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ.

ತಲೆಸ್ನಾನದ ನಂತರ ತಕ್ಷಣ ಹೊರಗೆ ಹೋಗಬೇಡಿ
ಸೂರ್ಯನ ಬಿಸಿಲಿಗೆ ಒದ್ದೆ ಕೂದಲು ಬೇಗ ರಫ್ ಆಗಿ ಬಿಡುತ್ತದೆ. ಕೂದಲಿನಲ್ಲಿರುವ ನಯವನ್ನು ಸೂರ್ಯನ ಶಾಖ ಹೀರಿಕೊಂಡು ತಲೆನೋವು ಬರುವ ಸಾಧ್ಯತೆಗಳು ಹೆಚ್ಚು ಮತ್ತು ಕೂದಲು ಉದುರುವುದು ಹೆಚ್ಚಾಗುತ್ತದೆ. ಗುಂಗುರು ಕೂದಲು ಇರುವವರು ಪ್ರತ್ಯೇಕವಾಗಿ ಗಮನದಲ್ಲಿಡಬೇಕಾದ ಅಂಶವಾಗಿದೆ.

Advertisement

ಕೂದಲನ್ನು ಬೆರಳುಗಳಿಂದ ನೇರಗೊಳಿಸಿ
ಒಣಗಿದ ಕೂದಲಿಗಿಂತ ಒದ್ದೆ ಕೂದಲು 3 ಪಟ್ಟು ಹೆಚ್ಚು ಬಲಹೀನವಾಗಿರುತ್ತದೆ. ಹೀಗಾಗಿ ಬೆರಳುಗಳಿಂದ ಕೂದಲ ಸಿಕ್ಕನ್ನು ಬಿಡಿಸುವುದರಿಂದ ಕೂದಲು ಉದುರುವುದು ತಪ್ಪುತ್ತದೆ.

ಬ್ಯಾಂಡ್‌ ಅನ್ನು ಗಟ್ಟಿಯಾಗಿ ಕಟ್ಟಬೇಡಿ
ಒದ್ದೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತದೆ. ಅದಕ್ಕೆ ಗಟ್ಟಿಯಾಗಿ ಬ್ಯಾಂಡ್‌ ಅನ್ನು ಬಳಸಿದರೆ ಕೂದಲು ಉದುರುವುದು ಹೆಚ್ಚಾಗುತ್ತದೆ.

ಒದ್ದೆ ಕೂದಲಿಗೆ ತುಂಬ ಹೊತ್ತು ಟವೆಲ್‌ ಕಟ್ಟಬೇಡಿ
ಒದ್ದೆ ಕೂದಲಿಗೆ ತುಂಬಾ ಹೊತ್ತು ಟಾವೆಲ್‌ ಕಟ್ಟುವುದರಿಂದಲು ಕೂದಲು ಸಹಜವಾಗಿ ಒಣಗುವುದನ್ನು ತಪ್ಪಿಸುತ್ತದೆ. ಇದರಿಂದ ಕೂದಲಿನ ತೇವಾಂಶ ಬೇಗ ಹೀರಿಕೊಂಡು ಕೂದಲಿನ ನಯತೆಯನ್ನು ಕಡಿಮೆ ಮಾಡುತ್ತದೆ.

ಬಾಚಣಿಗೆಯನ್ನು ಬಳಸಬೇಡಿ
ಒದ್ದೆ ಕೂದಲಿಗೆ ಬಾಚಣಿಗೆ ಬಳಸಬೇಕೆಂದರೆ ಎರಡು ಬಾರಿ ಯೋಚಿಸಲೇ ಬೇಕು. ಉದ್ದ ಹಲ್ಲಿನ ಬಾಚಣಿಗೆ ಒದ್ದೆ ಕೂದಲನ್ನು ಹಾಳು ಮಾಡಬಹುದು. ಅಗತ್ಯವಿದ್ದಲ್ಲಿ ಅಗಲವಾಗಿರುವ ಹಲ್ಲಿನ ಬಾಚಣಿಗೆಯನ್ನು ಮಾತ್ರ ಬಳಸಿ.

ಒದ್ದೆ ಕೂದಲಿಗೆ ಮಸಾಜ್‌ ಮಾಡುವುದನ್ನು ಬಿಡ್ನಿ
ತಲೆಗೆ ಸ್ನಾನ ಮಾಡಿದ ತಕ್ಷಣ ಮಸಾಜ್‌ ಮಾಡುವುದು ತುಂಬಾ ಹಾನಿಕಾರ. ಒದ್ದೆ ಕೂದಲು ತುಂಬಾ ಶಕ್ತಿಹೀನವಾಗಿರುತ್ತದೆ. ಸ್ವತ್ಛ ಮತ್ತು ಆರೋಗ್ಯಯುತ ಕೂದಲಿಗಾಗಿ ಕೂದಲು ಒಣಗುವವರೆಗೆ ಕಾಯಬೇಕು.

ಸುಲಭಾ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next