Advertisement

ನೋಬಾಲ್‌ ಎಸೆದು ಲೆವಿಸ್‌ ಶತಕ ತಡೆದ ಪೊಲಾರ್ಡ್‌!

06:45 AM Sep 05, 2017 | |

ಕಿಂಗ್‌ಸ್ಟನ್‌(ವೆಸ್ಟ್‌ ಇಂಡೀಸ್‌): ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಸಿಪಿಎಲ್‌) ಕೈರನ್‌ ಪೊಲಾರ್ಡ್‌ ಉದ್ದೇಶಪೂರ್ವಕವಾಗಿ ನೋಬಾಲ್‌ ಎಸೆಯುವ ಮೂಲಕ ಎವಿನ್‌ ಲೆವಿಸ್‌ ಶತಕ ತಪ್ಪಿಸಿದ್ದಾರೆ. 

Advertisement

ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದರಿಂದ ಪೊಲಾರ್ಡ್‌ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಟಿ20 ಪಂದ್ಯದಲ್ಲಿ ಬಾರ್ಬಡೋಸ್‌ ಟ್ರೈಡೆಂಟ್‌ ಮೊದಲ ಬ್ಯಾಟಿಂಗ್‌ ಮಾಡಿತ್ತು. ಗುರಿ ಬೆನ್ನುಹತ್ತಿದ ಸೇಂಟ್‌ ಕಿಟ್ಸ್‌ ತಂಡದ ಪರ ಎವಿನ್‌ ಲೆವಿಸ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದರು. ಲೆವಿಸ್‌ 32 ಎಸೆತದಲ್ಲಿ 97 ರನ್‌ ಬಾರಿಸಿದ್ದರು. ಈ ಹಂತದಲ್ಲಿ ತಂಡದ ಗೆಲುವಿಗೆ 1 ರನ್‌ ಅಗತ್ಯವಿತ್ತು. ಬೌಲಿಂಗ್‌ ಮಾಡುತ್ತಿದ್ದ ಪೊಲಾರ್ಡ್‌ ನೋಬಾಲ್‌ ಎಸೆದಿದ್ದಾರೆ. ಇದರಿಂದ ಲೆವಿಸ್‌ ಶತಕದಿಂದ ವಂಚಿತರಾಗಿದ್ದಾರೆ. 2010ರಲ್ಲಿ ಭಾರತ ಮತ್ತು ಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್‌ 99 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದರು. ತಂಡದ ಗೆಲುವಿಗೆ ಮತ್ತು ಶತಕಕ್ಕೆ ಎರಡಕ್ಕೂ 1 ರನ್‌ ಅಗತ್ಯವಿತ್ತು. ಈ ಹಂತದಲ್ಲಿ ಬೌಲಿಂಗ್‌ ಮಾಡಿದ ಲಂಕಾ ಸ್ಪಿನ್ನರ್‌ ಸೂರಜ್‌ ರಣದಿವೆ ನೋಬಾಲ್‌ ಎಸೆದಿದ್ದರು. ಆ ನಂತರ ಸೆಹವಾಗ್‌ ಅವರಲ್ಲಿ ಸೂರಜ್‌ ಕ್ಷಮೆ ಕೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next