Advertisement

ಕೆರಿಬಿಯನ್‌ ಲೀಗ್‌: ಡ್ವೇನ್‌ ಬ್ರಾವೊ ಹೊರಕ್ಕೆ

01:28 AM Sep 09, 2019 | Sriram |

ಕಿಂಗ್‌ಸ್ಟನ್‌ (ಜಮೈಕಾ): ವೆಸ್ಟ್‌ ಇಂಡೀಸ್‌ನ ಖ್ಯಾತ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಕೂಟದಿಂದ ಹೊರಬಿದ್ದಿದ್ದಾರೆ. ಅವರು ಟ್ರಿನ್‌ಬಾಗೊ ನೈಟ್‌ರೈಡರ್ ತಂಡವನ್ನು ಮುನ್ನಡೆಸುತ್ತಿದ್ದರು.ಬ್ರಾವೊ ಬೆರಳಿನ ಗಾಯಕ್ಕೆ ಸಿಲುಕಿದ್ದು, ಚಿಕಿತ್ಸೆಗೆ ಒಳಗಾಗಲಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಲು ಅವರಿಗೆ 2 ತಿಂಗಳ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಬ್ರಾವೊ ಗೈರಲ್ಲಿ ಕೈರನ್‌ ಪೊಲಾರ್ಡ್‌ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.ಡ್ವೇನ್‌ ಬ್ರಾವೊ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೈರನ್‌ ಪೊಲಾರ್ಡ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next