Advertisement

Somalia; ಭಾರತೀಯರಿದ್ದ ಕಾರ್ಗೋ ಹಡಗು ಅಪಹರಣ: ತೀವ್ರ ನಿಗಾ ಇರಿಸಿದ ನೌಕಾಪಡೆ

12:58 PM Jan 05, 2024 | Team Udayavani |

ಹೊಸದಿಲ್ಲಿ: ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಅಪಹರಿಸಿದ ಹಡಗಿನಲ್ಲಿ 15 ಭಾರತೀಯರಿದ್ದು, ಸಿಬ್ಬಂದಿಯೊಂದಿಗೆ ಸಂವಹನವನ್ನು ಮಾಡಲಾಗಿದೆ ಎನ್ನಲಾಗಿದೆ.

ಸೇನಾ ಅಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಇದಲ್ಲದೆ, ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದೆ.

ಹೆಚ್ಚುವರಿಯಾಗಿ, ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈ ಪರಿಸ್ಥಿತಿಯನ್ನು ನಿಭಾಯಿಸಲು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next