Advertisement
ಆಹಾರ ಮಿತವಾಗಿರಲಿಆಹಾರ ಕ್ರಮದಲ್ಲಿ ನಿಯಂತ್ರಣವಿದ್ದರೆ 50ರ ಬಳಿಕ ಟೈಪ್ 2 ಡಯಾಬಿಟೀಸ್, ಸ್ಥೂಲಕಾಯಿಲೆಯಂಥ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಹೆಚ್ಚು ತರಕಾರಿ, ಹಣ್ಣು ಹಂಪಲು, ಡ್ರೈ ಫೂಟ್ಸ… , ಕೊಬ್ಬು ರಹಿತ ಆಹಾರ , ಮೀನು, ಪ್ರೋಟಿನ್ ಉಳ್ಳ ಪದಾರ್ಥಗಳ ಸೇವನೆ ಮಾಡಬೇಕು. ಉಪ್ಪು, ಹುಳಿ, ಖಾರ, ಸಕ್ಕರೆ ಪದಾರ್ಥ ಮಿತವಾಗಿ ಬಳಸಿದಷ್ಟು ಉತ್ತಮ.
ಪಾರಂಪರಿಕ ಕಾಯಿಲೆಗಳು ಕೆಲವೊಮ್ಮೆ 50 ವರ್ಷದ ಬಳಿಕ ಬಾಧಿಸುವ ಸಾಧ್ಯತೆ ಇದೆ. ಬಿಪಿ, ಡಯಾಬಿಟಿಸ್ ಇತ್ಯಾದಿಗಳು ವಂಶ ಪಾರಂಪರ್ಯದಿಂದ ಬರುವುದರಿಂದ ತಿಂಗಳಿಗೆ ಒಂದು ಬಾರಿ ದೇಹದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ನುರಿತ ವೈದ್ಯರಿಂದ ಸಲಹೆ ಪಡೆದು ಕಣ್ಣಿನ ತಪಾಸಣೆ, ರಕ್ತದೊತ್ತಡ ಕುರಿತು ಜಾಗರೂಕರಾಗಿರಬೇಕು. ವೈದ್ಯರು ನೀಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಯೋಗಾಸನಗಳಿಗೆ ಸಮಯವಿರಲಿ
50 ವರ್ಷ ದಾಟಿದ ಬಳಿಕ ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಒಂದು ತಾಸು ನಡಿಗೆ, ದಿನಕ್ಕೆ 7ರಿಂದ 8 ತಾಸು ನಿದ್ದೆ, ಯೋಗಾಸನಗಳು ಅವಶ್ಯ. ದುರಾಭ್ಯಾಸದಿಂದ ದೂರ ಉಳಿದಲ್ಲಿ ಮತ್ತಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ 2ರಿಂದ 3 ಲೀಟರ್ ನೀರು ಸೇವನೆ ಚಯಾಪಚನ ಕ್ರಿಯೆಗೆ ಸಹಾಯವಾಗಲಿದೆ. ರೋಗ ಲಕ್ಷಣ ಗೋಚರಿಸುವ ಮೊದಲು ಆರೋಗ್ಯ ಕಾಳಜಿ ಇದ್ದಲ್ಲಿ ಸಂಭವಿಸಬಹುದಾದ ಆಘಾತವನ್ನು ತಡೆಯಬಹುದು. ಸ್ನಾಯು ಸಂಬಂಧಿಸಿದ ವ್ಯಾಯಾಮ ತೂಕವನ್ನು ಸಮತೋಲದಲ್ಲಿ ಇರಿಸುತ್ತದೆ. ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ದಿನ ಪೂರ್ತಿ ಸಕ್ರಿಯವಾಗುತ್ತದೆ.
Related Articles
Advertisement