Advertisement
ವಿಶ್ವ ಯುವ ಕೌಶಲ ದಿನದ ಪ್ರಯುಕ್ತ ದೀನ್ ದಯಾಳ್ ಗ್ರಾಮೀಣ ಕೌಶಲ ಯೋಜನೆಯಡಿ ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾ ಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
ತಾ.ಪಂ. ನೇತೃತ್ವದಲ್ಲಿ ಹಮ್ಮಿಕೊಂಡಿ ರುವ ಈ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಓದುವುದು ಜ್ಞಾನ ಮತ್ತು ಜೀವನ ನಿರ್ವಹಣೆಗಾಗಿ. ಹಿಂದೆ ಸರಕಾರಿ ನೌಕರಿ ಪಡೆದರೆ ಮಾತ್ರ ಉದ್ಯೋಗಸ್ಥ ಎನ್ನುವ ಕಲ್ಪನೆ ಇತ್ತು. ಆದರೆ ಜಾಗತೀಕರಣದ ಬಳಿಕ ಉದ್ಯೋಗಾವಕಾಶಗಳ ಹೊಸ ಸಾಧ್ಯತೆ ತೆರೆದುಕೊಂಡಿದೆ ಎಂದರು.
Related Articles
ಕೆಲಸ ಯಾವುದಾದರೂ ಪ್ರಾಮಾಣಿಕವಾಗಿ ದುಡಿಯುವ ಮನಸ್ಸು ಇರಬೇಕು. ಗುರಿ, ಕನಸು ಇದ್ದರೆ ಜೀವನದಲ್ಲಿ ಗೆಲ್ಲಬಹುದು. ಅದಕ್ಕಾಗಿ ಅಂಜಿಕೆ, ಅವಮಾನಗಳನ್ನು ದೂರವಿಟ್ಟು ನಾವು ಮಾಡುವ ಕೆಲಸವನ್ನು ಗೌರವಿಸಬೇಕು ಎಂದರು.
Advertisement
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾ.ಪಂ. ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ತಾ.ಪಂ. ತನ್ನ ಪರಿಧಿಯೊಳಗೆ ಮಾತ್ರ ಕೆಲಸ ಮಾಡದೆ ಸಾರ್ವಜನಿಕರಿಗೂ ಪ್ರಯೋಜನವಾಗು ವಂತಹ ಕಾರ್ಯ ಕ್ರಮ ಆಯೋಜಿಸುವ ಉದ್ದೇಶ ಇದರ ಹಿಂದಿದೆ. ಮಕ್ಕಳು ಉತ್ತಮ ಉದ್ಯೋಗ ಪಡೆದು ತಂದೆ -ತಾಯಿ ಇಟ್ಟಿರುವ ಭರವಸೆಯನ್ನು ಈಡೇರಿಸ ಬೇಕು ಎಂದರು. ಮುಂದಿನ ವರ್ಷ ಹಲವರನ್ನು ಸೇರಿಸಿಕೊಂಡು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ಮೇಳ ಹಮ್ಮಿ ಕೊಳ್ಳಲು ಪ್ರಯತ್ನ ನಡೆಸಲಾಗುವುದು ಎಂದರು.
ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷ ಚೇತನ್ ಪ್ರಕಾಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಶುಭಹಾರೈಸಿದರು. ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ತಿಮ್ಮಪ್ಪ ಪಾಟಾಳಿ ಉಪಸ್ಥಿತರಿದ್ದರು.
ಈಶ ವಿದ್ಯಾಲಯದ ಪ್ರಾಂಶುಪಾಲ ಎಂ. ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಇಒ ಜಗದೀಶ್ ಎಸ್. ಸ್ವಾಗತಿಸಿ, ತಾ.ಪಂ. ಪ್ರಭಾರ ವ್ಯವಸ್ಥಾಪಕ ಶಿವಪ್ರಕಾಶ್ ವಂದಿಸಿ,ಜೆಸಿಐ ತರಬೇತುದಾರ ಪಶುಪತಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
37 ಕಂಪೆನಿಗಳು ಭಾಗಿಉದ್ಯೋಗ ಮೇಳದಲ್ಲಿ ಬೆಂಗಳೂರು, ಮಂಗಳೂರು, ಪುತ್ತೂರಿನ 37 ಕಂಪೆನಿಗಳು ಭಾಗವಹಿಸಿದವು. ಎಸೆಸೆಲ್ಸಿ ಪೂರ್ವದ ಅಭ್ಯರ್ಥಿಗಳಿಂದ ಹಿಡಿದು ಸ್ನಾತಕೋತ್ತರ ಪದವೀಧರರವರೆಗೆ, ಡಿಪ್ಲೊಮಾ, ಎಂಜಿನಿಯರಿಂಗ್ ಅಭ್ಯರ್ಥಿಗಳಿಗೂ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡರು. ಉದ್ಯೋಗಕಾಂಕ್ಷಿಗಳಿಗೆ ಉಪಾಹಾರ, ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.