Advertisement
ಶಿಕ್ಷಣ ಫೌಂಡೇಷನ್ ಮತ್ತು ಆಶಾ ಫಾರ್ ಎಜುಕೇಷನ್ ಸಂಸ್ಥೆ ಸಹಭಾಗಿ ತ್ವದಲ್ಲಿ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆಯಾದ ತಾಲೂಕಿನ 8 ಗ್ರಾಪಂ ಗ್ರಂಥಾಲಯಗಳಿಗೆ ಮೊಬೈಲ್, ಟೀವಿ ಹಾಗೂ ವೈಫೈ ರೂಟರ್ ಜೊತೆಗೆ ಒಂದು ವರ್ಷದ ಇಂಟರ್‌ನೆಟ್ ಡಿಜಿಟಲ್ ಸಾಮಗ್ರಿಗಳ ವಿತರಣೆ ಮಾಡಲಾಗಿತ್ತು. ಆ ಗ್ರಂಥಾಲಯಗಳಲ್ಲಿ ಪ್ರತಿ ತಿಂಗಳಿಗೊಂದ ರಂತೆ ಗ್ರಾಮ ಡಿಜಿ ವಿಕಾಸ ಗ್ರಂಥಾಲಯ ಕೇಂದ್ರಗಳಲ್ಲಿ ಯುವಕರು ಆಯ್ಕೆ ಮಾಡಿದ ವಿಷಯದ ಮೇಲೆ ಆನ್‌ಲೈನ್ ಮೂಲಕ ಕಾರ್ಯಗಾರ ಏರ್ಪಡಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಆಯ್ಕೆಯಾಗಿದ್ದ ವೃತ್ತಿ ಮಾರ್ಗದರ್ಶನ ವಿಷಯದ ತರಬೇತಿ ಕಾರ್ಯಗಾರಕ್ಕೆ 8 ಗ್ರಂಥಾ ಲಯ ಕೇಂದ್ರದಿಂದ 185 ಯುವಕರು ಆನ್‌ಲೈನ್ ವೇದಿಕೆ ಮೂಲಕ ಭಾಗವಹಿಸಿದ್ದರು. ಜಿಎಚ್‌ಪಿಎಸ್ ಕಲ್ಲಹಳ್ಳಿ ಶಾಲೆಯ ಮುಖ್ಯೋ ಪಾಧ್ಯಯ ಕೆ.ಟಿ. ಶ್ರೀನಿವಾಸ ಮೂರ್ತಿ ರವರು ಆನ್‌ಲೈನ್ ವೇದಿಕೆ ಮೂಲಕ ವೃತ್ತಿ ಮಾರ್ಗದರ್ಶನ ತರ ಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
Advertisement
ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ
02:46 PM Nov 14, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.