Advertisement
ಪಠ್ಯಕ್ರಮ ಬೋಧನೆಯಲ್ಲಿ, ಶಿಸ್ತಿನ ವಿಚಾರದಲ್ಲಿ, ಭವಿಷ್ಯದ ಪ್ರಜೆಗಳನ್ನು ರೂಪಿಸುವಲ್ಲಿ ಸೈನಿಕ ಶಾಲೆಗಳಿಗೆ ಅಗ್ರಸ್ಥಾನ. ಯಾರಾದರೂ ವಿದ್ಯಾರ್ಥಿ ತುಂಬಾ ಚುರುಕಾಗಿದ್ದಾನೆ, ಶಿಸ್ತಿನ ಬದುಕು ಸಾಗಿಸುತ್ತಿದ್ದಾನೆ ಅಂದರೆ ಅಯ್ಯೋ ಅವನು ಆರ್ಮಿ ಸ್ಕೂಲಲ್ಲಿ ಓದಿದ್ದು, ಅದೇ ಕಾರಣಕ್ಕೆ ಇಷ್ಟೊಂದು ಶ್ರದ್ಧೆ, ಶಿಸ್ತು ಎಂದು ಹಲವರು ಹೇಳುವುದುಂಟು. ಈ ಮಾತಿನಲ್ಲಿ ಖಂಡಿತ ಉತ್ಪ್ರೇಕ್ಷೆ ಇಲ್ಲ.ಸೇನಾಶಿಬಿರಗಳು ಇರುತ್ತವಲ್ಲ, ಆ ಪ್ರದೇಶದಲ್ಲಿ ವಾಸಿಸುವ ಯೋಧರ ಮಕ್ಕಳ ಶಿಕ್ಷಣಕ್ಕೆಂದು ಆರ್ಮಿ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸಲಾಯಿತು. ಆಗ ದೇಶಾದ್ಯಂತ 137 ಆರ್ಮಿ ಪಬ್ಲಿಕ್ ಸ್ಕೂಲ್‌ಗಳಿವೆ. “ಸತ್ಯವೇ ದೇವರು, ಧೈರ್ಯಂ ಸರ್ವತ್ರ ಸಾಧನಂ’ ಎಂಬುದು ಈ ಶಾಲೆಗಳ ಧ್ಯೇಯ ವಾಕ್ಯ. ಸಿ.ಬಿ.ಎಸ್.ಇ ಪಠ್ಯಕ್ರಮ ಹೊಂದಿರುವ ಆರ್ಮಿ ಸ್ಕೂಲ್‌ನಲ್ಲಿ ಶಿಕ್ಷಕರಾಗಬೇಕು. ಆ ಮೂಲಕ ಪರೋಕ್ಷವಾಗಿ ದೇಶ ಸೇವೆ ಮಾಡಿದ ಸಂತೃಪ್ತಿಗೆ ಪಾತ್ರರಾಗಬೇಕು ಎಂದು ಹಂಬಲಿಸುವವರಿಗೆ ಕೊರತೆಯಿಲ್ಲ. ಒಂದು ಕಡೆಯಲ್ಲಿ ದೇಶಸೇವೆ ಮಾಡಿದ ಧನ್ಯತೆಯನ್ನು ಮತ್ತೂಂದು ಕಡೆ ಬದುಕಿಗೆ ಭದ್ರತೆ ಒದಗಿಸುವ ನೌಕರಿ ಪಡೆದ ಸಾರ್ಥಕ್ಯವನ್ನು ಹೊಂದಲು ಈ ಅವಕಾಶ ಅನುವು ಮಾಡಿಕೊಡುತ್ತದೆ.
ಸೈನಿಕ ಶಿಕ್ಷಕ ಹುದ್ದೆ ಹೊಂದಬಯಸುವ ಅಭ್ಯರ್ಥಿಗಳು ಪಿಜಿಟಿ, ಟಿಜಿಟಿ ಮತ್ತು ಪಿಆರ್‌ಟಿಯಲ್ಲಿ ಅಂದರೆ ಆಯಾ ವಿಷಯಗಳನ್ನು ಕುರಿತಂತೆ ಸ್ನಾತಕೋತ್ತರ ಪದವಿಯಲ್ಲಿ, ಪದವಿಯಲ್ಲಿ ತಲಾ ಶೇ. 50 ಅಂಕಗಳನ್ನು ಪಡೆದಿರಬೇಕು. ಬಿ.ಎಡ್ ಮತ್ತು ವೃತ್ತಿ ಅನುಭವನ್ನು ಶೇ.50 ಎಂದು ಪರಿಗಣಿಸಲಾಗುವುದು. ಇನ್ನು ಪಿಜಿಟಿ-36, ಟಿಜಿಟಿ, ಪಿಆರ್‌ಟಿಗೆ 29 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟರಿಗೆ ಐದು ವರ್ಷ ವಯೋಮಿತಿ ಸಡಿಲಿಕೆಯಿದೆ.
Related Articles
ಆರ್ಮಿ ಶಾಲೆಯಲ್ಲಿ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳು ಮೂರು ವರ್ಷಗಳ ಶೈಕ್ಷಣಿಕ ಅನುಭವ ಮತ್ತು ಒಂದು ವರ್ಷ ಸಿಬಿಎಸ್‌ಇ ಶಿಕ್ಷಕರಾಗಿ ಶೈಕ್ಷಣಿಕ ಅನುಭವ ಪಡೆದಿರಬೇಕು. ಅಭ್ಯರ್ಥಿಗಳು ಆರ್ಮಿ ವೆಲ್ಫೆರ್ ಎಜುಕೇಷನ್ ಸೊಸೈಟಿ(ಎಡಬ್ಲೂಇಎಸ್) ನಿಗದಿ ಮಾಡುವ ಪ್ರದೇಶದ ಶಾಲೆಯಲ್ಲಿ ಶಿಕ್ಷಕರಾಗಲು ಒಪ್ಪಬೇಕು. ಭಾಷಾ ಶಿಕ್ಷಕರು ಮತ್ತು ಐಚ್ಛಿಕ ವಿಷಯಗಳ ಶಿಕ್ಷಕರು ಪಠ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ಗಣಕ ಜ್ಞಾನವನ್ನು ಕಡ್ಡಾಯವಾಗಿ ಪಡೆದಿರಬೇಕು. ಈ ನಿಯಮಗಳನ್ನು ಮಾನ್ಯತೆ ಮಾಡುವ ಪಿಜಿಟಿ, ಟಿಜಿಟಿ, ಪಿಆರ್‌ಟಿ ಅಭ್ಯರ್ಥಿಗಳಿಗೆ ಆಯಾ ವಿಷಯಗಳಿಗೆ ಅನುಗುಣವಾಗಿ ನವೆಂಬರ್- 17, 18ರಂದು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಶುಲ್ಕ 500 ರೂ. ಇರುತ್ತದೆ.
Advertisement
ಅರ್ಜಿ ಸಲ್ಲಿಕೆ ಹೇಗೆ?ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದೆ. ಹೀಗಾಗಿ aps-csb.in ಜಾಲತಾಣದ ಮೂಲಕ ಒಳ ಪ್ರವೇಶಿಸಿ ಮೊದಲು ಅಗತ್ಯ ಮಾಹಿತಿ ತುಂಬಿ ರಿಜಿಸ್ಟರ್ ಆಗಬೇಕು. ಬಳಿಕ ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ಬಳಿಕ, (ಅರ್ಜಿ ಸಲ್ಲಿಕೆಗೆ ಮೊದಲೇ ಅಗತ್ಯ ದಾಖಲೆ, ಭಾವಚಿತ್ರ ಮುಂತಾದವನ್ನು ಒಂದು ಫೋಲ್ಡರ್‌ನಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುವುದು ಉತ್ತಮ) ಪಾಸ್‌ವರ್ಡ್ ಮೂಲಕ ಜಾಲತಾಣವನ್ನು ಪ್ರವೇಶಿಸಿ ಪರದೆಯಲ್ಲಿ ಪಿಜಿಟಿ, ಟಿಜಿಟಿಗೆ ಸಂಬಂಧಿಸಿದ ಮಾಹಿತಿ ತುಂಬಬೇಕು. ಪರೀಕ್ಷೆ ಸಮಯಕ್ಕೆ ಸರಿಯಾಗಿ ನಿಮ್ಮ ಮೇಲ್‌ಗೆ ನೋಟಿಫಿಕೇಷನ್ ಬರುತ್ತದೆ. ಅಡ್ಮಿಷನ್ ಕಾರ್ಡ್‌ಗಳನ್ನು ಆನ್‌ಲೈನ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ. 100 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ: goo.gl/gatH1v ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ಅಕ್ಟೋಬರ್ 24
ಪ್ರವೇಶ ಪತ್ರ ಪಡೆಯುವ ದಿನ- ನವೆಂಬರ್ 3
ಪರೀಕ್ಷಾ ದಿನ- ನವೆಂಬರ್ 17, 18
ಫಲಿತಾಂಶದ ದಿನ- ಡಿಸೆಂಬರ್ 3 – ಅನಂತನಾಗ್ ಎನ್.