Advertisement

ಕ್ಷಯರೋಗ ಪತ್ತೆಗೆ ಮುಂಜಾಗ್ರತೆ ಅಗತ್ಯ

02:28 PM Jul 22, 2019 | Team Udayavani |

ಬೀಳಗಿ: ಕ್ಷಯರೋಗ ಮನುಷ್ಯನ ಶಕ್ತಿಹೀನತೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷಯ ರೋಗದ ಕುರಿತು ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಗಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ವಿ.ಗವಳಿ ಹೇಳಿದರು.

Advertisement

ಗಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಿಸನಾಳ ಗ್ರಾಮದಲ್ಲಿ ಕ್ಷಯರೋಗ ಪತ್ತೆ ಮತ್ತು ತಡೆಗಟ್ಟುವ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಮ್ಮು, ಜ್ವರ, ತೂಕ ಕಡಿಮೆ, ಹಸಿವೆಯಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡು ಬಂದರೆ ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಕ್ಷಯರೋಗದ ಉಚಿತ ಔಷಧೋಪಚಾರ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಈಗಾಗಲೇ ತಾಲೂಕಿನ ಶಿವಾಪುರ, ಗುಳಬಾಳ, ಬಾಡಗಿ ಬೂದಿಹಾಳ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಈ ರೋಗ ಹರಡುವಿಕೆ ಲಕ್ಷಣ ಹಾಗೂ ಇದನ್ನು ತಡೆಗಟ್ಟುವ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಜನರ ಆರೋಗ್ಯ ಸುರಕ್ಷತೆಗಾಗಿ ಸರಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಿರಿಯ ಆರೋಗ್ಯ ಸಹಾಯಕ ಶಿವು ಗೋಕಾವಿ, ಕಿರಿಯ ಆರೋಗ್ಯ ಸಹಾಯಕಿ ವಿದ್ಯಾ ಕಲಾಲ, ವಿಜಯಲಕ್ಷ್ಮೀ ಚಿತ್ತವಾಡಗಿ, ರೇಣುಕಾ ಪಲ್ಲೇದ, ಮಲೆವ್ವ ಮಾದರ, ಶಿವಲೀಲಾ ಬೀಳಗಿ, ಸಾಬಣ್ಣ ಕೂಗಟಿ, ರಾಮಣ್ಣ ಹನುಮರ, ಯಲ್ಲಪ್ಪ ಹನುಮರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next