Advertisement
ಬ್ಯಾಂಕುಗಳು ಗ್ರಾಹಕರಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ನೀಡಿದಾಗ ಅವುಗಳಲ್ಲಿ ಎಟಿಎಂ, ಪಾಯಿಂಟ್ ಆಫ್ ಸೇಲ್ಸ… ಆನ್‌ಲೈನ್ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ, ಇಂಟರ್ನೆಟ್- ಮೊಬೈಲ್, ಸಂಪರ್ಕ ರಹಿತ (Contactless Transaction), ಇ- ಕಾಮರ್ಸ್, ಸೌಲಭ್ಯಗಳು ಇರುತ್ತವೆ. ಸಾಮಾನ್ಯವಾಗಿ, ಗ್ರಾಹಕರು ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ…ಅನ್ನು ಹೆಚ್ಚು ಬಳಸುತ್ತಾರೆ. ಇಂದಿನ ಯುವಪೀಳಿಗೆ ಮತ್ತು ಸ್ವಲ್ಪ ಟೆಕ್ನಿಕಲ್ ತಿಳಿವಳಿಕೆ ಇದ್ದವರು ಉಳಿದ ಸವಲತ್ತುಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈ ಕಾರ್ಡ್‌ಗಳನ್ನು ನೀಡುವಾಗ, ಹಣ ಹಿಂಪಡೆಯುವ (ಡ್ರಾ ಮಾಡುವ) ಮತ್ತು ಅವರು ನಡೆಸುವ ವ್ಯವಹಾರದ ಗರಿಷ್ಠ ಮೊತ್ತ ಕೂಡಾ ನಿಗದಿಯಾಗಿರುತ್ತದೆ.
Related Articles
ಹೊಸ ನಿಯಮಾವಳಿ ಪ್ರಕಾರ, ಗ್ರಾಹಕರು ತಮಗೆ ಬೇಕಾದಾಗ ತಾವೇ ಆರಿಸಿದ ಸವಲತ್ತುಗಳನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡಬಹುದು. ಹಾಗೆಯೇ ವ್ಯವಹಾರದ ಗರಿಷ್ಠ ಮಿತಿಯನ್ನು ಬದಲಿಸಿಕೊಳ್ಳಬಹುದು. ಈ ರೀತಿ ತಮ್ಮ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಬಹುದು ಮತ್ತು ಮಾನಿಟರ್ ಮಾಡಬಹುದು. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ವಿದೇಶಕ್ಕೆ ಹೋದಾಗಷ್ಟೇ ಸ್ವಿಚ್ ಆನ್ ಮಾಡಿಕೊಳ್ಳಬಹುದು. ಇನ್ನುಮುಂದೆ, ಗ್ರಾಹಕರು ವಿದೇಶದಲ್ಲಿ ತಮ್ಮ ಕಾರ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ದೂರುವಂತಿಲ್ಲ.
Advertisement
ಗ್ರಾಹಕರಲ್ಲಿ ಕ್ರೆಡಿಟ್ ಕಾರ್ಡ್ ಇದ್ದು,ಅವರು ಅದನ್ನು ಅನ್‌ಲೈನ್ ಶಾಪಿಂಗ್ ಮತ್ತು ಇ- ಕಾಮರ್ಸ್ ವೆಬ್‌ಸೈಟ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಬಳಕೆ ಮಾಡುತ್ತಿದ್ದರೆ, ನಿಮ್ಮ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್‌ಗಳಲ್ಲಿ ಡಿಸೇಬಲ…(ಆಫ್) ಮಾಡಬಹುದು. ಗ್ರಾಹಕರು ಆಯಾ ವ್ಯವಹಾರಕ್ಕೆ ತಕ್ಕಂತೆ ತಮಗೆ ಬೇಕಾದ ಬದಲಾವಣೆಯನ್ನು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದು. ಈ ಹೊಸ ಮಾರ್ಗದರ್ಶಿಯ ಅನಂತರ ಬಹುತೇಕ ರಿಸ್ಕ್ಗಳು ಗ್ರಾಹಕರಿಗೆ ವರ್ಗಾವಣೆ ಆಗುತ್ತಿವೆ. ಇದು, ಗ್ರಾಹಕರ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ.
ಮುಖ್ಯಾಂಶಗಳು ಏನೇನು?-ಈ ವ್ಯವಸ್ಥೆ ದೇಶಾದ್ಯಂತ ಮಾರ್ಚ್ 16ರಿಂದ ಜಾರಿಗೆ ಬರಲಿದೆ.
-ಚಾಲ್ತಿಯಲ್ಲಿರುವ ಕಾರ್ಡ್‌ಗಳಲ್ಲಿ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ… ಬಿಟ್ಟು ಉಳಿದೆಲ್ಲ ಸವಲತ್ತುಗಳು ಸ್ಥಗಿತವಾಗುತ್ತವೆ.
-ಈ ಎರಡು ಸವಲತ್ತುಗಳನ್ನು ಬಿಟ್ಟು ಬೇರೆ ಸೌಲಭ್ಯಗಳು ಬೇಕಿದ್ದರೆ, ಬ್ಯಾಂಕಿಗೆ ಕೋರಿಕೆ ಸಲ್ಲಿಸಿ ಪಡೆಯಬೇಕಾಗುತ್ತದೆ.
-ಡ್ರಾ ಮಾಡುವ ಹಣದ ಗರಿಷ್ಠ ಮಿತಿಯನ್ನು ಗ್ರಾಹಕರೇ ಬ್ಯಾಂಕಿನ ಸಹಾಯದಿಂದ ನಿಗದಿಪಡಿಸಿಕೊಳ್ಳಬೇಕು.
-ಗ್ರಾಹಕರೇ ತಮ್ಮ ಕಾರ್ಡನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡಿಕೊಳ್ಳಬಹುದು. ಬಳಕೆ ಮಾಡುವ ಸಮಯದಲ್ಲಿ ಮಾತ್ರ ಸ್ವಿಚ್ ಆನ್ ಮಾಡಿಕೊಳ್ಳಬಹುದು.
-ಇನ್ನು ಮೇಲೆ ಹೊಸ ಕಾಡ್ಗìಳಲ್ಲಿ ಆಂತರಿಕ ವ್ಯವಹಾರ (Domestic) ಕೇವಲ ಏಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ಸ… ಸೌಲಭ್ಯಗಳು ಮಾತ್ರ ಇರುತ್ತವೆ. ಉಳಿದ ಸೌಲಭ್ಯಗಳು ಬೇಕಿದ್ದರೆ ಕೇಳಿ ಪಡೆಯಬೇಕು.
-ಅಂತಾರಾಷ್ಟ್ರೀಯ ವ್ಯವಹಾರದ ಸೌಲಭ್ಯ ಬೇಕಿದ್ದರೆ, ವಿಶೇಷವಾಗಿ ಕೇಳಿ ಪಡೆಯಬೇಕು.
-ಯಾರಾದರೂ ಗ್ರಾಹಕರು ಈ ಮೊದಲು ಆನ್‌ಲೈನ್ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂಪರ್ಕ ರಹಿತ ವಹಿವಾಟುಗಳಿಗೆ ಬಳಸದಿದ್ದರೆ ಅಂಥವರ ಕಾರ್ಡ್‌ಗಳನ್ನು ಬ್ಯಾಂಕುಗಳು ಡಿಸೇಬಲ್ ಮಾಡಬಹುದು.
-ಗ್ರಾಹಕರು ಕಾರ್ಡ್‌ನಲ್ಲಿನ ಯಾವುದೇ ಸೌಲಭ್ಯವನ್ನು ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡಿಕೊಳ್ಳಬಹುದು.
-ಬ್ಯಾಂಕುಗಳು ಯಾವುದೇ ಕಾರ್ಡ್‌ನ್ನು ಸ್ಥಗಿತಗೊಳಿಸಿ ಹೊಸ ಕಾರ್ಡನ್ನು ನೀಡಬಹುದು. -ರಮಾನಂದ ಶರ್ಮಾ