Advertisement
ತಂತ್ರ:ಚಿತ್ರವನ್ನು ಸರಿಯಾಗಿ ಗಮನಿಸಿ. ಕವರಿನ ಇನ್ನೊಂದು ತುದಿಯನ್ನು ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಿ. ಕವರಿನಲ್ಲಿ ಕಾರ್ಡನ್ನು ಹಾಕುವಾಗ ಅದರ ಅರ್ಧದಷ್ಟು ಭಾಗ ಹೊರಬಂದಿರಬೇಕು. ಈ ಭಾಗವನ್ನು ಪ್ರೇಕ್ಷಕರಿಗೆ ಕಾಣಿಸದಂತೆ ನಿಮ್ಮ ಕೈನಿಂದ ಮುಚ್ಚಿಕೊಳ್ಳಿ. ಕವರಿನ ಬಾಯಿಯನ್ನು ಅಂಟಿಸಿ. ಈಗ ಒಂದು ದಾರವನ್ನು ಕವರಿನ ಮೇಲೆ ಮಾಡಿದ ತೂತುಗಳ ಮುಖಾಂತರ ಪೋಣಿಸಿ. ದಾರವು ಕಾರ್ಡಿನ ತೂತಿನ ಮೂಲಕ ಹೋಗದೆ ಬರೀ ಕವರಿನ ತೂತಿನ ಮುಖಾಂತರ ಹೊರಬರುತ್ತದೆ. ಕಾರ್ಡನ್ನು ಯಾರಿಗೂ ತಿಳಿಯದಂತೆ ಒಳಗೆ ತಳ್ಳಿ. ಇಬ್ಬರು ಸಹಾಯಕರನ್ನು ಕರೆದು ದಾರದ ಒಂದೊಂದು ತುದಿಯನ್ನು ಸಡಿಲವಾಗಿ ಹಿಡಿಯಲು ಹೇಳಿ. ಕವರಿನ ಮೊದಲೇ ಕತ್ತರಿಸಿದ್ದ ತುದಿಯನ್ನು ಹರಿದು ಕಾರ್ಡನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಡಿದುಕೊಂಡು ದಾರವನ್ನು ಎಳೆಯಲು ಹೇಳಿ. ಅವರು ಎಳೆಯುತ್ತಿದ್ದಂತೆ ಕಾರ್ಡನ್ನು ಒಮ್ಮೆಲೆ ಹೊರಗೆ ಎಳೆಯಿರಿ. ಕಾರ್ಡು ಹರಿಯದೆ ದಾರದ ಮೂಲಕ ಹೊರಬಂದಿದ್ದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಪಡುತ್ತಾರೆ.