Advertisement
ಕಾರ್ಡಿನ ಆಟ ಹೀಗೆ ಶುರು ಮಾಡಿ. ಜಾದೂಗಾರ ಇಸ್ಪೀಟ್ ಕಾರ್ಡಿನ ಎಲೆಗಳನ್ನು ತನ್ನ ಕೈಯಲ್ಲಿ ಹರಡಿಕೊಳ್ಳಬೇಕು. ನಂತರ, ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಯಾವುದಾದರೂ ಒಂದು ಕಾರ್ಡ್‌ಅನ್ನು ತೆಗೆದು ಅದನ್ನು ನೆನಪಿಟ್ಟುಕೊಂಡು, ಪುನಃ ಕಾರ್ಡ್‌ಗಳ ಜೊತೆ ಸೇರಿಸಲು ಹೇಳಬೇಕು. ಮಾತ್ರವಲ್ಲ ಅದನ್ನು ಜಾದೂಗಾರನಿಗೆ ತೋರಿಸಬಾರದು ಅಂತಹೇಳಬೇಕು. ಪ್ರೇಕ್ಷಕನು ಹಾಗೆಯೇ ಮಾಡುತ್ತಾನೆ. ಜಾದೂಗಾರ ಕ್ಷಣಾರ್ಧದಲ್ಲಿ ಆ ಕಾರ್ಡ್ ಅನ್ನು ಉಳಿದ ಕಾರ್ಡ್‌ಗಳ ಮಧ್ಯದಿಂದ ತೆಗೆದು ತೋರಿಸುತ್ತಾನೆ!!!???
ಇಸ್ಪೀಟ್ ಪ್ಯಾಕಿನ ಒಂದು ಬದಿಯಲ್ಲಿ ಸ್ಕೆಚ್ ಪೆನ್ನಿನಿಂದ ಮೂರು ಗೆರೆಗಳನ್ನು ಎಳೆದು ಸಿದ್ಧವಾಗಿಟ್ಟುಕೊಳ್ಳಿರಿ (ಒಂದನೇ ಚಿತ್ರವನ್ನು ಗಮನಿಸಿ). ಪ್ರೇಕ್ಷಕ ಕಾರ್ಡ್‌ಅನ್ನು ಆರಿಸುವಾಗ ಈ ಗೆರೆಗಳು ಆತನಿಗೆ ಕಾಣಿಸದಂತೆ ಎಚ್ಚರ ವಹಿಸಿ. ಆತ ಕಾರ್ಡ್‌ಅನ್ನು ತೆಗೆದು ನೋಡುವುದರೊಳಗೆ ನಿಮ್ಮ ಕೈಯಲ್ಲಿರುವ ಕಾರ್ಡ್‌ಗಳನ್ನು ಸಮನಾಗಿ ಜೋಡಿಸಿಕೊಂಡು, ಇಡೀ ಪ್ಯಾಕನ್ನು ತಿರುಗುಮುರುಗಾಗಿ ಹಿಡಿದಿಟ್ಟುಕೊಳ್ಳಿ. ಇದನ್ನು ಬಹಳ ಉಪಾಯವಾಗಿ ಮಾಡಬೇಕು. ಸ್ವಲ್ಪ ಯಡವಟ್ಟಾದರೂ ಕಷ್ಟವೇ. ನಂತರ, ಆರಿಸಿದ ಕಾರ್ಡ್‌ಅನ್ನು ಪ್ಯಾಕ್‌ನಲ್ಲಿ ಇಷ್ಟ ಬಂದ ಕಡೆ ಇಡಲು ಹೇಳಿ. ಈಗ ಆತನ ಕಾರ್ಡ್‌ಅನ್ನು ಗುರುತಿಸುವುದು ಬಹಳ ಸುಲಭ. ಆತನ ಕಾರ್ಡ್ ಇರುವಲ್ಲಿ ಪ್ಯಾಕಿನ ಒಂದು ಬದಿಯಲ್ಲಿ ಮೂರು ಗೆರೆಗಳು ತುಂಡಾಗಿರುತ್ತವೆ. ಇನ್ನೊಂದು ಬದಿಯಲ್ಲಿ ಮೂರು ಚುಕ್ಕೆಗಳಿರುತ್ತವೆ (ಎರಡನೇ ಚಿತ್ರವನ್ನು ಗಮನಿಸಿ). ಉದಯ್ ಜಾದೂಗಾರ್