Advertisement

ಕಾರ್ಬ್ ಸೈಕ್ಲಿಂಗ್‌; ತೂಕ ಇಳಿಕೆಗೆ ಹೊಸ ವಿಧಾನ

09:44 PM Apr 29, 2019 | Sriram |

ಕಾರ್ಬ್ ಸೈಕ್ಲಿಂಗ್‌ ತೂಕ ಇಳಿಕೆಗೆ ಹುಟ್ಟಿಕೊಂಡಿರುವ ಹೊಸ ಡಯೆಟ್‌ ಟ್ರೆಂಡ್‌. ಈ ಆಹಾರ ಪದ್ಧತಿ ಇಂದು ದೇಹದಾಡ್ಯì ಮತ್ತು ಕ್ರೀಡಾಪಟುಗಳಲ್ಲಿ ಜನಪ್ರಿಯವಾಗುತ್ತಿದೆ. ಇತರ ಡಯೆಟ್‌ಗಳಿಗಿಂತ ಕಾರ್ಬ್ ಸೈಕ್ಲಿಂಗ್‌ ಹೆಚ್ಚು ಜಟಿಲವಾಗಿದೆ.

Advertisement

ಏನಿದು
ಕಾರ್ಬ್ ಸೈಕ್ಲಿಂಗ್‌?
ಕಾರ್ಬ್ ಸೈಕ್ಲಿಂಗ್‌ ಎಂದರೆ ದೈನಂದಿನ, ವಾರದ ಮತ್ತು ತಿಂಗಳ ಆಧಾರದಲ್ಲಿ ಕಾಬೋಹೈಡ್ರೇಟ್‌ ಸೇವನೆಯನ್ನು ಹೆಚ್ಚು, ಕಡಿಮೆ, ಮಧ್ಯಮ ವಾಗಿಡುವುದು. ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು, ಕೊಬ್ಬು ಕರಗಿಸಲು ಕಾರ್ಬ್ ಸೈಕ್ಲಿಂಗ್‌ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಕಾಬೊìಹೈಡ್ರೇಟ್‌ ಸೇವನೆಯು ಅಗತ್ಯವಾಗಿದ್ದಾಗ ಹೆಚ್ಚಿಸುವುದು ಮತ್ತು ಅಗತ್ಯವಿಲ್ಲದಿದ್ದಾಗ ಕಡಿಮೆಗೊಳಿಸುವುದು.

ಈ ಹೊಸ ಆಹಾರ ಪದ್ಧತಿ ದೇಹದ ಕ್ಯಾಲೋರಿ ಮತ್ತು ಗ್ಲೂಕೋಸ್‌ ಅಗತ್ಯತೆಯನ್ನು ಕಾಪಾಡುತ್ತದೆ. ಹೆಚ್ಚಿನ ಕಾಬೊì ಹೈಡ್ರೇಟ್‌ ಕಾರ್ಯಕ್ಷಮತೆ ಸುಧಾರಿಸಲು ಸಹಕರಿಸುತ್ತದೆ. ಕಡಿಮೆ ಕಾರ್ಬ್ ಡಯೆಟ್‌ ದೇಹವನ್ನು ಕೊಬ್ಬು ಆಧಾರಿತ ಶಕ್ತಿಯ ವ್ಯವಸ್ಥೆಗೆ ಬದಲಾಯಿಸಲು ನೆರವಾಗುತ್ತದೆ. ಇದು ಚಯಾಪಚಯ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಳೆದುಕೊಳ್ಳಲು ದೇಹಕ್ಕೆ ಬೇಕಾದ ಸಾಮರ್ಥ್ಯವನ್ನು ಒದಗಿಸುತ್ತದೆ.

ತೂಕ ಇಳಿಕೆಗೆ ಪೂರಕ
ಕಾರ್ಬ್ ಸೈಕ್ಲಿಂಗ್‌ ದೇಹದಲ್ಲಿ ಕ್ಯಾಲೋರಿ ಕೊರತೆಯನ್ನು ಸೃಷ್ಟಿಸುತ್ತದೆ. ಇದರಿಂದ ಶೀಘ್ರ ದಲ್ಲಿ ದೇಹದ ತೂಕ ಇಳಿಸಬಹುದು. ಈ ಡಯೆಟ್‌ ಯೋಜನೆಯಿಂದ ತೂಕವನ್ನು ಬೇಗನೆ ಕಳೆದುಕೊಳ್ಳಬಹುದು. ಹೆಚ್ಚು ಕಾಬೊìಹೈಡ್ರೇಟ್‌ ಆಹಾರ ಸೇವಿಸುವಾಗ, ಕಡಿಮೆ ಕೊಬ್ಬಿನ ಆಹಾರ ಸೇವಿಸಬೇಕು. ಒಂದುವೇಳೆ ದಿನದಲ್ಲಿ ಕಡಿಮೆ ಕಾರ್ಬ್ ಆಹಾರ ಸೇವಿಸಿದರೇ ಕೊಬ್ಬಿನ ಆಹಾರವನ್ನು ಹೆಚ್ಚಿಸಬೇಕಾಗುತ್ತದೆ.

– ಕಾರ್ಬ್ ಸೈಕ್ಲಿಂಗ್‌ ಅಲ್ಪಾವಧಿಯ ಅನುಸರಿಸುವಿಕೆಗೆ ಉತ್ತಮ. ದೀರ್ಘ‌ಕಾಲಿಕ ಪ್ರಯೋಜದ ಕುರಿತು ಸ್ಪಷ್ಟ ಮಾಹಿತಿಯಿಲ್ಲ
– ಹೈ ಕಾಬೊìಹ್ರೈಡ್ರೇಟ್‌ ಸೇವನೆಯಲ್ಲಿ ಆರೋಗ್ಯಕರ ಆಹಾರ, ಫೈಬರ್‌ ಮತ್ತು ಕಾಬೊìಹೈಡ್ರೇಟ್‌ ಹೆಚ್ಚಿರುವ ಧಾನ್ಯಗಳು, ಬೀನ್ಸ್‌ ಮತ್ತು ಮೊಸರಿನಂತಹ ಆಹಾರಗಳನ್ನು ಆಯ್ಕೆ ಇರಬೇಕು.
– ಮಾನಸಿಕ ಅಸ್ವಸ್ಥತೆ, ಮೆಟಬಾಲಿಕ್‌ ಸಿಂಡ್ರೋಮ್‌, ಮಧುಮೇಹ, ಹೃದ್ರೋಗ, ಗರ್ಭಿಣಿ ಅಥವಾ ಹಾಲುಣಿಸುವ ತಾಯಿಯಾಗಿದ್ದರೆ ಈ ಡಯೆಟ್‌ ಪಾಲನೆ ಒಳ್ಳೆಯದಲ್ಲ.

Advertisement

– ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next