Advertisement

ಲಕ್ನೋದಲ್ಲೂ ಟೋಯಿಂಗ್‌ ರದ್ದು; ಪ್ರಯಾಣಿಕರಿದ್ದ ಕಾರನ್ನೇ ಕೊಂಡೊಯ್ದ ಸಿಬ್ಬಂದಿ

11:27 PM Feb 13, 2022 | Team Udayavani |

ಲಕ್ನೋ: ಬೆಂಗಳೂರಿನಲ್ಲಿ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಟೋಯಿಂಗ್‌ ಅನ್ನು ರದ್ದುಪಡಿಸಲಾಗಿದೆ. ಅದೇ ರಿತೀಯ ಬೆಳವಣಿಗೆ ಉ.ಪ್ರ.ರಾಜಧಾನಿ ಲಕ್ನೋದಲ್ಲಿ ನಡೆದಿದೆ.

Advertisement

ಲಕ್ನೋದ ಹಜರ್‌ಗಂಜ್‌ನ ಜ್ಞಾನಪಥ ಎಂಬಲ್ಲಿ ಸುನೀಲ್‌ ಎಂಬುವರು ಕಾರು ನಿಲ್ಲಿಸಿ ಏನನ್ನೋ ಖರೀದಿಗೆಂದು ತೆರಳಿದ್ದರು. ಕಾರಿನಲ್ಲಿದ್ದವರು ಮಾತನಾಡುತ್ತಿದ್ದಂತೆಯೇ ಅಲ್ಲಿಗೆ ಬಂದ ಟೋಯಿಂಗ್‌ ವಾಹನ ಕಾರನ್ನು ಎಳೆದುಕೊಂಡು ಹೋಗಲು ಮುಂದಾಯಿತು. ನಿಯಮಗಳ ಪ್ರಕಾರ ಕಾರಿನಲ್ಲಿ ಪ್ರಯಾಣಿಕರು ಇದ್ದರೆ, ಟೋಯಿಂಗ್‌ ಮಾಡುವಂತೆ ಇಲ್ಲ. ಸಿಬ್ಬಂದಿಯ ಕೃತ್ಯವನ್ನು ಸ್ಥಳೀಯರು ವಿಡಿಯೋ ಮತ್ತು ಫೋಟೋ ತೆಗೆದು, ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದ್ದಾರೆ.

ಇದನ್ನೂ ಓದಿ:ಅಮೆರಿಕಾ ಎಚ್ಚರಿಕೆಯ ನಡುವೆಯೂ ಉಕ್ರೇನ್ ಮೇಲೆ ರಷ್ಯಾ ದಾಳಿ?

ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಲಕ್ನೋ ಮಹಾನಗರ ಪಾಲಿಕೆ ಆಯುಕ್ತ ಅಜಯ ದ್ವಿವೇದಿ ತನಿಖೆಗೆ ಆದೇಶ ನೀಡಿದ್ದಾರೆ.

ಸೂಕ್ತ ತನಿಖೆ ನಡೆಸಿ ತಪ್ಪಿಸತ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಜತೆಗೆ ಟೋಯಿಂಗ್‌ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next