Advertisement
ಈಶಾನ್ಯ ಭಾರತದ ಹಲವು ಯೋಜನೆಗÙಲ್ಲಿ ಜಪಾನ್ ತೊಡಗಿಸಿಕೊಂಡಿದ್ದು, ಇದಕ್ಕಾಗಿ ಮೋದಿ ಜಪಾನ್‌ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಬುಲೆಟ್ ರೈಲು ಯೋಜನೆಯಲ್ಲೂ ಜಪಾನ್‌ನ ಜೈಕಾ ಸಂಸ್ಥೆ ತೊಡಗಿಸಿಕೊಂಡಿದ್ದು, ಈ ಕುರಿತೂ ಚರ್ಚೆ ನಡೆಸಲಾಗಿದೆ. ಭಾರತದಲ್ಲಿ ವಿಪತ್ತು ನಿರ್ವಹಣೆ ಕುರಿತ ಮೂಲಸೌಕರ್ಯದಲ್ಲಿ ಜಪಾನ್ ನೀಡಿದ ನೆರವನ್ನು ಮೋದಿ ಈ ವೇಳೆ ನೆನಪಿಸಿಕೊಂಡಿದ್ದಾರೆ.
Related Articles
ಪ್ರಧಾನಿ ಮೋದಿ ಜಪಾನ್‌ನ ಕೊಬೆಯಲ್ಲಿರುವ ಹ್ಯೂಗೋ ಪ್ರಿಫೆಕ್ಟರ್ ಗೆಸ್ಟ್ ಹೌಸ್‌ಗೆ ಕಾಲಿಡುತ್ತಿದ್ದಂತೆಯೇ ಜೈ ಶ್ರೀರಾಮ್, ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗಿದೆ. ಇಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
Advertisement
ಮೋದಿ ಆಗಮಿಸುತ್ತಿದ್ದಂತೆಯೇ ಇಲ್ಲಿ ಸೇರಿದ್ದ ಜನರು ಘೋಷಣೆಗಳನ್ನು ಕೂಗಿದರು. ಭಾರತದ ಅಭಿವೃದ್ಧಿಯಲ್ಲಿ ಜಪಾನ್ ಮಹತ್ವದ ಪಾತ್ರ ವಹಿಸಿದೆ. ಕಾರಿನಿಂದ ಬುಲೆಟ್ ರೈಲಿನವರೆಗೂ ಜಪಾನ್‌ನ ಸ್ನೇಹ ಹಸ್ತ ಚಾಚಿದೆ. ಭಾರತದ ಬಹತೇಕ ದೊಡ್ಡ ಯೋಜನೆಗಳಲ್ಲಿ ಜಪಾನ್‌ನ ಪಾತ್ರವಿದೆ ಎಂದು ಮೋದಿ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಹೇಳುತ್ತಿದ್ದ ಮೂರು ಮಂಗಗಳ ಕಥೆಯು 17ನೇ ಶತಮಾನದ ಜಪಾನ್ ಜಾನಪದ ಕಥೆಯಾಗಿತ್ತು. ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನುಡಿಯಬೇಡ ಎಂಬ ನೀತಿಯುಳ್ಳ ಈ ಕಥೆಯನ್ನು ಅವರು ಜಪಾನ್‌ನಿಂದ ತಂದು ನಮಗೆ ಹೇಳಿದ್ದರು ಎಂದೂ ಮೋದಿ ಈ ವೇಳೆ ನೆನಪಿಸಿಕೊಂಡಿದ್ದಾರೆ.
ಜಿ20ಯಲ್ಲಿ ವ್ಯಾಪಾರ, ಯುದ್ಧದ್ದೇ ಸದ್ದು!ಒಸಾಕಾದಲ್ಲಿ 28, 29ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಈ ಬಾರಿ ಅತಿ ಹೆಚ್ಚು ಚರ್ಚೆಗೆ ಒಳಗಾಗುವ ವಿಷಯವೇ ಅಮೆರಿಕ, ಚೀನ ಹಾಗೂ ಇತರ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ವ್ಯಾಪಾರ ಸಂಘರ್ಷ ಎಂಬುದು ಬಹುತೇಕ ನಿಚ್ಚಳವಾಗಿದೆ. ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಶೃಂಗದಲ್ಲಿ ವ್ಯಾಪಾರ ಸಂಘರ್ಷ, ಇರಾನ್ ಹಾಗೂ ಅಮೆರಿಕದ ಸಂಘರ್ಷ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಆದರೆ ಅದೆಲ್ಲಕ್ಕಿಂತ ಹೆಚ್ಚು ಪ್ರಮುಖವಾಗಿ ವ್ಯಾಪಾರ ಸಂಘರ್ಷ ಚರ್ಚೆಗೆ ಒಳಗಾಗ ಲಿದೆ. ಶನಿವಾರ ಟ್ರಂಪ್ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಲಿದ್ದಾರೆ. ಇರಾನ್ ಹಾಗೂ ಅಮೆ ರಿಕದ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷವೂ ಚರ್ಚೆ ಬರುವ ಸಾಧ್ಯತೆಯಿದೆ. ಭಾರತದ ವಿರುದ್ಧ ಹರಿಹಾಯ್ದ ಟ್ರಂಪ್
ಭಾರತ ವಿಧಿಸಿರುವ ತೆರಿಗೆಯನ್ನು ಒಪ್ಪಲಾಗದು. ಶೀಘ್ರವೇ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯಬೇಕು ಎಂದು ಭಾರತದ ವಿರುದ್ಧ ಟ್ರಂಪ್ ಹರಿಹಾಯ್ದಿದ್ದಾರೆ. ಇತ್ತೀಚೆಗೆ ಭಾರತವನ್ನು ಆದ್ಯತೆಯ ರಾಷ್ಟ್ರ ಎಂಬ ಪಟ್ಟಿಯಿಂದ ಅಮೆರಿಕ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಅಮೆರಿಕದ 28 ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೆಚ್ಚಳ ಮಾಡಿತ್ತು. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಮಾತುಕತೆ ನಡೆಸಲಿದ್ದು, ಇದಕ್ಕೂ ಮುನ್ನ ಟ್ರಂಪ್ ಈ ಹೇಳಿಕೆ ಮಹತ್ವ ಪಡೆದಿದೆ. ಅಲ್ಲದೆ ಮೋದಿ ಜೊತೆಗೆ ಮಾತುಕತೆ ವೇಳೆ ಈ ವಿಚಾರವನ್ನು ಪ್ರಸ್ತಾವಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.