Advertisement
ನಿಯಮಿತವಾಗಿ ಪರಿಶೀಲನೆಕಾರಿನ ಟಯರ್ ಬಗ್ಗೆ ನಿಯಮಿತವಾಗಿ ನೀವೇ ಪರಿಶೀಲನೆ ನಡೆಸಿ. ವಾಹನವನ್ನು ತೊಳೆಯುವ ವೇಳೆ ಅಥವಾ ಪ್ರಯಾಣ ಹೊರಡುವ ಮುನ್ನ ನಾಲ್ಕೂ ಟಯರ್‌ಗಳ ಮೇಲೆ ಕಣ್ಣು ಹಾಯಿಸಿ. ಅಪರೂಪಕ್ಕೆ ಕಾರನ್ನು ಬಳಸುವ ಅಭ್ಯಾಸವಿದ್ದರೆ, ಕಾರು ಹೆಚ್ಚಾಗಿ ನಿಂತೇ ಇರುತ್ತದೆ. ನಿಂತೇ ಇರುವ ಸಂದರ್ಭದಲ್ಲಿ ಟಯರ್‌ನ ಗಾಳಿ ಕಡಿಮೆಯಾಗುವುದು ಬೇಗ. ಆದ್ದರಿಂದ ನಾಲ್ಕೂ ಟಯರ್‌ಗಳಲ್ಲಿ ಗಾಳಿ ಸರಿಯಾಗಿದೆಯೇ ಎಂದು ವೀಕ್ಷಿಸಿ.
ಯಾವುದೇ ವಾಹನವಾದರೂ ಕನಿಷ್ಠ 15 ದಿನಕ್ಕೊಮ್ಮೆಯಾದರೂ ಗಾಳಿಯನ್ನು ಪರಿಶೀಲಿಸುತ್ತಿರಬೇಕು. ನೈಟ್ರೋಜನ್ ಆದರೆ ಸುಮಾರು 25 ದಿನಕ್ಕೊಮ್ಮೆ ಪರಿಶೀಲಿಸುವುದು ಉತ್ತಮ. ಟ್ರೆಡ್
ಟಯರ್‌ನಗಳ ಮಧ್ಯೆ ಗೀರುಗಳಿರುತ್ತವೆ. ಇದಕ್ಕೆ ಟ್ರೆಡ್ ಎಂದು ಹೆಸರು. ಈ ಟ್ರೆಡ್‌ಗಳು ಸರಿಯಾಗಿ ಒಂದೇ ಪ್ರಮಾಣದಲ್ಲಿ ಸವೆಯಬೇಕು. ಯಾವುದಾದರೂ ಟ್ರೆಡ್ ಹೆಚ್ಚು ಸವೆಯುತ್ತದೆ ಎಂದಾದಲ್ಲಿ ಆ ಭಾಗದಲ್ಲಿ ಸಮಸ್ಯೆಯಿದೆ ಎಂದರ್ಥ. ಬ್ಯಾಲೆನ್ಸಿಂಗ್ ಸಮಸ್ಯೆಯಿಂದ ಹೀಗಾಗುವ ಸಾಧ್ಯತೆ ಇದೆ. ಈ ಟ್ರೆಡ್ ಪರಿಶೀಲನೆಗೆ ಸುಲಭದ ಉಪಾಯವೆಂದರೆ ಒಂದು ರೂಪಾಯಿ ನಾಣ್ಯ ತೆಗೆದು ಎಲ್ಲ ಟ್ರೆಡ್‌ಗಳಲ್ಲಿ ಇಟ್ಟು ನೋಡಬೇಕು. ಎಲ್ಲವೂ ಒಂದೇ ರೀತಿ ಸವೆದಿದ್ದರೆ ಚಿಂತೆ ಇಲ್ಲ. 2 ಎಂಎಂಗಿಂತ ಹೆಚ್ಚು ಸವೆದಿದ್ದರೆ ಬದಲಿಸಬೇಕಾಗಬಹುದು. ಟಯರ್ ಟ್ರೆಡ್ ಸಂಪೂರ್ಣ ಸವೆದರೆ ಟಯರ್ ಬದಲಾಯಿಸುವುದು ಉತ್ತಮ.
Related Articles
ಕಾರಿನ ಟಯರ್‌ಗಳು ಒಳಮುಖವಾಗಿದ್ದು, ಭಾರ ಬಿದ್ದಂತೆ ರಸ್ತೆಗೆ ಸಮವಾಗಿರ ಬೇಕಾಗುತ್ತದೆ. ಕಾರಿನ ಟಯರ್‌ಗಳು ಸರಿ ಯಾಗಿರುತ್ತವೆೆ ಮತ್ತು ಉತ್ತಮ ಮೈಲೇಜ್, ಟಯರ್ ಬಾಳಿಕೆ ಬರುತ್ತವೆ. ಇದನ್ನು ಪರಿಶೀಲಿಸಲು ವೀಲ್ ಅಲೈನ್‌ಮೆಂಟ್ ಮಾಡಿಸಬೇಕು. ಪ್ರತಿ 5 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ಅಲೈನ್‌ಮೆಂಟ್ ಅಗತ್ಯ. ಸ್ಟೀರಿಂಗ್ ಸೆಟಪ್ ಸರಿಮಾಡಬೇಕು. (ಕಾರಿನ ಸ್ಟೀರಿಂಗ್ ಯಾವುದಾದರೂ ಒಂದು ಬದಿಗೆ ಎಳೆಯುತ್ತದೆ ಎಂದರೆ ವೀಲ್ ಅಲೈನ್‌ಮೆಂಟ್ ಹೋಗಿದೆ ಎಂದರ್ಥ. ಸಾಮಾನ್ಯವಾಗಿ ಎಡಭಾಗದ ಅಲೈನ್‌ಮೆಂಟ್ ಹೋಗುತ್ತದೆ. ಅಂದರೆ ನೀವು ಸ್ಟೀರಿಂಗ್ ಅನ್ನು ತುಸು ಬಲಭಾಗಕ್ಕೆ ಎಳೆಯಬೇಕಾಗುತ್ತದೆ) ಇನ್ನು ಪ್ರತಿ 10 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ರೊಟೇಶನ್ ಮಾಡಿಸಬೇಕು.(ಚಿತ್ರದಲ್ಲಿ ನೋಡಿ) ಜತೆಗೆ ಕಾರಿನ ವೀಲ್ ಸರಿಯಾಗಿ ತಿರುಗುತ್ತದೆಯೇ ಎಂದು ಪರಿಶೀಲಿಸಲು ಬ್ಯಾಲೆನ್ಸಿಂಗ್ ಪರಿಶೀಲನೆ ನಡೆಸಬೇಕು. ನಿಮ್ಮ ಕಾರು ಪಂಕ್ಚರ್ ಆದರೆ, ಅಥವಾ ದೊಡ್ಡ ಹೊಂಡ ಗುಂಡಿಗೆ ಬಿದ್ದ ಸಂದರ್ಭ ಅಲೈನ್‌ಮೆಂಟ್, ಬ್ಯಾಲೆನ್ಸಿಂಗ್ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
Advertisement