Advertisement
ಎಕ್ಸ್‌ಪೋ ಅವಧಿ- ಫೆ.7 ರಿಂದ ಫೆ.12ಭಾಗವಹಿಸಿದ ಮಂದಿ- 6,08,526
ಪ್ರದರ್ಶನಗೊಂಡ ಕಾರುಗಳು – 352
ಭಾಗವಹಿಸಿದ ಸಂಸ್ಥೆಗಳು – 108
ಹೊಸದಾಗಿ ಅನಾವರಣ – 70
ಎಲೆಕ್ಟ್ರಿಕ್- 35
ಕಾನ್ಸೆ±r… ಕಾರುಗಳ ಸಂಖ್ಯೆ – 15
ಗ್ರೇಟರ್ ನೋಯ್ಡಾದಲ್ಲಿ ನಡೆಯುವ ಈ ಆಟೋ ಎಕ್ಸ್‌ಪೋ ಗೆ, ಏಷ್ಯಾದಲ್ಲೇ ಅತ್ಯಂತ ದೊಡ್ಡ ಆಟೊಮೊಬೈಲ್ ಮೇಳ ಎಂಬ ಖ್ಯಾತಿ ಇದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್(ಎಸ್‌ಐಎಎಂ), ಆಟೋಮೋಟಿವ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಶನ್ ಆಫ್ ಇಂಡಿಯಾ (ಎಸಿಎಂಎ) ಮತ್ತು ಕಾನೆ#ಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಈ ಮೇಳದ ಆಯೋಜಕರು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮೇಳದಲ್ಲಿ ಹೊಸ ಹೊಸ ಕಾರುಗಳು, ಬೈಕುಗಳು ಸೇರಿದಂತೆ ಹಲವು ವಾಹನಗಳು ಅನಾವರಣಗೊಳ್ಳುತ್ತವೆ. ಹಾಗೆಯೇ ಕೆಲವೊಂದು ಕಾನ್ಸೆ±r… ಕಾರುಗಳೂ ಪ್ರದರ್ಶನಗೊಳ್ಳುತ್ತವೆ. ಈ ಎಕÕ…ಪೋದ ಮುಖ್ಯ ಉದ್ದೇಶವೇ ಕಂಪನಿಗಳ ಸರಕುಗಳನ್ನು ಪ್ರದರ್ಶಿಸುವುದು. ಇದರಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯೂ ಹೆಚ್ಚಿರುವುದರಿಂದ, ಕಂಪನಿಗಳಿಗೆ ಇದರಿಂದ ಲಾಭವೇ ಹೆಚ್ಚು. ಹೀಗಿದ್ದರೂ ಈ ಬಾರಿ ಟೊಯೊಟಾ, ಹೊಂಡಾ, ಬಿಎಂಡಬ್ಲೂ, ಆಡಿ ಕಾರು ಕಂಪನಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್, ಬಜಾಜ್ ಆಟೋ ಮತ್ತು ಟಿವಿಎಸ್ ಮೋಟಾರ್ ಕೋ.ನಂಥ ದ್ವಿಚಕ್ರ ವಾಹನ ತಯಾರಕರು ಗೈರು ಹಾಜರಾಗಿದ್ದು ಅಚ್ಚರಿಯ ಸಂಗತಿ!
Related Articles
ಈ ಬಾರಿಯ ಫೋರ್ಸ್ ಕಂಪನಿ ಹಾಕಿಕೊಂಡಿದ್ದ ಸ್ಟಾಲ್‌ನ ವಿಶೇಷ, ಹೊಸ ಗುರ್ಕಾ ಕಾರು. ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಂತಿರುವ ಇದು, ರೆಟ್ರೋ ಲುಕ್‌ನೊಂದಿಗೆ ಬರುತ್ತಿದೆ. ಇದು ಬಿಎಸ್6 ಮಾದರಿ ಎಂಜಿನ್. ಮುಂದಿನ ಮೇ ತಿಂಗಳಲ್ಲಿ ಇದರ ಬೆಲೆ ತಿಳಿಯಲಿದೆ.
Advertisement
ಗ್ರೇಟ್ ವಾಲ್ ಮೋಟಾರ್ ಚೀನಾದ ಈ ಕಂಪನಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರವೇಶಿಸಿದೆ. ತನ್ನದೇ ಹಾವೆಲ್ ಬ್ರಾಂಡ್ ಜತೆ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ. ವಿಷನ್ 2025 ಕಾನ್ಸೆ±r… ಜತೆಗೆ ಎಫ್5, ಎಫ್7 ಮತ್ತು ಒರಾ ಆರ್1 ಇವಿ ಕಾರುಗಳು ಅನಾವರಣಗೊಂಡಿವೆ. ಈ ಕಂಪನಿಯ ಮೊದಲ ಕಾರು ಈ ವರ್ಷಾಂತ್ಯಕ್ಕೆ ಭಾರತದ ರಸ್ತೆಗಿಳಿಯಬಹುದು. ಕಿಯಾ ಮೋಟಾರ್
ಈ ಬಾರಿಯ ಆಟೋ ಎಕ್ಸ್‌ಪೋ ಅನ್ನು ಸರಿಯಾಗಿ ಬಳಸಿಕೊಂಡಿದ್ದು ಕಿಯಾ ಮೋಟಾರ್ . ಇತ್ತೀಚೆಗಷ್ಟೇ ಇದು ಆಂಧ್ರಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಿತ್ತು. ಎಕ್ಸ್‌ಪೋ ದಲ್ಲಿ ಹೊಸ ಹೊಸ ಗಾಡಿಗಳನ್ನು ಅನಾವರಣ ಮಾಡಿತು. ಇದರಲ್ಲಿ ಮುಖ್ಯವಾಗಿ “ಕಾರ್ನಿವಲ್’ ಎಂಬ ಎಂಪಿವಿ ಕಾರನ್ನು ಪ್ರದರ್ಶಿಸಿತು. ಕಾಂಪ್ಯಾಕr… ಎಸ್‌ಯುವಿ ಕಾನ್ಸೆ±r… ಕಾರು “ದಿ ಸಾನೆಟ್…’ಅನ್ನೂ ಅನಾವರಣ ಮಾಡಿತು. ಜತೆಗೆ, ಸೆಲ್ಟೋಸ್ ಎಕ್ಸ್‌ಲೈನ್ ಕಾನ್ಸೆ±r…, ಸೌಲ್ ಇವಿ ಮತ್ತು ಇ- ನಿರೋ, ಎಕ್ಸೀಡ್ ಮತ್ತು ಸ್ಟೋನಿಕ್ ಕ್ರಾಸ್‌ಓವರ್ ಅನ್ನೂ ಪ್ರದರ್ಶಿಸಿತು. ಹೈಮಾ ಆಟೋಮೊಬೈಲ್
ಚೀನಾದ ಮತ್ತೂಂದು ಕಂಪನಿಯಾದ ಹೈಮಾ ಆಟೊಮೊಬೈಲ್ ಕಂಪನಿ, ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನೋಡುತ್ತಿದೆ. ಸಂಸ್ಥೆಯ ಕಾರುಗಳು 2022ರಲ್ಲಿ ಭಾರತ ಮಾರುಕಟ್ಟೆಗೆ ಬರಲಿವೆ. ಈ ಆಟೋಎಕ್ಸ್‌ಪೋದಲ್ಲಿ ಇ1 ಇವಿ, 8ಎಸ್ ಎಸ್‌ಯುವಿ, 7ಎಕ್ಸ್ ಎಂಪಿವಿಗಳನ್ನು ಹೈಮಾ ಪ್ರದರ್ಶಿಸಿತು. ಜನರಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತು. ಹುಂಡೈ ಮೋಟಾರ್
ಆಟೋ ಎಕ್ಸ್‌ಪೋದಲ್ಲಿ ದೊಡ್ಡ ಮಟ್ಟದಲ್ಲಿ ಭಾಗೀದಾರ ಸಂಸ್ಥೆಯಾಗಿರುವ ಹುಂಡೈ ಕಂಪನಿ, ಈ ಬಾರಿ ಸೆಕೆಂಡ್ ಜನರೇಶನ್‌ನ ಹುಂಡೈ ಕ್ರೀಟಾ ಅನ್ನು ಅನಾವರಣ ಮಾಡಿತು. ಜತೆಗೆ ಟಕ್ಸನ್‌ನ ಫೇಸ್‌ಲಿಫr… ಮಾದರಿ, ಗ್ರಾಂಡ್ ಐ10 ನಿಯೋಸ್‌ನ ಟಬೋì ಕಾರುಗಳು ಪ್ರದರ್ಶನಗೊಂಡವು. ಕ್ರೀಟಾ ಮತ್ತು ನಿಯೋಸ್ ಅನ್ನು ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅನಾವರಣ ಮಾಡಿದ್ದು ವಿಶೇಷ. ಇದರ ಜತೆಗೆ ಹುಂಡೈ ತನ್ನ ಕಾನ್ಸೆ±r… ಕಾರಾದ “ಲೇ ಫಿಲ್ ರೋಗ್’ ಅನ್ನೂ ಪ್ರದರ್ಶನ ಮಾಡಿತು. ಮಹೀಂದ್ರಾ
ಭವಿಷ್ಯದ ಓಡಾಟದ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸುತ್ತಿರುವ ಮಹೀಂದ್ರಾ ಕಂಪನಿ, ಪ್ರಮುಖವಾಗಿ ಎಲೆಕ್ಟ್ರಿಕ್ ಕಾರುಗಳತ್ತ ಗಮನ ನೀಡಿತು. ಎಕ್ಸ್‌ಪೋದಲ್ಲಿ ಇಕೆಯುವಿ100, ಮಹೀಂದ್ರಾ ಇಎಕ್ಸ್‌ಯುವಿ 300 ಅನಾವರಣಗೊಂಡವು. ಜತೆಗೆ ಫನ್‌ಸ್ಟರ್ ಕಾನ್ಸೆ±r… ಕಾರನ್ನೂ ಪ್ರದರ್ಶಿಸಿತು. ಮಾರುತಿ ಸುಜುಕಿ
ಈ ಬಾರಿಯ ವಿಶೇಷವೆಂದರೆ ಮಾರುತಿ ಸುಜುಕಿ ಒಟ್ಟು 17 ಕಾರುಗಳನ್ನು ಬಿಡುಗಡೆ ಮಾಡಿದ್ದು. ಜತೆಗೆ ಫ್ಯೂಚರೋ-ಇ ಕಾನ್ಸೆ±r… ಕಾರು ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ವಿಟಾರಾ ಬ್ರೆಝಾ ಫೇಸ್‌ಲಿಫr… ಮತ್ತು ಇಗ್ನಿಸ್ ಫೇಸ್‌ಲಿಫr… ಬಿಡುಗಡೆಯಾದ ಪ್ರಮುಖವಾದ ಕಾರುಗಳು. ಜತೆಗೆ 32 ಕಿ.ಮೀ. ಮೈಲೇಜ್ ಭರವಸೆ ನೀಡಿರುವ ಸುಜುಕಿ ಸ್ವಿಫr… ಹೈಬ್ರಿಡ್, ಜಿಮ್ಮಿ ಆಫ್ ರೋಡರ್ ಮತ್ತು ಮಾರುತಿ ಎಸ್‌ಪ್ರಸೊÕà ಎಸ್-ಸಿಎನ್‌ಜಿ ಕಾರುಗಳು ಅನಾವರಣಗೊಂಡವು. ಮರ್ಸಿಡಿಸ್ ಬೆಂಝ್
ಇಡೀ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದ ಪ್ರಮುಖ ಲಕ್ಷುರಿ ಕಾರು ತಯಾರಕ ಕಂಪನಿ. ಈ ಎಕ್ಸ್‌ಪೋದಲ್ಲಿ ಎಎಂಜಿ ಜಿಟಿ 4-ಡೋರ್ ಕೋಪ್ ಮತ್ತು ವಿ-ಕ್ಲಾಸ್ ಮಾರ್ಕೋಪೋಲೋ ಎಂಪಿವಿ ಕಾರುಗಳ ದರವನ್ನು ಬಿಡುಗಡೆ ಮಾಡಿತು. ಇದರ ಜತೆಗೆ ಎಎಂಜಿ ಎ35 ಫಾರ್ಮ್ ಮತ್ತು ಜಿಎಲ…ಎ ಎಸ್‌ಯುವಿಯನ್ನು ಅನಾವರಣ ಮಾಡಿತು. ಎಂ.ಜಿ. ಮೋಟಾರ್
ಎಂ.ಜಿ ಹೆಕ್ಟರ್ ಕಂಪನಿಯ ಇ200 ಇವಿ ಮತ್ತು ಆಟೋನೋಮಸ್(5ಜಿ ಸಂಪರ್ಕಿತ) ಮಾರ್ವೆಲ್‌ಎಕ್ಸ್ ಎಸ್‌ಯುವಿ ಕಾರುಗಳು ಇದೇ ಮೊದಲ ಬಾರಿಗೆ ಈ ಎಕÕ…ಪೋದಲ್ಲಿ ಬಿಡುಗಡೆಗೊಂಡವು. ಜತೆಗೆ ಎಂ.ಜಿ ಆರ್‌ಸಿ 6 ಕಾರು ಭಾರತದಲ್ಲಿ 2021ರ ಮಾರ್ಚ್‌ಗೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, 360 ಎಂ, ಜಿ10 ಕಾರುಗಳೂ ಎಕ್ಸ್‌ಪೋದಲ್ಲಿ ಅನಾವರಣಗೊಂಡವು. ಎಂಜಿ ಗ್ಲೋಸ್ಟರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಎಂಜಿ3 ಹ್ಯಾಚ್‌ಬ್ಯಾಕ್ ಕಾರುಗಳೂ ಪ್ರದರ್ಶನಗೊಂಡವು. ರೆನಾಲ್ಟ್
ರೆನಾಲ್ಟ್ ನ ಎಎಂಟಿ ತಂತ್ರಜ್ಞಾನದ ಟ್ರೈಬರ್, ಎಲೆಕ್ಟ್ರಿಕ್ ಕಾರಾದ ಕೆ-ಝಡ್‌ಇ ಮತ್ತು ಝೊà ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಪ್ರಮುಖ ಕಾರುಗಳು. ಜತೆಗೆ 1.3 ಲೀ. ಎಂಜಿನ್ ಸಾಮರ್ಥ್ಯದ ಟಬೋì ಪೆಟ್ರೋಲ್ ಎಂಜಿನ್‌ನ ಡಸ್ಟರ್ ಕೂಡ ಬಿಡುಗಡೆಯಾಗಿದ್ದು, ಏಪ್ರಿಲ್‌ನಿಂದ ಶೋ ರೂಂಗಳಲ್ಲಿ ಸಿಗಲಿದೆ. ಟ್ವಿಜಿ ಕಾರ್ಗೋ ಇವಿ ಮತ್ತು ಸಿಂಬೈಜ್ ಕಾನ್ಸೆ±r… ಕಾರುಗಳೂ ಪ್ರದರ್ಶನವಾದವು. ಟಾಟಾ ಮೋಟಾರ್
ಟಾಟಾ ಎಚ್‌ಬಿಎಕ್ಸ್, ರೀ ಬಾರ್ನ್ ಸಿಯಾರಾ ಇವಿ ಕಾರುಗಳು ಅನಾವರಣವಾದರೆ, ಟಾಟಾ ಹ್ಯಾರಿಯರ್‌ನ ಆಟೊಮ್ಯಾಟಿಕ್ ಆಪ್ಷನ್ ಇರುವ ಮತ್ತು ಬಿಎಸ್6 ಎಂಜಿನ್‌ನ ಕಾರಿನ ದರವನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಟಾಟಾ ಗ್ರಾವಿಟಾಸ್ 7 ಸೀಟಿನ ಎಸ್‌ಯುವಿಯನ್ನೂ ಅನಾವರಣ ಮಾಡಲಾಯಿತು. ಎಸ್‌ಯುವಿ- ಎಲೆಕ್ಟ್ರಿಕ್ ವಾಹನಗಳ ಮೇಲೆಯೇ ಕಣ್ಣು
ಜಾಗತಿಕ ತಾಪಮಾನದ ಬಿಸಿಯ ಕಾರಣದಿಂದಾಗಿ ಇಡೀ ಜಗತ್ತು ಎಲೆಕ್ಟ್ರಿಕ್ ವಾಹನಗಳತ್ತ ನೋಡುತ್ತಿದೆ. ಇದರ ನಡುವೆಯೇ ಒಂದು ತುಂಬು ಸಂಸಾರವನ್ನು ಇಕ್ಕಟ್ಟಿಲ್ಲದೇ ಹೇಗೆ ಕರೆದೊಯ್ಯಬಹುದು ಎಂಬ ಬಗ್ಗೆ ಭಾರತೀಯ ಗ್ರಾಹಕನ ಮನಸ್ಸು ಚಿಂತಿಸುತ್ತಿದೆ. ವಿಶೇಷವೆಂದರೆ ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಹೆಚ್ಚಾಗಿ ಗಮನ ಸೆಳೆದದ್ದು ಈ ಎರಡು ಅಂಶಗಳೇ. ಗ್ರಾಹಕರ ಈ ಮನದಾಳ ಅರಿತುಕೊಂಡಿರುವ ಕಂಪನಿಗಳು ಹೆಚ್ಚಾಗಿ ಎಸ್‌ಯುವಿ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸಿವೆ. ಹೊಸ ಕಂಪನಿಗಳು
ಚೀನಾದ ಗ್ರೇಟ್ ವಾಲ್ ಮೋಟಾರ್, ಹೈಮಾ ಆಟೊಮೊಬೈಲ್ ಹಾಗೂ ಒಲೆಕ್ಟಾ, ಕಿಯಾ ಮತ್ತು ಎಂ.ಜಿ ಹೆಕ್ಟರ್ ಸೋಮಶೇಖರ ಸಿ. ಜೆ.