Advertisement

ಕಾರು ಮಾರಾಟ ಲೋ ಗೇರ್‌ ನಲ್ಲಿ ಓಟ

11:30 AM Jun 25, 2019 | Sriram |

ಉತ್ಪಾದಕರು ಪ್ಯಾಸೆಂಜರ್‌ ಕಾರುಗಳ ಉತ್ಪಾದನೆಯನ್ನು ಕಡಿಮೆ ಮಾಡಿದ್ದಾರೆ. ಸುಮಾರು 35,000 ಕೋಟಿ ಮೌಲ್ಯದ ಐದು ಲಕ್ಷ ವಾಹನಗಳು ಮಾರಾಟವಾಗದೇ ಡೀಲರುಗಳ ಬಳಿ ಉಳಿದಿವೆ. ಪ್ರಮುಖ ವಾಹನ ಉತ್ಪಾದಕರಾದ ಮಾರುತಿ ಸುಜುಕಿ, ಹೋಂಡಾ , ಮಹೀಂದ್ರಾ, ಹುಂಡೈ ಮತ್ತು ನಿಸ್ಸಾನ್‌ ಕಂಪನಿಗಳು ಸ್ಟಾಕ್‌ ಕರಗುವವರೆಗೆ ಕೆಲವು ದಿನಗಳ ಕಾಲ ತಮ್ಮ ಉತ್ಪಾದನೆಗೆ ಬ್ರೇಕ್‌ ಹಾಕಿದ್ದಾರಂತೆ. ಡೀಲರ್‌ಗಳು ಮತ್ತು ಮಾರಾಟಗಾರರಿಂದ ಬರುವ ಫೀಡ್‌ ಬ್ಯಾಕ್‌ ಆದರಿಸಿ ಉತ್ಪಾದನೆಯನ್ನೇ ಕಡಿಮೆಮಾಡಿದ್ದಾರಂತೆ.

Advertisement

ಆಷಾಢ, ಶೂನ್ಯ ಮಾಸಗಳಲ್ಲಿ ವಾಹನ ಮಾರಾಟ ಮಳಿಗೆಗಳ ಕಡೆ ಕಣ್ಣು ಹಾಕಿ. ಎಲ್ಲವೂ ಬಿಕೋ ಅನ್ನುತ್ತಿರುತ್ತದೆ. ಸಿಬ್ಬಂದಿಗಳು ಸ್ವಲ್ಪ ರಿಲ್ಯಾಕ್ಸ್‌ಮೂಡ್‌ ನಲ್ಲಿ ಇರುತ್ತಾರೆ. ಯಾವುದೇ ವಿಶೇಷ ಚಟುವಟಿಕೆಗಳು ಕಾಣುವುದಿಲ್ಲ . ಕೆಲವು ಪಾರಂಪರಿಕವಾಗಿ ಬಂದ ನಂಬಿಕೆಗಳನ್ನು ಅನುಸರಿಸುವುದರಿಂದ ಈ ತಿಂಗಳುಗಳು ಶುಭದಾಯಕವಲ್ಲವೆಂದು ಹೊಸ ವಾಹನಗಳನ್ನು ಖರೀದಿಸುವುದಿಲ್ಲ. ಆದರೆ, ಈ ತಿಂಗಳುಗಳು ಇನ್ನೂ ದೂರವಿರುವಾಗಲೇ ವಾಹನ ಮಾರಾಟದ ವೇಗ ಕುಸಿತಗೊಂಡಿದೆ.

ಉತ್ಪಾದಕರು ಪ್ಯಾಸೆಂಜರ್‌ ಕಾರುಗಳ ಉತ್ಪಾದನೆಯನ್ನು ಕಡಿಮೆ ಮಾಡಿ¨ªಾರೆ. ಸುಮಾರು 35,000 ಕೋಟಿ ಮೌಲ್ಯದ ಐದು ಲಕ್ಷ ವಾಹನಗಳು ಮಾರಾಟವಾಗದೇ ಡೀಲರುಗಳ ಬಳಿ ಉಳಿದಿವೆ. ಪ್ರಮುಖ ವಾಹನ ಉತ್ಪಾದಕರಾದ ಮಾರುತಿ ಸುಜುಕಿ, ಹೋಂಡಾ , ಮಹೀಂದ್ರಾ, ಹುಂಡೈ ಮತ್ತು ನಿಸ್ಸಾನ್‌ ಕಂಪನಿಗಳು ಸ್ಟಾಕ್‌ ಕರಗುವವರೆಗೆ ಕೆಲವು ದಿನಗಳ ಕಾಲ ತಮ್ಮ ಉತ್ಪಾದನೆಗೆ ಬ್ರೇಕ್‌ ಹಾಕಿ¨ªಾರಂತೆ. ಡೀಲರ್‌ಗಳು ಮತ್ತು ಮಾರಾಟಗಾರರಿಂದ ಬರುವ ಫೀಡ್‌ ಬ್ಯಾಕ್‌ ಆದರಿಸಿ ಉತ್ಪಾದನೆಯನ್ನೇ ಕಡಿಮೆಮಾಡಿದ್ದಾರಂತೆ. ಈ ಬಗ್ಗೆ ಯಾವ ಕಂಪನಿಗಳೂ ಅಧಿಕೃತವಾಗಿ ಹೇಳದಿದ್ದರೂ, ಮಾರುತಿ ಸುಜುಕಿಯ ಮಾರಾಟ ಮೇ ತಿಂಗಳಿನಲ್ಲಿ ಶೇ. 18.90ರಷ್ಟು ಕಡಿಮೆ ಆಗಿದೆ ಅನ್ನೋದು ಮಾರ್ಕೆಟ್‌ನಲ್ಲಿ ಓಡಾಡುತ್ತಿರುವ ಮಾತು. ಕಳೆದ 8.10 ತಿಂಗಳಿನಿಂದ ಮಾರಾಟದಲ್ಲಿ ಏರುಪೇರು ಕಾಣುತ್ತಿದೆ.

ಕಳೆದ ತಿಂಗಳು ಶೇ. 25ರಷ್ಟು ಕುಸಿತ ಕಂಡಿರುವುದು ಎರಡು ದಶಕಗಳಲ್ಲಿ ದಾಖಲೆ ಇಳಿಕೆಯಂತೆ. 300 ಮಾರಾಟ ಮಳಿಗೆಗಳು ಮತ್ತು 205 ಡೀಲರ್‌ಗಳು ಬಾಗಿಲು ಮುಚ್ಚಿವೆಯಂತೆ. ಈ ಇಳಿತ ಕೇವಲ ಪ್ಯಾಸೆಂಜರ್‌ ಕಾರುಗಳಿಗೆ ಸೀಮಿತವಾಗಿಲ್ಲ. ದ್ವಿಚಕ್ರ ವಾಹನಗಳ ವಿಷಯದಲ್ಲೂ ಈ ಇಳಿತ ಗಮನಾರ್ಹವಾಗಿದೆ ಎಂದು ಕೆಲವು ರೇಟಿಂಗ್‌ ಎಜೆನ್ಸಿಗಳು ಹೇಳುತ್ತಿವೆ. ಸುಮಾರು 17,500 ಕೋಟಿ ಮೌಲ್ಯದ ದ್ವಿಚಕ್ರ ವಾಹನಗಳು ಡೀಲರ್‌ಗಳ ಬಳಿಯೇ ಉಳಿದಿವೆಯಂತೆ.

ಈ ಟ್ರೆಂಡ್‌ ಬಹುದಿನ ಉಳಿಯಲಾರದು. ಮತ್ತೆ ವಾಹನಗಳ ಮಾರಾಟ ವೇಗವನ್ನು ಪಡೆಯಬಹುದು ಎಂಬ ವಿಶ್ವಾಸವಿದ್ದರೂ, ಒಂದು ರೀತಿಯ ಅಳುಕು ಮತ್ತು ಭಯ ವಾಹನ ಉದ್ಯಮವನ್ನು ಆವರಿಸುತ್ತಿರುವಂತೆ ಕಾಣುತ್ತಿದೆ. ಪರಿಣಾಮ, 2008 ರ ಆರ್ಥಿಕ ಹಿಂಜರಿಕೆಯಷ್ಟು ಇರದಿದ್ದರೂ, ಉದ್ಯಮದಲ್ಲಿ ಒಂದು ರೀತಿಯ ಕಳವಳವಂತೂ ಇದ್ದೇ ಇದೆ.

Advertisement

ಕಾರಣಗಳೇನು?
ಇದೊಂದು ತಾತ್ಕಾಲಿಕ ಹಿನ್ನಡೆ. ಲೋಕಸಭಾ ಚುನಾವಣೆ ಫ‌ಲಿತಾಂಶದ ಬಗ್ಗೆ ಇದ್ದ ಊಹಾಪೋಹ ಕೂಡ ಮಾರಾಟದ ಏರುಪೇರಿಗೆ ಕಾರಣ ಎನ್ನುವ ಮಾತು ಇದೆ. ಈಗ ಸ್ಥಿರ ಸರ್ಕಾರ ಬಂದಿದ್ದು, ಮತ್ತೆ ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತದೆ ಎನ್ನುವ ಆಶಾವಾದ ಕೇಳಿಬರುತ್ತಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬಿಗಿಮುಷ್ಟಿ?
ಭಾರತದಲ್ಲಿ ವಾಹನ ಸಾಲ 3 ಟ್ರಿಲಿಯನ್‌ನಷ್ಟು ದೊಡ್ಡ ಉದ್ಯಮ. ಈ ಉದ್ಯಮಕ್ಕೆ ಸುಮಾರು ಮೂರನೇ ಒಂದು ಭಾಗದಷ್ಟು ಹಣಕಾಸು ಪೂರೈಕೆ ಬ್ಯಾಂಕ್‌ಗಳಿಂದ ಆಗುತ್ತದೆ. ಬಾಕಿ ಮೂರನೇ ಎರಡು ಭಾಗ ಹಣಕಾಸು ಪೂರೈಕೆಯ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಆಗುತ್ತದೆ. ಬ್ಯಾಂಕು ಗಳು ಮುಖ್ಯವಾಗಿ ವಾಹನ ಉತ್ಪಾದನಾ ಕಂಪನಿಗಳಿಗೆ ಫೈನಾನ್ಸ್‌ ಮಾಡುತ್ತವೆ. ಇನ್ನೊಂದು ಕಡೆ, ವಾಹನ ಖರೀದಿದಾರರಿಗೂ ಸಾಲ ನೀಡುತ್ತವೆ. ಇದರಲ್ಲಿ ಬಹುತೇಕ, ಖಾಸಗಿ ಹಣಕಾಸು ಸಂಸ್ಥೆಯವರದೇ ಮೇಲುಗೈ. ಕೆಲವು ಮೂಲದ ಪ್ರಕಾರ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಾಹನ ಖರೀದಿ ಸಾಲದ ಪ್ರಮಾಣವನ್ನು ಕಡಿಮೆ ಮಾಡಿವೆಯಂತೆ. ವಾಹನ ಖರೀದಿ ನಿಟ್ಟಿನಲ್ಲಿ ಅವರು funds flow   ಅನ್ನು ತಡೆ ಹಿಡಿದದ್ದು ವಾಹನ ಖರೀದಿಯ ಮೇಲೆ ಪರಿಣಾಮ ಬೀರಿದೆಯಂತೆ.

ಅತಿಯಾದ ತೆರಿಗೆ?
ಅತಿಯಾದ ತೆರಿಗೆ ಕೂಡ ವಾಹನಗಳ ಮಾರಾಟದ ಮೇಲೆ ತೀವ್ರವಾದ ಪರಿಣಾಮವನ್ನು ಬೀರಿದೆಯಂತೆ. ದೊಡ್ಡ, ಸಣ್ಣ ಕಾರುಗಳಿಗೆ ಶೇ.28ರ ತನಕ ಜಿಎಸ್‌ಟಿ ಇದ್ದು, ಅದಕ್ಕಿಂತ ಹೆಚ್ಚು ಜಿಎಸ್‌ಟಿ ತೆರಿಗೆಯನ್ನು ಹೊರುವ ಕಾರುಗಳು ನಮ್ಮಲ್ಲಿ ಇವೆ. ಇದು ಜಗತ್ತಿನಲ್ಲಿ ಅತಿ ಹೆಚ್ಚು ತೆರಿಗೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಈ ತೆರಿಗೆಯಲ್ಲಿ ಕನಿಷ್ಠ ಶೇ.10ರಷ್ಟು ಕಡಿಮೆಯಾದರೆ ವಾಹನಗಳ ಮಾರಾಟದಲ್ಲಿ ಹೆಚ್ಚಳವನ್ನು ಕಾಣಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ದ್ವಿ ಚಕ್ರ ವಾಹನಗಳಿಗೆ ಶೇ.10 ರಿಂದ 18ರ ವರೆಗೆ ಇದ್ದರೆ, ಕಾರುಗಳಿಗೆ ಶೇ.13ರಿಂದ 17ರ ವರೆಗೆ ಇದೆ. ಲಕ್ಷಗಟ್ಟಲೆ ಸುರಿದು ವಾಹನ ಕೊಳ್ಳುವಾಗ ಈ ತೆರಿಗೆ ಮಹಾ ಅಲ್ಲ ಎಂದು ಮೇಲುನೋಟಕ್ಕೆ ಹೇಳಿದರೂ, ಹಣದುಬ್ಬರದ ದಿನಗಳಲ್ಲಿ ಇದೂ ಚಿಂತಿಸುವ ವಿಷಯವಾಗಿದೆ.

ವಾಹನ ಸಾಲದಲ್ಲೂ ಸುಸ್ತಿ ಭಯ?
ಇನ್ನಿತರ ಸಾಲಗಳಂತೆ ವಾಹನ ಸಾಲದಲ್ಲಿಯೂ ಸುಸ್ತಿ ಇದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಶೇ.2% ಕಾರುಗಳಲ್ಲಿ ಶೇ.3-4ರಷ್ಟಿದೆ. ಈ ಸುಸ್ತಿಯ ಪ್ರಾಣ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ಗಳು ವಾಹನ ಸಾಲಗಳಿಂದ ದೂರ ನಿಲ್ಲುತ್ತಿವೆ. . ಹೊರಗಡೆಗೆ ಈ ತಳಮಳ ಕಾಣದಿದ್ದರೂ, ಮುಷ್ಟಿಯನ್ನು ಸ್ವಲ್ಪ ಬಿಗಿ ಮಾಡುತ್ತಿದ್ದಾರೆ ಮತ್ತು ಖರೀದಿದಾರನ ಮರುಪಾವತಿಯ ಯೋಗ್ಯತೆಯನ್ನು ಮತ್ತೂಮ್ಮೆ, ಮಗದೊಮ್ಮೆ ಒರೆಗೆ ಹಚ್ಚುತ್ತಿರುವುದು ಗ್ರಾಹಕರಿಗೆ ಕಿರಿಕಿರಿಯಾಗುತ್ತಿದೆ.

ಪಾರ್ಕಿಂಗ್‌ ಸಮಸ್ಯೆ:
ಇಂದು ಪಾರ್ಕಿಂಗ್‌ ಸಮಸ್ಯೆ ನಗರ- ಪಟ್ಟಣಗಳಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಈ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ 2-3 ಕಾರುಗಳು ಕಾಣುತ್ತಿದ್ದು, ಮನೆ ಒಳಗಡೆ ಒಂದು ಕಾರನ್ನು ನಿಲ್ಲಿಸುತ್ತಿದ್ದು, ಉಳಿದ ಕಾರುಗಳನ್ನು ರಸ್ತೆಯಲ್ಲಿಯೇ ಪಾರ್ಕ್‌ ಮಾಡುತ್ತಾರೆ. ಕೆಳ ಮತ್ತು ಮಧ್ಯಮ ವರ್ಗದವರು 30-40 ನಿವೇಶನದಲ್ಲಿ ಮನೆ ಕಟ್ಟುತ್ತಿದ್ದು, ದ್ವಿಚಕ್ರ ವಾಹನಗಳನ್ನು ಮ್ಯಾನೇಜ್‌ ಮಾಡುವುದೇ ಕಷ್ಟವಾಗಿರುವಾಗ, ಕಾರುಗಳಿಗೆ ಜಾಗ ಎಲ್ಲಿ? ಅಪಾರ್ಟ್‌ಮೆಂಟ್‌ ಗಳಲ್ಲಿ ಒಂದೊಂದು ಫ್ಲಾಟ್‌ ಗೆ ಒಂದೊಂದು ಪಾರ್ಕಿಂಗ್‌ ಸ್ಲಾಟ್‌ ಹಂಚಿಕೆಯಾಗುತ್ತಿದ್ದು, ಒಂದಕ್ಕಿಂತ ಹೆಚ್ಚು ಕಾರುಗಳಿದ್ದರೆ ನಿಲ್ಲಿಸುವದೆಲ್ಲಿ? ಎಮ್ಮೆ ಖರೀದಿಸುವದಕ್ಕಿಂತ ಅದನ್ನು ಕಟ್ಟಿಹಾಕುವುದೆಲ್ಲಿ ಎನ್ನುವುದೇ ಸಮಸ್ಯೆ ಅನ್ನುವಂತಾಗಿದೆ.

ಟ್ರಾಫಿಕ್‌ ಕಿರಿಕಿರಿ
ದೇಶದ ಬಹುತೇಕ ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಲ್ಬಣಿಸಿದ್ದು, ಕಚೇರಿಗಳಿಗೆ, ಬ್ಯುಸಿನೆಸ್‌ ಸ್ಥಳಗಳಿಗೆ, ಸ್ನೇಹಿತರ ಮನೆಗಳಿಗೆ , ಸಂಬಂಧಿಕರ ಮನೆಗಳಿಗೆ ವಾಹನ ಚಲಾಯಿಸಿಕೊಂಡು ಹೋಗುವುದು ಚಾಲೆಂಜ್‌ ಆಗಿದೆ. ವಾಹನಗಳನ್ನು ಮನೆಯ ಪೋರ್ಟಿಕೋದಲ್ಲಿ ಅಥವಾ ಗೇಟ್‌ನ ಹೊರಗೆ ಶೋಪೀಸ್‌ ಆಗಿ ನಿಲ್ಲಿಸುವ ಅನಿವಾರ್ಯತೆ ಕಾಣುತ್ತಿದೆ. ಓಡಿಸಲು ಸಾಧ್ಯವಾಗದಿದ್ದರೆ ಖರೀದಿಸುವುದಾದರೂ ಏಕೆ ಎನ್ನುವ ಮನೋಸ್ಥಿತಿ ಬಂದಿದೆ.

-ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next