Advertisement

ಮುಂದಿನ ಏಪ್ರಿಲ್‌ನಿಂದ ಕಾರುಗಳು ದುಬಾರಿ?

07:19 PM Oct 09, 2022 | Team Udayavani |

ನವದೆಹಲಿ: ವಾಹನಗಳು ಇನ್ನು ಮುಂದೆ ಇಂಗಾಲ ಹೊರಸೂಸುವಿಕೆ ಮಾನದಂಡಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಆಟೋಮೊಬೈಲ್‌ ಕಂಪನಿಗಳು ತಮ್ಮ ವಾಹನಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಏಪ್ರಿಲ್‌ನಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Advertisement

ತನ್ನ ಉತ್ಪನ್ನಗಳು ಭಾರತ್‌ ಸ್ಟೇಜ್‌ 6(ಬಿಎಸ್‌ 6)ರ ಎರಡನೇ ಹಂತವನ್ನು ಪೂರೈಸುವ ನಿಟ್ಟಿನಲ್ಲಿ ಭಾರತೀಯ ಅಟೋಮೊಬೈಲ್‌ ಉದ್ಯಮವು ಕೆಲಸ ಮಾಡುತ್ತಿದೆ. ವಾಹನ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಕಾರುಗಳು ಮತ್ತು ವಾಣಿಜ್ಯ ವಾಹನಗಳಿಗೆ ಹೆಚ್ಚು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಅಗತ್ಯವಿದೆ. ಇದರಿಂದ ಒಟ್ಟಾರೆ ತಯಾರಿಕಾ ವೆಚ್ಚದಲ್ಲಿ ಹೆಚ್ಚಳವಾಗಲಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನೈಜ ಸಮಯದ ಡ್ರೈವಿಂಗ್‌ ಎಮಿಷನ್‌ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ವಾಹನಗಳು ಆನ್‌ಬೋರ್ಡ್‌ ಸೆಲ್ಫ್ ಡಯಾಗ್ನಾಸ್ಟಿಕ್‌ ಸಾಧನವನ್ನು ಹೊಂದಿರಬೇಕಾಗುತ್ತದೆ. ಹೊರಸೂಸುವಿಕೆ ಮೇಲೆ ನಿಗಾ ಇಡಲು, ವೇಗವರ್ಧಕ ಪರಿವರ್ತಕ, ಆಮ್ಲಜನಕ ಸಂವೇದಕಗಳು ಸೇರಿದಂತೆ ಪ್ರಮುಖ ಭಾಗಗಳನ್ನು ಸಾಧನವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಹೊರಸೂಸುವಿಕೆ ಪ್ರಮಾಣ ಮೀರಿದರೆ, ವಾಹನವನ್ನು ಸರ್ವೀಸ್‌ಗೆ ಬಿಡಬೇಕೆಂದು ಎಚ್ಚರಿಕೆ ದೀಪಗಳ ಮೂಲಕ ಸಾಧನವು ಸೂಚಿಸಲಿದೆ. ಇಂಥ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಿಂದಾಗಿ ಮುಂದಿನ ವರ್ಷ ಕಾರುಗಳು ದುಬಾರಿಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next