Advertisement

ಮಣಿಪಾಲದಲ್ಲಿ ಮೂಡುತ್ತಿದೆ 700 ಕಾರುಗಳ ಪಾರ್ಕಿಂಗ್‌ ಸಂಕೀರ್ಣ

05:33 PM Jul 11, 2018 | Harsha Rao |

ಉಡುಪಿ: ಈಗ ಎಲ್ಲೆಲ್ಲೂ ವಾಹನ ಪಾರ್ಕಿಂಗ್‌ ಸಮಸ್ಯೆ ಇದೆ. ಮಣಿಪಾಲವೂ ಹೊರತೇನಲ್ಲ. ಮಣಿಪಾಲದ ಮಾಹೆ ವಿ.ವಿ.ಯವರು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಎಂಎಲ್‌ಸಿಪಿ (ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌). 

Advertisement

ಮಣಿಪಾಲ ಆಸ್ಪತ್ರೆ ಹೊರರೋಗಿ ವಿಭಾಗ ಮತ್ತು ಮರೆನಾ ಕ್ರೀಡಾ ಸಂಕೀರ್ಣದ ಬಳಿ ನಾಲ್ಕು ಅಂತಸ್ತುಗಳ (ತಳ + 3 ಅಂತಸ್ತು) ಸಂಕೀರ್ಣವೊಂದು ನಿರ್ಮಾಣಗೊಳ್ಳುತ್ತಿದೆ. 2.5 ಲಕ್ಷ ಚದರಡಿಯ ಈ ಸಂಕೀರ್ಣದಲ್ಲಿ ವಾಹನ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಇದೆ. ಮೂರು ಲಿಫ್ಟ್ ಮತ್ತು ಐದು ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. 

ಪರಿಸರಸ್ನೇಹಿ: ಎಲೆಕ್ಟ್ರಿಕ್‌ ವಾಹನಗಳಿಗೆ ಚಾರ್ಜ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಭಾಗದಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ. ಇದರಿಂದ 530 ಕೆ.ವಿ. ವಿದ್ಯುತ್‌ ಉತ್ಪಾದನೆಯಾಗಲಿದೆ. 

ಮಣಿಪಾಲ ಆಸ್ಪತ್ರೆಯ ಸಿಬಂದಿ, ರೋಗಿಗಳು, ರೋಗಿಗಳ ಸಂಬಂಧಿಕರಿಗೆ ಮಾತ್ರ ಇದರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಒಟ್ಟು 700 ಚತುಷ್ಕಕ್ರ ವಾಹನ (ಕಾರು), 500 ದ್ವಿಚಕ್ರ ವಾಹನಗಳನ್ನು ನಿಲುಗಡೆಗೊಳಿಸಲು ಅವಕಾಶವಿದೆ.

ಆಗಸ್ಟ್‌ನಲ್ಲಿ ಉದ್ಘಾಟನೆ
ವಾಹನ ಪಾರ್ಕಿಂಗ್‌ ಸಂಕೀರ್ಣದ ಕಾಮಗಾರಿ ಜುಲೈಯಲ್ಲಿ ಮುಕ್ತಾಯವಾಗಲಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ.
– ಡಾ|ಎಚ್‌.ಎಸ್‌. ಬಲ್ಲಾಳ್‌, ಸಹಕುಲಾಧಿಪತಿಗಳು,  ಮಣಿಪಾಲ ಮಾಹೆ ವಿ.ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next