Advertisement

ಕಾರು ಪಾರ್ಕ್‌ ಲೋಕಾರ್ಪಣೆ ನಾಳೆ

06:28 AM Feb 26, 2019 | Team Udayavani |

ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ನಿರ್ಮಿಸಲಾಗಿರುವ ರಾಜ್ಯದ ಮೊದಲ ಕಾರ್‌ ಉದ್ಯಾನವನ ಫೆ.27ರಂದು ಉದ್ಘಾಟನೆಯಾಗಲಿದೆ.

Advertisement

ನೂರು ಅಡಿ ಎತ್ತರಕ್ಕೆ ಜೋಡಿಸಲಾಗಿರುವ ವಿಂಟೇಜ್‌ ಕಾರುಗಳು, 3 ಸಾವಿರ ಜನರಿಗೆ ಆಸನ ವ್ಯವಸ್ಥೆ ಹಾಗೂ ಅತ್ಯಾಧುನಿಕ ಪರಿಕರಗಳನ್ನು ಹೊಂದಿರುವ ಬಯಲು ರಂಗ ಮಂದಿರ, ಗಿಣಿಗಳ ಸಂಗ್ರಹಾಲಯ, ಸಮುದ್ರದ ಮರಳಿನ ಮೇಲೆ ಮಕ್ಕಳಿಗೆ ಆಟ ಆಡಲು ಸ್ಯಾಂಡ್‌ ಪಿಟ್‌ ವ್ಯವಸ್ಥೆ ಕಾರು ಉದ್ಯಾನವನದ ವಿಶೇಷವಾಗಿವೆ ಎಂದು ಬಿಬಿಎಂಪಿ ಸದಸ್ಯ ರಾಮ್‌ ಮೋಹನರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲವಾರು ವರ್ಷಗಳಿಂದ ಬಳಕೆಯಾಗದೇ ಇರುವ ಜಾಗದಲ್ಲಿ ಕಾರು ಉದ್ಯಾನ ನಿರ್ಮಿಸಲಾಗಿದೆ. ಕಸ ಹಾಗೂ ವಾಹನಗಳ ಬಿಡಿ ಭಾಗಗಳನ್ನು ಬಳಕೆ ಮಾಡಿಕೊಂಡು ಒಂದು ಮುಕ್ಕಾಲು ಎಕರೆಯಲ್ಲಿ ಎಲ್ಲರನ್ನು ಸೆಳೆಯುವಂತಹ ಉದ್ಯಾನವನ ಮಾಡಲಾಗಿದೆ ಎಂದರು. ಬೊಮ್ಮನಹಳ್ಳಿಯ ಆರ್‌ಟಿಒ ಕಚೇರಿ ಎದುರು ಇರುವ ಉದ್ಯಾನವನವನ್ನು ಬುಧವಾರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಲೋಕಾರ್ಪಣೆ ಮಾಡುವರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next