Advertisement
ಪ್ರಯಾಣಕ್ಕೆ ಮುನ್ನ ಚೆನ್ನಾಗಿ ಒರೆಸಿ ಯಾವುದೇ ಪ್ರಯಾಣಕ್ಕೆ ಮುನ್ನ ಕಾರಿನ ಗಾಜಿಗೆ ತುಸು ನೀರು ಹಾಕಿ ಮೆದುವಾದ ಸ್ಪಾಂಜ್‌ನಿಂದ ಅಥವಾ ನೀರು ಹೀರಿಕೊಳ್ಳುವ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಿಂದ ಗಾಜಿನಲ್ಲಿರುವ ಕಲೆಗಳು ಹೋಗುತ್ತವೆ. ಕೆಸರು, ಮರಳಿನ ಕಣಗಳು ಇಲ್ಲವಾಗುತ್ತವೆ. ಚಾಲಕನಿಗೆ ಸ್ಪಷ್ಟವಾಗಿ ಹೊರಗಡೆ ಕಾಣುತ್ತದೆ.
ಕಾರಿನ ಡೋರ್ ದಢಾರನೆ ಹಾಕುವ ಅಭ್ಯಾಸ ನಮಗಿದೆ. ಆದರೆ ಈಗಿನ ಕಾರುಗಳಲ್ಲಿ ಅಷ್ಟು ಬಲಯುತವಾಗಿ ಡೋರ್ ಹಾಕಬೇಕಾದ್ದಿಲ್ಲ. ಡೋರ್ ಬೀಳಲ್ಲ ಎಂಬ ಸಂಶಯದಿಂದಲೂ ಹೀಗೆ ಮಾಡಬಹುದು. ಆದರೆ ಅಷ್ಟು ಬಲಯುತವಾಗಿ ಡೋರ್ ಹಾಕುವುದರಿಂದ ಡೋರ್ ಅದುರಿ ಕಾರಿನ ಕಿಟಕಿಗಳ ಗಾಜಿನ ರಬ್ಬರ್ ಸಡಿಲವಾಗುತ್ತದೆ. ಇದರಿಂದ ಕ್ರಮೇಣ ಗಾಜು ಸಡಿಲವಾಗಿ ಹಾನಿಯಾಗಬಹುದು. ಸರಿಯಾದ ಕ್ಲೀನರ್ ಬಳಸಿ
ಕಾರಿನ ಗಾಜು ಒರೆಸಲು ಸರಿಯಾದ ರೀತಿಯ ಬಟ್ಟೆ, ಕ್ಲೀನರ್, ಸ್ಪಾಂಜ್ ಅನ್ನು ಉಪಯೋಗಿಸಿ. ಮಣ್ಣು, ಮರಳಿನ ಕಣ ಸೇರಿದ ಕೊಳೆಯಾದ ಬಟ್ಟೆ, ಅತಿ ಹಾನಿಕರ ರಾಸಾಯನಿಕ ಇತ್ಯಾದಿಗಳನ್ನು ಶುಚಿಗೊಳಿಸಲು ಬಳಸದಿರಿ. ಗಾಜು ಶುಚಿಗೊಳಿಸಲು ಶ್ಯಾಂಪೂ ಅತಿ ಕಡಿಮೆ ಖರ್ಚಿನ ಸುಲಭ ಉಪಾಯವಾಗಿದೆ.
Related Articles
ರಸ್ತೆಯಲ್ಲಿ ನಿಮ್ಮ ಕಾರು ಚಾಲನೆ ವೇಳೆ ಮುಂದೆ ಮರಳು/ಕಲ್ಲಿನ ಲಾರಿ ಹೋಗುತ್ತಿದ್ದರೆ ಜಾಗ್ರತೆಯಾಗಿರಿ. ಅವುಗಳಿಂದ ಸಣ್ಣ ಕಲ್ಲಿನ ಕಣಗಳು, ಮರಳಿನ ಕಣಗಳು ಗಾಜಿಗೆ ಬೀಳುವ ಅಪಾಯವಿರುತ್ತದೆ. ನಿರಂತರವಾಗಿ ಮರಳು ಗಾಜಿಗೆ ಬಿದ್ದರೆ ಗಾಜು ಒಡೆದು ಹೋಗುವ, ಬಿರುಕುಗಳು ಸೃಷ್ಟಿಯಾಗುವ ಅಪಾಯಗಳೂ ಇವೆ.
Advertisement
ವೈಪರ್‌ಬ್ಲೇಡ್ ಬದಲಾಯಿಸಿ ವೈಪರ್‌ಬ್ಲೇಡ್‌ಗಳು ಹಳತಾದಂತೆ ಗಡುಸಾಗುತ್ತವೆ. ಇದರಿಂದ ಗಾಜಿನ ಮೇಲೆ ಶಾಶ್ವತ ಕಲೆಗಳನ್ನು ಉಂಟು ಮಾಡುತ್ತವೆ. ಹೋಗದಿದ್ದರೆ, ಕೂಡಲೇ ಬದಲಾಯಿಸಿ. - ಈಶ