ಹೆಬ್ರಿ: ಕಾರು ಹಾಗೂ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಬುಧವಾರ ಮಧ್ಯಾಹ್ನ ಹಿರಿಯಡ್ಕದ ಗಂಪ ಎಂಬಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದ್ದು, ಕಾರು ಚಲಾಯಿಸುತ್ತಿದ್ದ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಮಣಿಪಾಲದಿಂದ ಮೂಡಬಿದ್ರೆ ಕಡೆ ಹೋಗುತ್ತಿದ್ದರೆ, ಟಿಪ್ಪರ್ ವಾಹನವು ಕಾರ್ಕಳದಿಂದ ಹಿರಿಯಡಕ ಕಡೆ ಬರುತ್ತಿತ್ತು. ಹಿರಿಯಡಕ ಗಂಪ ಬಳಿ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಇದ್ದ ಇಬ್ಬರು ವೈದ್ಯರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತ್ರೀವತೆಯಿಂದ ಕಾರು ಚಾಲಾಯಿಸುತ್ತಿದ ಡಾಕ್ಟರ್ ಟಿಪ್ಪರ್ ಒಳಗೆ ಸಿಲುಕಿ ಹಾಕಿಕೊಂಡಿದ್ದು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗಿದೆ.
ಗಾಯಗೊಂಡಿರುವ ವೈದ್ಯರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.