ಬ್ರಹ್ಮಾವರ: ಹೆದ್ದಾರಿ ದಾಟುತ್ತಿದ್ದ ಸೈಕಲ್ ಸವಾರನಿಗೆ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ದೂಪದಕಟ್ಟೆ ಬಳಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಬೈಕಾಡಿ ನಿವಾಸಿ ಮಹಾಬಲ ( 50 ವ) ಎಂದು ಗುರುತಿಸಲಾಗಿದೆ.
ಕಾರು ಬ್ರಹ್ಮಾವರದಿಂದ ಉಡುಪಿಗೆ ಸಾಗುತ್ತಿದ್ದರು. ಈ ವೇಳೆಗೆ ದೂಪದಕಟ್ಟೆ ಪೆಟ್ರೋಲ್ ಪಂಪ್ ಬಳಿ ಅಪಘಾತ ನಡೆದಿದೆ. ತೀವ್ರ ಗಾಯಗೊಂಡು ಹೆದ್ದಾರಿ ನಡುವಿನಲ್ಲಿ ಬಿದ್ದಿದ್ದ ಮಹಾಬಲ ಅವರನ್ನು ಕೂಡಲೇ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರಗೆ ಸಾಗಿಸಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.