ತುಮಕೂರು: ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾ ತಾಲೂಕು ತರೂರ್ ಗೇಟ್ ಬಳಿ ನಡೆದಿದೆ.
ಕಡವಿಗೆರೆ ಗ್ರಾಮದ ಕಾರು ಚಾಲಕ ಅವಿನಾಶ್ ( 28 ), ಮಗಳು ಪ್ರಣಂತಿ(5) ಮೃತ ದುರ್ದೈವಿಗಳು.
ತುಮಕೂರಿನ ಕಡೆಗೆ ತೆರಳುತಿದ್ದ ವೇಳೆ ಕಾರು ಹಿಂದಿನಿಂದ ಲಾರಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಚಾಲಕ ಅವಿನಾಶ್ ಹಾಗೂ ಪ್ರಣಂತಿ ಸ್ಥಳದಲ್ಲೇ ಮೃತಪಟ್ಟಿದ್ದು, ಸೌಮ್ಯ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಪ್ರಿಯತಮೆ ಬಯಸಿ ಸುಪಾರಿ ಕೊಟ್ಟು, ಭಯದಿಂದ ಆತಹತ್ಯೆ ಮಾಡಿಕೊಂಡ!
ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.