Advertisement

ಏ.1 ರಿಂದ ಕಾರು, ಬೈಕ್‌ ತುಟ್ಟಿ? ಲೋಹ, ಬಿಡಿಭಾಗಗಳು, ಸರಕು ಸಾಗಣೆ ವೆಚ್ಚ ಹೆಚ್ಚಳವೇ ಕಾರಣ 

07:26 PM Mar 24, 2021 | Team Udayavani |

ನವದೆಹಲಿ: ಲೋಹ ಹಾಗೂ ವಾಹನ ಬಿಡಿಭಾಗಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೈಕು ಮತ್ತು ಕಾರುಗಳ ಬೆಲೆ ಹೆಚ್ಚಾಗಲಿವೆ ಎಂದು ಮೂಲಗಳು ತಿಳಿಸಿವೆ. ಜನವರಿಯಲ್ಲಿ ಕಾರು, ಬೈಕುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಮತ್ತೆ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಲಾಕ್‌ಡೌನ್‌ ಇದ್ದರೂ, ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸಿದ್ದವು.

Advertisement

ಲೋಹಗಳ ಬಿಡಿಭಾಗಗಳ ಬೆಲೆ ಹೆಚ್ಚಳವಾಗಿರುವುದು ಒಂದು ಕಡೆಯಾದರೆ, ಮತ್ತೂಂದೆಡೆ ವಾಹನಕ್ಕೆ ಬೇಕಾಗುವ ಲೋಹದ ಬಿಡಿಭಾಗಗಳ ಸರಬರಾಜು ಜಾಗತಿಕ ಮಟ್ಟದಲ್ಲಿ ಕುಂಠಿತವಾಗಿದೆ. ತೈಲ ದರ ಏರಿಕೆಯಿಂದಾಗಿ ವಾಹನ ಬಿಡಿಭಾಗಗಳ ಸರಕು ಸಾಗಣೆ ವೆಚ್ಚವೂ ಅಧಿಕವಾಗಿದೆ. ಆ ಕಾರಣಗಳಿಂದಾಗಿಯೂ ವಾಹನಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲು ಕಂಪನಿಗಳು ಮುಂದಾಗಿವೆ ಎನ್ನಲಾಗಿದೆ.

ಇದನ್ನೂ ಓದಿ :“ದಿಯಾ” ಹಿಂದಿ ರಿಮೇಕ್ ನಲ್ಲೂ ನಾನೇ ಹೀರೋ: ನಟ ಪ್ರಥ್ವಿ ಅಂಬಾರ್

ಈಗಾಗಲೇ, ಜನಪ್ರಿಯ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಝುಕಿ ಬರುವ ಏಪ್ರಿಲ್‌ನಿಂದ ತನ್ನ ವಿವಿಧ ಮಾಡೆಲ್‌ಗ‌ಳ ಬೆಲೆಯನ್ನು ಹೆಚ್ಚಿಸಲಿರುವುದಾಗಿ ಘೋಷಿಸಿದೆ. ಉಳಿದ ಕಾರು ಕಂಪನಿಗಳೂ ಇದೇ ಹಾದಿ ಹಿಡಿಯುವ ಸಾಧ್ಯತೆಗಳಿವೆ. ಕಾರು, ಬೈಕುಗಳಲ್ಲಿ ಬಿಎಸ್‌4 ಇಂಜಿನ್‌ ಬದಲಿಗೆ ಬಿಎಸ್‌6 ಇಂಜಿನ್‌ ಉಪಯೋಗಿಸಲು ಮುಂದಾಗಿದ್ದರಿಂದ ಆಗ ಬೆಲೆ ಹೆಚ್ಚಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next