Advertisement

ಸ್ನೇಹಿತನಿಗೆ ವಂಚಿಸಿದವನ ಸೆರೆ

10:56 AM Sep 06, 2018 | |

ಬೆಂಗಳೂರು: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸ್ನೇಹಿತನಿಗೆ ಕೋಟ್ಯಂತರ ರೂ. ವಂಚಿಸಿದ ಐಐಟಿ ಪದವೀಧರನನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಇಎಲ್‌ ಲೇಔಟ್‌ನ ಅಭಿಲಾಷ್‌ ರಾವ್‌
ಮಾಗಣ್ಣ (35) ಬಂಧಿತ. ಈತನಿಂದ 12 ಲ್ಯಾಪ್‌ಟಾಪ್‌ಗ್ಳು, 7 ಡೆಬಿಟ್‌ ಕಾರ್ಡ್‌, ಒಂದು ಮೊಬೈಲ್‌ ಸೇರಿ 7 ಲಕ್ಷ ರೂ.
ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಸಾಹಿರಾ ಎಂಬುವವರು ದೂರು ನೀಡಿದ್ದರು.

Advertisement

ಸಾಹಿರಾ ಅವರ ಪುತ್ರ ನಬಿಲ್‌ ಹಾಗೂ ಆರೋಪಿ ಕೆಲ ವರ್ಷಗಳ ಹಿಂದೆ ಚೆನ್ನೈನ ಐಐಟಿಯಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಬಳಿಕ ನಬಿಲ್‌ ಇಕ್ರಾ ಎಜುಕೇಷನ್‌ ಎಂಬ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯೊಂದನ್ನು ತೆರೆದಿದ್ದರು. ಇದೇ ವೇಳೆ ಕೆಲಸ ಇಲ್ಲದೆ ಮನೆಯಲ್ಲೇ ಇದ್ದ ಆರೋಪಿಗೆ ನಬಿಲ್‌ ಇಂದಿರಾನಗರದಲ್ಲಿರುವ ತಮ್ಮ  ಸ್ಥೆಯಲ್ಲಿ ಕೆಲಸ ಕೊಡಿಸಿದ್ದರು. ಆರಂಭದಲ್ಲಿ ಮ್ಯಾನೆಜ್‌ಮೆಂಟ್‌ ಕನ್ಸಲ್ಟೆಂಟ್‌ ಹುದ್ದೆ ನಿರ್ವಹಿಸುತ್ತಿದ್ದ ಆರೋಪಿ, 2014ರಿಂದ 2018ರವರೆಗೆ ಇಂಡಿಪೆಂಡೆಂಟ್‌ ಪೇಡ್‌ ಡೈರೆಕ್ಟರ್‌ ಹುದ್ದೆ ನಿರ್ವಹಿಸಿಕೊಂಡಿದ್ದ. ಹೀಗಾಗಿ ದುಬೈನಲ್ಲಿ ವಾಸವಾಗಿದ್ದ ನಬಿಲ್‌ ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಸಂಸ್ಥೆ ಅಭಿವೃದ್ಧಿಗೆ ಹಣ ಕೊಡುತ್ತಿದ್ದರು.

ಇದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ, ಸಂಸ್ಥೆಯ ಅಭಿವೃದ್ಧಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ನೇಹಿತನಿಂದ ಕೋಟಿಗಟ್ಟಲೇ ಹಣ ಪಡೆದುಕೊಳ್ಳುತ್ತಿದ್ದ. ನಂತರ ಯಾರಿಗೂ ತಿಳಿಯದ್ದಂತೆ ಕಂಪನಿಯ ಹೆಸರಿನಲ್ಲಿ ಮತ್ತೂಂದು ಖಾತೆ ತೆರೆದು ಹಣ ವರ್ಗಾಹಿಸಿಕೊಂಡು ಇದುವರೆಗೂ 7.5 ಕೋಟಿ ರೂ. ವಂಚಿಸಿದ್ದ. ಜತೆಗೆ ಕಂಪನಿಯ ಡಾಟಾಗಳನ್ನು ಕಳ್ಳತನ ಮಾಡಿದ್ದ ಎಂದು ಆರೋಪಿಸಿ ನಬಿಲ್‌ ತಾಯಿ ಸಾಹಿರಾ, ಇಂದಿರಾನಗರ
ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪರಿಶೀಲನೆ ವೇಳೆ ಕೃತ್ಯ ಪತ್ತೆ ಕೆಲ ತಿಂಗಳ ಹಿಂದೆ ದುಬೈನಲ್ಲಿದ್ದ ನಬಿಲ್‌ ಬೆಂಗಳೂರಿಗೆ ಬಂದಿದ್ದು, ಸಂಸ್ಥೆಯ ಎಲ್ಲ ಹಣಕಾಸು ವ್ಯವಹಾರ ಕುರಿತ ದಾಖಲೆಗಳನ್ನು ಪರಿಶೀಲಿಸುವಂತೆ ತಮ್ಮ ಲೆಕ್ಕಪರಿಶೋಧಕರಿಗೆ ಸೂಚಿಸಿದ್ದರು. ದಾಖಲೆಗಳ ಪರಿಶೀಲನೆ ವೇಳೆ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ. ಅನುಮಾನಗೊಂಡು ಆರೋಪಿ ದುಬೈಗೆ ಕಳುಹಿಸಿದ್ದ ಎಲ್ಲ ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸಿದಾಗ ಎಲ್ಲವೂ ನಕಲಿ ಎಂಬುದು ಗೊತ್ತಾಗಿದೆ. ಈ ಮೂಲಕ 7.5 ಕೋಟಿ ರೂ. ವಂಚನೆ ಮಾಡಿರುವುದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next