Advertisement

ಕೆಲಸ ಕೊಡಿಸುವುದಾಗಿ ವಂಚಿಸಿದವನ ಸೆರೆ

03:20 PM Aug 05, 2018 | Team Udayavani |

ಬೆಂಗಳೂರು: ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ ಎಂದು ಜಾಹೀರಾತು ನೀಡಿ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಣನಕುಂಟೆ ನಿವಾಸಿ ರೋಹಿತ್‌(26) ಬಂಧಿತ. ಆರೋಪಿ ಎಂಬಿಎ ಪದವೀಧರನಾಗಿದ್ದು, ಇದುವರೆಗೂ 110 ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕೆಲ ತಿಂಗಳ ಹಿಂದಷ್ಟೇ ಜಾಬ್‌ ಫಾರ್‌ ಶ್ಯೂರ್‌ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದ ಆರೋಪಿ, ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು. ಬರವಣೆಗೆ ಕೆಲಸ ಇರುತ್ತದೆ. ಪುಟದ ಲೆಕ್ಕದಲ್ಲಿ ಹಣ ನೀಡಲಾಗುವುದು ಎಂದೆಲ್ಲ ಜಾಹೀರಾತು ನೀಡಿದ್ದ. ಇದಕ್ಕಾಗಿ ನೋಂದಣಿ ಶುಲ್ಕ ಎಂದು ತಲಾ 4 ಸಾವಿರ ರೂ. ಸಂಗ್ರಹಿಸಿದ್ದ. ಇದನ್ನು ನಂಬಿದ ನೂರಾರು ಮಂದಿ ಹಣ ಪಾವತಿಸಿದ್ದಾರೆ.

ಆರಂಭದಲ್ಲಿ ನೊಂದಾಯಿಸಿದ ಮಂದಿಗೆ ಪ್ರತಿತಿಂಗಳು ತಪ್ಪದೆ ಹಣ ಪಾವತಿ ಮಾಡಿ ವಿಶ್ವಾಸಗಳಿಸಿದ್ದ. ಬಳಿಕ ಇದೇ ಮಂದಿಗೆ ಇನ್ನಷ್ಟು ಸದಸ್ಯರನ್ನು ನೇಮಿಸಿದರೆ ಸಾವಿರ ರೂ. ಕಮಿಷನ್‌ ನೀಡುವುದಾಗಿ ಹೇಳಿದ್ದ. ಇದನ್ನು  ನಂಬಿದ ಕೆಲ ಮಂದಿ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆತಂದು ನೊಂದಾಯಿಸಿದ್ದಾರೆ. ಬಳಿಕ ಆರೋಪಿ ಕೆಲಸ ಕೊಡದೆ, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾನೆ ಈ ಸಂಬಂಧ ವಂಚನೆಗೊಳಗಾದವರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next