Advertisement
ಕೆಂಗೇರಿಯ ಕೆ.ಎಚ್ಬಿ ಕಾಲೋನಿಯ ನಿವಾಸಿಯಾಗಿರುವ ಆರೋಪಿ ರಿಜ್ವಾನ್, ಸ್ವಂತ ಬಟ್ಟೆ ಮಳಿಗೆ ಇಟ್ಟುಕೊಂಡಿದ್ದಾನೆ. ಜೊತೆಗೆ ಕಳೆದ ಒಂದು ವರ್ಷದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ, ಬ್ರೌನ್ಶುಗರ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಅವರ ಕಾಲೇಜು ಹತ್ತಿರವೇ ತೆರಳಿ ಬ್ರೌನ್ಶುಗರ್ ಹಾಗೂ ಮಾದಕ ವಸ್ತುಗಳನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ 1300 ರಿಂದ 1400 ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಬೆಂಗಳೂರು: ಚರ್ಚ್ ಸ್ಟ್ರೀಟ್ನಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಪೋಟೋ ತೆಗೆದಿದ್ದ ಸೇಂಥಿಲ್ ಎಂಬಾತ ಇದೀಗ ಪೊಲೀ ಸರ ಅತಿಥಿಯಾಗಿದ್ದಾನೆ. ಗುರುವಾರ ಕಾಲೇಜು ವಿದ್ಯಾರ್ಥಿನಿ ಹಾಗೂ ಖಾಸಗಿ ವಾಹಿನಿಯ ವರದಿಗಾರ್ತಿ ಸುದ್ದಿ ಸಂಗ್ರಹದ ಸಲುವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ತೆರಳಿದ್ದರು.
Related Articles
Advertisement
ಈ ವೇಳೆ ಆತನ ಮೊಬೈಲ್ನಲ್ಲಿ ವಿದ್ಯಾರ್ಥಿನಿಯ ಹಲವು ಪೋಟೋಗಳನ್ನು ತೆಗೆದಿರು ವುದು ಕಂಡು ಬಂದಿದ್ದು, ಈ ವಿಚಾರ ವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ವಿದ್ಯಾ ರ್ಥಿನಿ ಪೊಲೀಸರಿಗೆ ಕರೆಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸೇಂಥಿಲ್ನನ್ನು ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.