Advertisement
ರಾಯಚೂರು ಮೂಲದ ಶಿವರಾಜ್(25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಹೆಣ್ಣೂರು ಜಂಕ್ಷನ್‌ನ ಮಸೀದಿ ಬಳಿ ಬುರ್ಖಾ ಧರಿಸಿ, ಕೈಯಲ್ಲಿ ಮಚ್ಚು ಹಿಡಿದು ಓಡಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್‌ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲಗಾರರಿಂದ ತಪ್ಪಿಸಿಕೊಳ್ಳಲು ಈ ರೀತಿ ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಹೀಗಾಗಿ ಹೆಣ್ಣೂರಿನ ಸ್ನೇಹಿತ ಜಗನ್ನಾಥ್ ನೋಡಲು ಬುರ್ಖಾ ಧರಿಸಿದ್ದೆ, ಈತ ನನಗೆ 20 ಲಕ್ಷ ರೂ. ಸಾಲ ಕೊಟ್ಟಿದ್ದ ಎಂದು ಹೇಳಿದ್ದಾನೆ. ಆದರೆ, ಕೈಯಲ್ಲಿ ಮಚ್ಚು ಯಾಕೆ ಹಿಡಿದಿದ್ದೆ ಎಂಬುದಕ್ಕೆ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಬಾರಿ ಆತ್ಮಹತ್ಯೆಗೆ ಯತ್ನ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಶಿವರಾಜ್ ಯತ್ನಿಸಿದ್ದ. ಈ ವೇಳೆ ಸಹದ್ಯೋಗಿ ಜಗನ್ನಾಥ್, ಶಿವಾರಾಜ್‌ಗೆ ಧೈರ್ಯ ಹೇಳಿ ಮತ್ತೂಮ್ಮೆ ಈ ರೀತಿ ಮಾಡಿಕೊಳ್ಳದಂತೆ ಸಲಹೆ ನೀಡಿದ್ದರು. ಜತೆಗೆ 20 ಲಕ್ಷ ರೂ. ಹಣ ಸಾಲ ಕೂಡ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಯತ್ನ?: 20 ಲಕ್ಷ ರೂ. ಸಾಲ ನೀಡಿದ್ದ ಜಗನ್ನಾಥ್‌ನನ್ನು ಹತ್ಯೆ ಮಾಡಲು ಮಚ್ಚು ಕೊಂಡೊಯ್ಯುತ್ತಿದ್ದನೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಜಗನ್ನಾಥ್ ಪೊಲೀಸರ ಬಳಿ ಹೇಳಿಕೆ ಕೊಡುವಾಗ ಈ ಹಿಂದೆ ಶಿವರಾಜ್ ತಾನು ಇಲ್ಲದ ವೇಳೆ ಮನೆಗೆ ಬಂದು ಪತ್ನಿ ಜತೆ ಮಾತನಾಡಿಕೊಂಡು ಹೋಗಿದ್ದ ಎಂದು ಹೇಳಿದ್ದಾರೆ. ಹೀಗಾಗಿ, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.